ಆ್ಯಪ್ನಗರ

ಕ್ರಿಕೆಟರ್ಸ್, ಬಾಲಿವುಡ್ ನಟರಿಗೆ ಇಮ್ರಾನ್ ಖಾನ್ ಆಹ್ವಾನ; ಮೋದಿಯನ್ನು ಆಹ್ವಾನಿಸಲು ಇನ್ನೂ ಸಿಕ್ಕಿಲ್ಲ ಒಪ್ಪಿಗೆ

​ ಪಾಕಿಸ್ತಾನದ ನೂತನ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್‌ ಪ್ರಮಾಣ ವಚನ ಸ್ವೀಕಾರಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸುವ ಬಗ್ಗೆ ಅಲ್ಲಿನ ಸರಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ, ಪಾಕಿಸ್ತಾನ ತೆಹ್ರೀಕ್ - ಇ - ಇನ್ಸಾಫ್‌ ಪಕ್ಷ ಈಗಾಗ್ಲೇ ಬಾಲಿವುಡ್ ಹಾಗೂ ಭಾರತದ ಕ್ರಿಕೆಟ್‌ನ ಕೆಲ ಖ್ಯಾತನಾಮರಿಗೆ ಆಹ್ವಾನ ಕೊಟ್ಟಿದೆ. ಆಗಸ್ಟ್ 11 ರಂದು ಪಾಕ್‌ನ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಕ್ಷದ ವತಿಯಿಂದ ಆಹ್ವಾನ ನೀಡಲಾಗಿದೆ.

TIMESOFINDIA.COM 2 Aug 2018, 12:44 pm
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್‌ ಪ್ರಮಾಣ ವಚನ ಸ್ವೀಕಾರಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸುವ ಬಗ್ಗೆ ಅಲ್ಲಿನ ಸರಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ಆದರೆ, ಪಾಕಿಸ್ತಾನ ತೆಹ್ರೀಕ್ - ಇ - ಇನ್ಸಾಫ್‌ ಪಕ್ಷ ಈಗಾಗ್ಲೇ ಬಾಲಿವುಡ್ ಹಾಗೂ ಭಾರತದ ಕ್ರಿಕೆಟ್‌ನ ಕೆಲ ಖ್ಯಾತನಾಮರಿಗೆ ಆಹ್ವಾನ ಕೊಟ್ಟಿದೆ. ಆಗಸ್ಟ್ 11 ರಂದು ಪಾಕ್‌ನ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಕ್ಷದ ವತಿಯಿಂದ ಆಹ್ವಾನ ನೀಡಲಾಗಿದೆ.
Vijaya Karnataka Web cricketers


ಇಮ್ರಾನ್ ಖಾನ್ ನೇತೃತ್ವದಲ್ಲಿ ಪಿಟಿಐ ಪಕ್ಷ ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಲಿದೆ. ಈ ಪೈಕಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಸಮಕಾಲೀನರಾದ ಹಾಗೂ ಕ್ರಿಕೆಟ್ ಜಗತ್ತಿನ ಖ್ಯಾತನಾಮರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ನವಜೋತ್ ಸಿಂಗ್ ಸಿಧುಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.

ಇಮ್ರಾನ್ ಖಾನ್ ಉತ್ತಮ ಬಾಂಧವ್ಯವನ್ನು ಹೊಂದಿರುವ ಕಾರಣ ಭಾರತದ ಕೆಲ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ತಾನು ಕ್ರಿಕೆಟ್ ಆಡುವ ದಿನಗಳಿಂದ ಭಾರತದ ಜತೆಗೆ ಸಂಬಂಧ ಹೊಂದಿದ್ದು, ಭಾರತಕ್ಕೆ ಈಗಾಗಲೇ ಹಲವು ಬಾರಿ ಭೇಟಿ ನೀಡಿದ್ದೇನೆ ಎಂದು ಜುಲೈ 25ರಂದು ಚುನಾವಣೆ ಫಲಿತಾಂಶದ ಬಳಿಕ ಅವರನ್ನು ಟೀಕೆ ಮಾಡಿದ ಮಾಧ್ಯಮಗಳಿಗೆ ಪಾಕ್ ನಿಯೋಜಿತ ಪ್ರಧಾನಿ ನೆನಪಿಸಿದ್ದರು. ಇನ್ನು, ಬೇರೆ ದೇಶಗಳ ಮುಖ್ಯಸ್ಥರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಬಹುದಾ ಎಂದು ವಿದೇಶಿ ಕಚೇರಿಯನ್ನು ಪಿಟಿಐ ಕೇಳಿದೆ. ಪಾಕ್ ಸ್ವಾತಂತ್ರ್ಯ ದಿನಾಚರಣೆಗೂ 3 ದಿನ ಮುನ್ನ ಅಂದರೆ ಆಗಸ್ಟ್ 11ರಂದು ಇಮ್ರಾನ್‌ ಖಾನ್‌ರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಆದರೆ, ಪ್ರಧಾನಿ ಮೋದಿ ಹಾಗೂ ಸಾರ್ಕ್‌ ದೇಶಗಳ ಇತರೆ ನಾಯಕರನ್ನು ಪ್ರಮಾಣ ವಚನ ಸ್ವೀಕಾರಕ್ಕೆ ಪಿಟಿಐ ಆಹ್ವಾನಿಸಲು ಚಿಂತನೆ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಗಳನ್ನು ಪಿಟಿಐ ತಳ್ಳಿಹಾಕಿದೆ. ಇಮ್ರಾನ್ ಖಾನ್ ಹಾಗೂ ಮೋದಿ ನಡುವಿನ ದೂರವಾಣಿ ಸಂಭಾಷಣೆಯಲ್ಲೂ ಸಹ ಆಹ್ವಾನ ನೀಡಿಲ್ಲ ಎಂದು ಪಿಟಿಐನ ಮಾಧ್ಯಮದ ಮುಖ್ಯಸ್ಥ ಸ್ಪಷ್ಟಪಡಿಸಿದ್ದಾರೆ.

2014ರಲ್ಲಿ ಪ್ರಧಾನಿ ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್‌ ದೇಶಗಳ ಮುಖ್ಯಸ್ಥರಿಗೆ ಆಹ್ವಾನ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಈ ಪೈಕಿ, ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‌ ಸಹ ಹೊಸದಿಲ್ಲಿಗೆ ಆಗಮಿಸಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಪಠಾಣ್‌ಕೋಟ್‌ ಹಾಗೂ ಪಾಕ್‌ ಮೂಲದ ಉಗ್ರ ಸಂಘಟನೆಗಳು ನಡೆಸಿದ್ದ ಉರಿ ದಾಳಿ ಬಳಿಕ ಭಾರತ - ಪಾಕಿಸ್ತಾನದ ಸಂಬಂಧ ಹದಗೆಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ