ಆ್ಯಪ್ನಗರ

ಜಿಹಾದಿಗಾಗಿ ಕಾಶ್ಮೀರಕ್ಕೆ ಹೋಗ್ಬೇಡಿ: ಪಾಕಿಸ್ತಾನಿಗರಿಗೆ ಇಮ್ರಾನ್‌ ವಾರ್ನ್‌!

ಕಾಶ್ಮೀರದಲ್ಲಿ ಜಿಹಾದಿ ಹೋರಾಟಕ್ಕಾಗಿ ಪಾಕಿಸ್ತಾನಿಗರು ಹೋದರೆ, ಕಾಶ್ಮೀರಿಗರಿಗೆ ಅನ್ಯಾಯ ಮಾಡಿದ ಮೊದಲಿಗರು ನಾವಾಗುತ್ತೇವೆ ಎಂದು ಇಮ್ರಾನ್‌ ಖಾನ್‌ ಹೇಳಿಕೊಂಡಿದ್ದಾರೆ.

Vijaya Karnataka Web 19 Sep 2019, 12:51 pm
ಇಸ್ಲಮಾಬಾದ್‌: ಜಿಹಾದ್‌ ಹೋರಾಟಕ್ಕಾಗಿ ಕಾಶ್ಮೀರಕ್ಕೆ ಹೋಗಬೇಡಿ ಎಂದು ಪಾಕಿಸ್ತಾನಿಗರಿಗೆ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ. ಜಿಹಾದ್‌ ಹೋರಾಟಕ್ಕಾಗಿ ಕಾಶ್ಮೀರಕ್ಕೆ ಹೋಗುವುದರಿಂದ ಅಲ್ಲಿನ ಕಾಶ್ಮೀರಿಗಳಿಗೆ ತೊಂದರೆಯಾಗುತ್ತದೆ. ಅವರ ಹೋರಾಟಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದಿದ್ದಾರೆ.
Vijaya Karnataka Web imran khan warned pakistanis not to go to kashmir to fight jihad
ಜಿಹಾದಿಗಾಗಿ ಕಾಶ್ಮೀರಕ್ಕೆ ಹೋಗ್ಬೇಡಿ: ಪಾಕಿಸ್ತಾನಿಗರಿಗೆ ಇಮ್ರಾನ್‌ ವಾರ್ನ್‌!


ಪಾಕಿಸ್ತಾನ-ಆಫ್ಟನ್‌ ಗಡಿಯಲ್ಲಿ ಟೋರ್ಖಾಮ್‌ ಟರ್ಮಿನಲ್‌ಗೆ ಚಾಲನೆ ನೀಡಿ ಸುದ್ದಿಗಾರರ ಜತೆಗೆ ಮಾತನಾಡಿದ ಇಮ್ರಾನ್‌ ಖಾನ್‌, ಜಿಹಾದ್‌ಗಾಗಿ ಯಾರಾದರು ಪಾಕಿಸ್ತಾನದಿಂದ ಭಾರತಕ್ಕೆ ಹೋದರೆ, ಆತನೇ ಕಾಶ್ಮೀರಿಗರಿಗೆ ಅನ್ಯಾಯ ಮಾಡಿದ ಮೊದಲ ವ್ಯಕ್ತಿಯಾಗುತ್ತಾನೆ. ಕಾಶ್ಮೀರಿಗರ ಶತ್ರುವಾಗುತ್ತಾನೆ ಎಂದಿದ್ದಾರೆ.

ಕಾಶ್ಮೀರದ ಉಗ್ರರು ಚಂದ್ರಲೋಕದಿಂದ ಬಂದಿಲ್ಲ

ಕಾಶ್ಮೀರದ ವಿಚಾರದಲ್ಲಿ ಭಾರತ ಒಂದು ಸಣ್ಣ ಕಾರಣಕ್ಕಾಗಿ ಕಾಯುತ್ತಿದೆ. ಕಾಶ್ಮೀರದ ಮೇಲಿನ ಕರ್ಫ್ಯೂ ಹಿಂತೆಗೆದುಕೊಂಡರೆ ಮತ್ತು ಆರ್ಟಿಕಲ್‌ 370 ರದ್ದು ಪಡಿಸಿದ ನಿರ್ಧಾರವನ್ನು ಹಿಂತೆಗೆದುಕೊಂಡರೆ ಮಾತ್ರ ಭಾರತದ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಇಮ್ರಾನ್‌ ಖಾನ್‌ ಹೇಳಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಬುಸುಗುಡಲು ಆರಂಭಿಸಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವಸಂಸ್ಥೆ ಕದ ತಟ್ಟುತ್ತಿದೆ. ಭಾರತ ತಪ್ಪು ನಡೆ ಇಟ್ಟಿದೆ ಅನ್ನೋದು ಪಾಕಿಸ್ತಾನದ ವಾದ. ಹೀಗಾಗಿ, ಭಾರತದ ಜೊತೆಗಿನ ಮಾತುಕತೆಯ ಸಾಧ್ಯತೆಗಳನ್ನೂ ಪಾಕ್ ಪ್ರಧಾನಿ ತಳ್ಳಿಹಾಕಿದ್ದಾರೆ. ಉಭಯ ದೇಶಗಳ ನಡುವಣ ವಾಣಿಜ್ಯ ವ್ಯವಹಾರಗಳೂ ಬಹುತೇಕ ಬಂದ್ ಆಗಿವೆ. ಹಾಗೆ ನೋಡಿದ್ರೆ, ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಭಾರತವೇ ಸಿದ್ಧವಿಲ್ಲ. ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ. ಭಾರತದ ನಿಲುವಿಗೆ ವಿಶ್ವದ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ.

‘ಭಾರತದ ವಿರುದ್ಧ ಯುದ್ಧವಾದ್ರೆ ನಾವು ಸೋಲ್ತೀವಿ’!: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ