ಆ್ಯಪ್ನಗರ

ಮುಂಬಯಿ ಏರ್‌ಪೋರ್ಟ್‌ ಹೊಸ ದಾಖಲೆ: 24 ತಾಸಿನಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ

ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದೇ ದಿನದಲ್ಲಿ ಒಂದೇ ರನ್‌ವೇ ಮೂಲಕ 969 ವಿಮಾನಗಳ ಹಾರಾಟವನ್ನು ನಿರ್ವಹಿಸಿ ಹೊಸ ದಾಖಲೆ ಬರೆದಿದೆ ಎಂದು ನಿಲ್ದಾಣದ (ಎಂಐಎಎಲ್‌) ವಕ್ತಾರರು ತಿಳಿಸಿದ್ದಾರೆ.

Vijaya Karnataka Web 26 Nov 2017, 2:58 pm
ಮುಂಬಯಿ: ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದೇ ದಿನದಲ್ಲಿ ಒಂದೇ ರನ್‌ವೇ ಮೂಲಕ 969 ವಿಮಾನಗಳ ಹಾರಾಟವನ್ನು ನಿರ್ವಹಿಸಿ ಹೊಸ ದಾಖಲೆ ಬರೆದಿದೆ ಎಂದು ನಿಲ್ದಾಣದ (ಎಂಐಎಎಲ್‌) ವಕ್ತಾರರು ತಿಳಿಸಿದ್ದಾರೆ.
Vijaya Karnataka Web in 24 hours mumbai airport handles 969 flights sets new world record
ಮುಂಬಯಿ ಏರ್‌ಪೋರ್ಟ್‌ ಹೊಸ ದಾಖಲೆ: 24 ತಾಸಿನಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ


ನ್ಯೂಯಾರ್ಕ್‌, ಲಂಡನ್‌, ದುಬೈ ಮತ್ತು ದಿಲ್ಲಿಯಂತಹ ಮೆಗಾಸಿಟಿಗಳ ವಿಮಾನ ನಿಲ್ದಾಣಗಳಲ್ಲಿ ಎರಡು ಅಥವಾ ಹೆಚ್ಚು ರನ್‌ವೇಗಳು ಏಕಕಾಲಕ್ಕೆ ಬಳಕೆಯಲ್ಲಿರುತ್ತವೆ. ಮುಂಬಯಿ ಎರಡು ರನ್‌ವೇಗಳನ್ನು ಹೊಂದಿದ್ದರೂ, ಅವುಗಳು ಪರಸ್ಪರ ಸಂಧಿಸುವುದರಿಂದ ಏಕಕಾಲಕ್ಕೆ ಒಂದು ರನ್‌ವೇ ಮಾತ್ರ ಬಳಸಲು ಸಾಧ್ಯವಿದೆ. ಹೀಗಾಗಿ ತಾಂತ್ರಿಕವಾಗಿ ಮುಂಬಯಿ ವಿಮಾನ ನಿಲ್ದಾಣವನ್ನು ಸಿಂಗಲ್‌ ರನ್‌ವೇ ವಿಭಾಗದಲ್ಲಿ ಸೇರಿಸಲಾಗಿದೆ.

ಮುಂಬಯಿ ವಿಮಾನ ನಿಲ್ದಾಣ ಪ್ರತಿದಿನ 900ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ನಿರ್ವಹಿಸುತ್ತಿದೆ. ಪೂರ್ವನಿಗದಿತವಲ್ಲದ ವಿಮಾನಗಳು ಮತ್ತು ಖಾಸಗಿ ವಿಮಾನಗಳ ಹಾರಾಟ ಹೆಚ್ಚಿದಾಗ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಶುಕ್ರವಾರ ಈ ರೀತಿ 969 ವಿಮಾನಗಳು ಮುಂಬಯಿ ನಿಲ್ದಾಣದಿಂದ ಪ್ರಯಾಣಿಸಿವೆ.

ಬೆಳಗಿನ ಸಂಚಾರ ದಟ್ಟಣೆ ಅವಧಿಯಲ್ಲಿ ಪೂರ್ವನಿಗದಿತವಲ್ಲದ ವಿಮಾನಗಳ ಆಗಮನ-ನಿರ್ಗಮನಕ್ಕೆ ಅವಕಾಶವಿಲ್ಲ. ದಟ್ಟಣೆಯಿಲ್ಲದ ಅವಧಿಯಲ್ಲಿ ಇಂತಹ ವಿಮಾನಗಳ ಸಂಚಾರ ನಿರ್ವಹಿಸಲಾಗುತ್ತದೆ. ಶೀಘ್ರವೇ ದಿನಕ್ಕೆ 1000 ವಿಮಾನಗಳ ಹಾರಾಟ ನಿರ್ವಹಣೆಯ ದಾಖಲೆಯೂ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲಾಗಲಿದೆ ಎಂದು ವಕ್ತಾರರು ತಿಳಿಸಿದರು.

ನಾಗರಿಕ ವಿಮಾನ ಯಾನದಲ್ಲಿ ಯುಟಿಸಿ (ಕೋಆರ್ಡಿನೇಟೆಡ್‌ ಯುನಿವರ್ಸಲ್‌ ಟೈಮ್‌) ಮಾನದಂಡವನ್ನು ಬಳಸಲಾಗುತ್ತದೆ. ಇದು ಭಾರತೀಯ ಕಾಲಮಾನಕ್ಕಿಂತ 5:30 ಗಂಟೆ ಮುಂದಿದೆ. ಅದರಂತೆ ಗುರುವಾರ ಬೆಳಗಿನ ಜಾವ 5:30ರಿಂದ ಶುಕ್ರವಾರ ಬೆಳಗಿನ ಜಾವ 5:30ರ ವರೆಗಿನ 24 ತಾಸುಗಳನ್ನು ಈ ದಾಖಲೆಗೆ ಪರಿಗಣಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ