ಆ್ಯಪ್ನಗರ

ಬ್ರಿಟಿಷರ ಕಾಲದ 1,000ಕ್ಕೂ ಹೆಚ್ಚು ಅಪ್ರಸ್ತುತ ಕಾಯ್ದೆಗಳ ರದ್ದಿಗೆ ಉ.ಪ್ರ ಸರಕಾರ ನಿರ್ಧಾರ

ಬ್ರಿಟಿಷ್‌ ಕಾಲದ 1,000ಕ್ಕೂ ಹೆಚ್ಚು ಕಾಯ್ದೆಗಳನ್ನು ರದ್ದುಪಡಿಸಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ. ಈಗ ಅಪ್ರಸ್ತುತವೆನಿಸಿದ ಈ ಕಾಯ್ದೆಗಳ ಪೈಕಿ ಕೆಲವು 150ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿವೆ.

Vijaya Karnataka Web 31 Jan 2018, 12:39 pm
ಲಖನೌ: ಬ್ರಿಟಿಷ್‌ ಕಾಲದ 1,000ಕ್ಕೂ ಹೆಚ್ಚು ಕಾಯ್ದೆಗಳನ್ನು ರದ್ದುಪಡಿಸಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ. ಈಗ ಅಪ್ರಸ್ತುತವೆನಿಸಿದ ಈ ಕಾಯ್ದೆಗಳ ಪೈಕಿ ಕೆಲವು 150ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿವೆ.
Vijaya Karnataka Web in a 1st uttar pradesh to repeal 1000 british era laws
ಬ್ರಿಟಿಷರ ಕಾಲದ 1,000ಕ್ಕೂ ಹೆಚ್ಚು ಅಪ್ರಸ್ತುತ ಕಾಯ್ದೆಗಳ ರದ್ದಿಗೆ ಉ.ಪ್ರ ಸರಕಾರ ನಿರ್ಧಾರ


ಅಂತಹ 'ಅಪ್ರಸ್ತುತ' ಕಾಯ್ದೆಗಳ ಪಟ್ಟಿಯೊಂದನ್ನು ಯೋಗಿ ಸರಕಾರ ಸಿದ್ಧಪಡಿಸಿದ್ದು, ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಅವುಗಳನ್ನು ರದ್ದುಪಡಿಸುವ ವಿಧೇಯಕವೊಂದನ್ನು ಮಂಡಿಸಲಿದೆ. ಉತ್ತರ ಪ್ರದೇಶದ ಕಾನೂನು ಸಚಿವ ಬೃಜೇಶ್‌ ಪಾಠಕ್‌ ಈ ವಿಷಯವನ್ನು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದು, 'ಈಗ ಅಪ್ರಸ್ತುತವೆನಿಸಿದ ಎಲ್ಲ ಹಳೆಯ ಕಾನೂನುಗಳನ್ನು ಒಂದೇ ಬಾರಿಗೆ ರದ್ದುಪಡಿಸಲಾಗುವುದು' ಎಂದರು.

ಕಾನೂನು ಇಲಾಖೆ ಸಿದ್ಧಪಡಿಸಿದ ಪಟ್ಟಿಯಲ್ಲಿ, 'ಸಂಯುಕ್ತ ಪ್ರಾಂತ್ಯ ಕಾಯ್ದೆ 1890' ಕೂಡ ಸೇರಿದೆ. 1896ರ ಅಕ್ಟೋಬರ್‌ 16ರಂದು ಬ್ರಿಟಿಷ್ ಗವರ್ನರ್‌ ಜನರಲ್‌ ಇನ್‌ ಕೌನ್ಸಿಲ್‌ ಅವರು ವಾಯುವ್ಯ ಪ್ರಾಂತ್ಯ ಹಾಗೂ ಅವಧ್‌ನ ಉತ್ತಮ ಆಡಳಿತಕ್ಕಾಗಿ ಈ ಕಾಯ್ದೆಯನ್ನು ರೂಪಿಸಿದ್ದರು.

ಭೂತಪೂರ್ವ ಸಂಯುಕ್ತ ಪ್ರಾಂತ್ಯಗಳಿಂದ ಪ್ರತ್ಯೇಕಗೊಂಡು ಉತ್ತರ ಪ್ರದೇಶ ರಾಜ್ಯ ರಚನೆಯಾಗಿ 68ನೇ ವಾರ್ಷಿಕ ಆಚರಣೆಯನ್ನು ವಾರದ ಹಿಂದೆಯಷ್ಟೇ ಯೋಗಿ ಸರಕಾರ ಆಚರಿಸಿತ್ತು. ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ಕೂಡ 245 ಪುರಾತನ ಕಾನೂನಗಳನ್ನು ರದ್ದುಪಡಿಸುವ 2 ವಿಧೇಯಕಗಳನ್ನು ಅಂಗೀಕರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ