ಆ್ಯಪ್ನಗರ

ದೇಶದಲ್ಲಿ ಮೊದಲ ಬಾರಿಗೆ ಬಾಲಾಪರಾಧಿಗೆ ಜೀವಾವಧಿ

''ಆರೋಪಿ ಕೃತ್ಯ ಎಸಗಿದ್ದಾಗ 17 ವರ್ಷದವನಾಗಿದ್ದ . ಹಾಗಾಗಿ ಬಾಲಾಪರಾಧಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ,'' ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

PTI 28 Jun 2019, 7:22 am
ಹೈದರಾಬಾದ್‌: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇರೆಗೆ ಗುರುವಾರ 19 ವರ್ಷದ ಯುವಕನೊಬ್ಬನಿಗೆ ಕೋರ್ಟ್‌ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ. ''ಆರೋಪಿ ಕೃತ್ಯ ಎಸಗಿದ್ದಾಗ 17 ವರ್ಷದವನಾಗಿದ್ದ . ಹಾಗಾಗಿ ಬಾಲಾಪರಾಧಿಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ,'' ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
Vijaya Karnataka Web juvenile


ಅಪರಾಧಿಗೆ ಕೋರ್ಟ್‌ 5 ಸಾವಿರ ರೂ. ದಂಡ ಕೂಡ ವಿಧಿಸಿದೆ. 2017ರ ಜೂನ್‌ 28ರಂದು ಅಪರಾಧಿ, 11 ವರ್ಷದ ಅಪ್ರಾಪ್ತ ಬಾಲಕನನ್ನು ಸರಕಾರಿ ಶಾಲಾ ಮೈದಾನದಿಂದ ಅಪಹರಿಸಿದ್ದ. ಆತನೊಂದಿಗೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ಬಾಲಕನ ತಲೆಗೆ ಕಬ್ಬಿಣದ ಪೈಪ್‌ನಿಂದ ಹೊಡೆದು ಹತ್ಯೆಗೈದಿದ್ದ. ಮೃತದೇಹವನ್ನು ಎಂಟು ದಿನ ಅಡಗಿಸಿಟ್ಟಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ