ಆ್ಯಪ್ನಗರ

ಗುಜರಾತಲ್ಲಿ 9 ಭಾಷೆಗಳನ್ನು ತಲಾ ಒಬ್ಬರು ಮಾತ್ರ ಮಾತನಾಡಬಲ್ಲರು

ಗುಜರಾತಿನ 9 ಮಂದಿ ತಮ್ಮ ಮಾತೃಭಾಷೆಯಲ್ಲಿ ಯಾರೊಂದಿಗೂ ಮಾತನಾಡಲಾರರು. ಇದು ವಿಚಿತ್ರವಾದರೂ ಸತ್ಯ. ಭಾರತದಾದ್ಯಂತ ಮಾತನಾಡುವ ಭಾಷೆಗಳಿಗೆ ಸಂಬಂಧಿಸಿದಂತೆ 2011ರಲ್ಲಿ ನಡೆಸಲಾಗಿದ್ದ ಜನಗಣತಿ ವರದಿ ಇತ್ತೀಚಿಗೆ ಬಿಡುಗಡೆಯಾಗಿದ್ದು ಗುಜರಾತಲ್ಲಿ ಒಂಬತ್ತು ಭಾಷೆಗಳನ್ನು ತಲಾ ಒಬ್ಬರು ಮಾತ್ರ ಮಾತನಾಡಬಲ್ಲರು ಎಂಬುದು ಬೆಳಕಿಗೆ ಬಂದಿದೆ.

Vijaya Karnataka 29 Jun 2018, 12:15 pm
ಅಹಮದಾಬಾದ್: ಗುಜರಾತಿನ 9 ಮಂದಿ ತಮ್ಮ ಮಾತೃಭಾಷೆಯಲ್ಲಿ ಯಾರೊಂದಿಗೂ ಮಾತನಾಡಲಾರರು. ಇದು ವಿಚಿತ್ರವಾದರೂ ಸತ್ಯ. ಭಾರತದಾದ್ಯಂತ ಮಾತನಾಡುವ ಭಾಷೆಗಳಿಗೆ ಸಂಬಂಧಿಸಿದಂತೆ 2011ರಲ್ಲಿ ನಡೆಸಲಾಗಿದ್ದ ಜನಗಣತಿ ವರದಿ ಇತ್ತೀಚಿಗೆ ಬಿಡುಗಡೆಯಾಗಿದ್ದು ಗುಜರಾತಲ್ಲಿ ಒಂಬತ್ತು ಭಾಷೆಗಳನ್ನು ತಲಾ ಒಬ್ಬರು ಮಾತ್ರ ಮಾತನಾಡಬಲ್ಲರು ಎಂಬುದು ಬೆಳಕಿಗೆ ಬಂದಿದೆ.
Vijaya Karnataka Web Mother Tounge


ಆಸಕ್ತಿದಾಯಕ ವಿಚಾರವೆಂದರೆ ಗುಜರಾತ್ ಸಂಸ್ಕೃತಿಯ ಈ ವೈವಿಧ್ಯತೆಗೆ ಕಾರಣ ಈಶಾನ್ಯ ರಾಜ್ಯಗಳ ಪ್ರಭಾವ. ಗ್ಯಾಂಗ್ಟೆ ಭಾಷೆಯನ್ನು ಮಾತನಾಡುವ ಏಕೈಕ ವ್ಯಕ್ತಿ ಗುಜರಾತಿನಲ್ಲಿದ್ದಾನೆ. ಮಣಿಪುರದಲ್ಲಿ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ 16,542 .

ಹಾಗೆಯೇ ಇತರ ಗುಜರಾತಿನಲ್ಲಿ 8 ವಿವಿಧ ಭಾಷೆಗಳನ್ನು ತಲಾ ಒಬ್ಬೊಬ್ಬರು ಮಾತ್ರ ಮಾತನಾಡಬಲ್ಲರು. ತ್ರಿಪುರಾ ಮತ್ತು ಆಸ್ಸಾಂನ ಉಪಭಾಷೆ ಹಲಮ್; ಆಸ್ಸಾಂನಲ್ಲಿ ಮಾತನಾಡುವ ಕರ್ಬಿ ಅಥವಾ ಮಿಕಿರ್; ಸಿಕ್ಕಿಂನ ಉಪಭಾಷೆ ಲೆಪ್ಚಾ; ತ್ರಿಪುರದ ಉಪಭಾಷೆ ಮೋಘ್ , ಮತ್ತು ಜಮ್ಮು ಮತ್ತು ಕಾಶ್ಮೀರದ ಉಪಭಾಷೆ ಶಿನಾ ಮಾತನಾಡುವ ಒಬ್ಬೊಬ್ಬ ಪುರುಷರು ಇಲ್ಲಿ ಕಾಣಸಿಗುತ್ತಾರೆ.

ರಾಜ್ಯದಲ್ಲಿ ಮರಮ್ ( ಮಣಿಪುರದ ಭಾಷೆ), ಸವರಾ (ಒಡಿಶಾ ಮತ್ತು ಪಶ್ಚಿಮ ಬಂಗಾಳದ ಭಾಷೆ) ಮತ್ತು ತಂಗ್‌ಖುಲ್ ಮಾತನಾಡುವ ತಲಾ ಒಬ್ಬ ಮಹಿಳೆಯರಿದ್ದಾರೆ.

ಈ ಮೇಲೆ ಹೇಳಲಾದ 9 ಜನರನ್ನು ಹೋಲಿಸಿದರೆ 10 ಅದೃಷ್ಟವಂತರು ರಾಜ್ಯದಲ್ಲಿದ್ದಾರೆ. ರಾಜ್ಯದಲ್ಲಿ ತಲಾ ಇಬ್ಬರು ಮಾತನಾಡುವ 5 ಭಾಷೆಗಳಿವೆ.

"ಮಾತೃಭಾಷೆಯಲ್ಲಿ ಯಾರೊಂದಿಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳದ ವ್ಯಕ್ತಿ ರಾಜ್ಯದಲ್ಲಿದ್ದಾನೆಂದರೆ ಅದು ದುರದೃಷ್ಟಕರವೇ ಸರಿ. ಅನೇಕ ಭಾಷೆಗಳು ನಾಶವಾಗುತ್ತಿದ್ದು, ಇದು ಖೇದಕರ. ವಲಸೆ ಸಹ ಭಾಷೆ ಅವನತಿಯಾಗಲು ಪ್ರಮುಖ ಕಾರಣ. ಏಕೆಂದರೆ ಹೊಸ ಪ್ರದೇಶಕ್ಕೆ ಹೋದ ವ್ಯಕ್ತಿ ತನ್ನ ಮಾತೃಭಾಷೆ ಮಾತನಾಡುವುದನ್ನು ನಿಲ್ಲಿಸುತ್ತಾನೆ. ಇದು ಮಾತೃಭಾಷೆಗಳ ತ್ವರಿತ ವಿನಾಶಕ್ಕೆ ಕಾರಣವಾಗುತ್ತಿವೆ," ಎನ್ನುತ್ತಾರೆ ಅಳಿವಿನಂಚಿನಲ್ಲಿರುವ ಭಾಷೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಪ್ರೊಫೆಸರ್ ಗಣೇಶ್ ದೇವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ