ಆ್ಯಪ್ನಗರ

‘ವಂದೇ ಮಾತರಂ’ ಯೋಜನೆ ಆರಂಭ, 354 ಮಂದಿ ಮರಳಿ ತಾಯ್ನಾಡಿಗೆ

ಈ ಯೋಜನೆಯಡಿ ಸುಮಾರು 2 ಲಕ್ಷ ಮಂದಿಯನ್ನು ಭಾರತಕ್ಕೆ ಕರೆ ತರಲು 64 ಏರ್‌ ಇಂಡಿಯಾ ವಿಮಾನಗಳನ್ನು ಸಜ್ಜುಗೊಳಿಸಲಾಗಿದೆ. ಅವುಗಳು ಮೇ 7ರಿಂದ (ಗುರುವಾರ) ಮೇ 13ರವರೆಗೆ ವಿವಿಧ ದೇಶಗಳಿಂದ ಆದ್ಯತೆ ಮೇರೆಗೆ ಭಾರತೀಯರನ್ನು ಕರೆತರಲಿದೆ.

Vijaya Karnataka 7 May 2020, 9:19 pm

ದುಬೈ: ಕೊರೊನಾ ಲಾಕ್‌ಡೌನ್‌ ನಡುವೆ ನಾನಾ ದೇಶಗಳಲ್ಲಿ ಬಂಧಿಯಾಗಿರುವ ಭಾರತೀಯ ನಾಗರಿಕರನ್ನು ಕರೆತರುವ ‘ವಂದೇ ಮಾತರಂ’ ಯೋಜನೆಯ ಅನ್ವಯ ಮೊದಲ ಎರಡು ವಿಮಾನಗಳು ಗುರುವಾರ ಹಾರಾಟ ಆರಂಭಿಸಿವೆ. ಅಬುಧಾಬಿ ಹಾಗೂ ದುಬೈನಿಂದ ಹಾರಿ ಬಂದ ವಿಮಾನಗಳು ಕೇರಳದ 354 ಮಂದಿಯನ್ನು ತಾಯ್ನಾಡಲ್ಲಿ ಇಳಿಸಿವೆ.
Vijaya Karnataka Web Airlift


ಈ ಯೋಜನೆಯಡಿ ಸುಮಾರು 2 ಲಕ್ಷ ಮಂದಿಯನ್ನು ಭಾರತಕ್ಕೆ ಕರೆ ತರಲು 64 ಏರ್‌ ಇಂಡಿಯಾ ವಿಮಾನಗಳನ್ನು ಸಜ್ಜುಗೊಳಿಸಲಾಗಿದೆ. ಅವುಗಳು ಮೇ 7ರಿಂದ (ಗುರುವಾರ) ಮೇ 13ರವರೆಗೆ ವಿವಿಧ ದೇಶಗಳಿಂದ ಆದ್ಯತೆ ಮೇರೆಗೆ ಭಾರತೀಯರನ್ನು ಕರೆತರಲಿದೆ. ಮೊದಲ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಜೆ 4.15ಕ್ಕೆ ಅಬುಧಾಬಿಯಿಂದ ಹೊರಟು ಕೊಚ್ಚಿಗೆ ಬಂದರೆ, 5.10ಕ್ಕೆ ದುಬೈನಿಂದ ಹಾರಿದ ವಿಮಾನ ಕೋಯಿಕ್ಕೋಡ್‌ನಲ್ಲಿ ಲ್ಯಾಂಡ್‌ ಆಯಿತು. ಈ ವಿಮಾನದಲ್ಲಿ 11 ಗರ್ಭಿಣಿಯರು ಎರಡು ಅವಳಿ ಮಕ್ಕಳ ಜೋಡಿ ಸೇರಿದಂತೆ 354 ಮಂದಿ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ಲೈ ಬ್ಯಾಕ್‌ ಘೋಷಣೆ ಬೆನ್ನಲ್ಲೆ ನಾಗರಿಕ ವಿಮಾನಯಾನ ವೆಬ್‌ಸೈಟ್‌ ಕ್ರ್ಯಾಶ್‌!

ಇದು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಬೃಹತ್‌ ಏರ್‌ ಲಿಫ್ಟ್‌ ಯೋಜನೆಯಾಗಿದ್ದು, ತುರ್ತು ಕಾರಣಕ್ಕೆ ಭಾರತಕ್ಕೆ ಬರಬೇಕಾಗಿರುವ ಪ್ರಯಾಣಿಕರನ್ನು ಆದ್ಯತೆ ಮೇರೆಗೆ ಕರೆತರಲಾಗುತ್ತಿದೆ.

ವಿದೇಶಿ ಪ್ರಜೆಗಳಿಗೆ ಟಿಕೆಟ್‌ ಬುಕ್ಕಿಂಗ್‌

ಲಾಕ್‌ಡೌನ್‌ ನಡುವೆ ಭಾರತದಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿದೇಶಿ ಪ್ರಜೆಗಳಿಗೆ ತಮ್ಮ ತಾಯ್ನಾಡಿಗೆ ತೆರಳಲೂ ಏರ್‌ ಇಂಡಿಯಾ ಅವಕಾಶ ಕಲ್ಪಿಸಿದ್ದು, ವಿಮಾನಗಳ ಟಿಕೆಟ್‌ ಕಾಯ್ದಿರಿಸುವಿಕೆ ಗುರುವಾರ ಆರಂಭಗೊಂಡಿತು. ಮೇ 7ರಿಂದ 13ರವರೆಗೆ ನಾನಾ ದೇಶಗಳಿಂದ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆತರಲು ಹೋಗುವ ವಿಮಾನಗಳಲ್ಲೇ ಕ್ರಮಬದ್ಧ ವೀಸಾ ಹೊಂದಿರುವ ಪ್ರಜೆಗಳನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಅಮೆರಿಕ, ಇಂಗ್ಲೆಂಡ್‌ ಹಾಗೂ ಸಿಂಗಾಪುರಕ್ಕೆ ವಿಮಾನಗಳು ಹಾರಾಟ ನಡೆಸಲಿವೆ. ಅಮೆರಿಕಕ್ಕೆ 1 ಲಕ್ಷ ರೂ. ಬ್ರಿಟನ್‌ಗೆ 50 ಸಾವಿರ ಹಾಗೂ ಸಿಂಗಾಪುರಕ್ಕೆ 18 ರಿಂದ 20 ಸಾವಿರ ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ