ಆ್ಯಪ್ನಗರ

ಭಾರತ-ಜಪಾನ್ ಜಂಟಿ ನೌಕಾ ಸಮರಾಭ್ಯಾಸ: ಬಾಯ್ಬಿಟ್ಟು ನೋಡಿದ ಚೀನಾ!

ಲಡಾಖ್ ಗಡಿಯಲ್ಲಿ ಚೀನಾದ ದುಸ್ಸಾಹಸದ ನಡುವೆಯೇ, ಭಾರತ-ಜಪಾನ್ ನೌಕಾಸೇನೆ ಜಂಟಿ ಸಮರಾಭ್ಯಾಸ ನಡೆಸಿರುವುದು ಗಮನ ಸೆಳೆದಿದೆ. ಹಿಂದೂ ಮಹಾಸಾಗರದ ಮಲಾಕ್ಕಾ ಜಲಸಂಧಿ ಬಳಿ ಭಾರತ ಹಾಗೂ ಜಪಾನ್ ನೌಕಾಸೇನೆಯ ಯುದ್ಧ ಹಡಗುಗಳು ಜಂಟಿ ಸಮರಾಭ್ಯಾಸ ನಡೆಸಿದವು.

Vijaya Karnataka Web 29 Jun 2020, 6:40 am
ನವದೆಹಲಿ: ಲಡಾಖ್ ಗಡಿಯಲ್ಲಿ ಚೀನಾದ ದುಸ್ಸಾಹಸದ ನಡುವೆಯೇ, ಭಾರತ-ಜಪಾನ್ ನೌಕಾಸೇನೆ ಜಂಟಿ ಸಮರಾಭ್ಯಾಸ ನಡೆಸಿರುವುದು ಗಮನ ಸೆಳೆದಿದೆ.
Vijaya Karnataka Web pic
ಸಂಗ್ರಹ ಚಿತ್ರ


ಹಿಂದೂ ಮಹಾಸಾಗರದ ಮಲಾಕ್ಕಾ ಜಲಸಂಧಿ ಬಳಿ ಭಾರತ ಹಾಗೂ ಜಪಾನ್ ನೌಕಾಸೇನೆಯ ಯುದ್ಧ ಹಡಗುಗಳು ಜಂಟಿ ಸಮರಾಭ್ಯಾಸ ನಡೆಸಿದವು.

ಸಮರಾಭ್ಯಾಸದಲ್ಲಿ ನಿರತ ಯುದ್ಧ ಹಡಗುಗಳು:
ಭಾರತ- ಐಎನ್‌ಎಸ್ ರಾಜಪೂತ್, ಐಎನ್ಎಸ್ ರಾಣಾ ಹಾಗೂ ಐಎನ್‌ಎಸ್ ಕುಲೀಷ್
ಜಪಾನ್- ಜೆಎಸ್ ಶಿಮಾಯುಕಿ ಹಾಗೂ ಜೆಎಸ್ ಕಶೀಮಾ

ಇನ್ನು ಭಾರತ-ಜಪಾನ್ ಜಂಟಿ ನೌಕಾ ಸಮಾರಾಭ್ಯಾಸವನ್ನು ಗಮನಿಸುತ್ತಿರುವ ಚೀನಾ, ಮಲಾಕ್ಕಾ ಜಲಸಂಧಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಕಣ್ಣಿಟ್ಟಿದೆ.

ಪೆಸಿಫಿಕ್ ಮಹಾಸಾಗರಕ್ಕೆ 3 ಅಣ್ವಸ್ತ್ರ ಯುದ್ಧ ಹಡಗು ರವಾನಿಸಿದ ಅಮೆರಿಕ: ಕಾರಣ?

ಅತ್ತ ಅಮೆರಿಕ ಕೂಡ ಪೆಸಿಫಿಕ್ ಮಹಾಸಾಗರಕ್ಕೆ ಮೂರು ಅಣ್ವಸ್ತ್ರ ಯುದ್ಧ ಹಡಗುಗಳನ್ನು ರವಾನೆ ಮಾಡಿದ್ದು, ಚೀನಾದ ಎಲ್ಲಾ ಯೋಜನೆಗಳು ತಲೆಕೆಳಗಾಗುವ ಸಂಭವನೀಯತೆಯನ್ನು ಹೆಚ್ಚಿಸಿದೆ.

ಅಮೆರಿಕ-ಭಾರತ-ಜಪಾನ್ ನೌಕಾ ಸಮರಾಭ್ಯಾಸ 'ಮಲಬಾರ್' 2015ರಿಂದಲೇ ಆರಂಭವಾಗಿದ್ದು, ಭಾರತ-ಜಪಾನ್ ಭೂಸೇನೆ ನಡುವಿನ 'ಧರ್ಮಾ ಗಾರ್ಡಿಯನ್' ಹೆಸರಿನ ಜಂಟಿ ಸೇನಾಭ್ಯಾಸಕ್ಕೂ 2018ರಿಂದ ಚಾಲನೆ ನೀಡಲಾಗಿದೆ.

ಚೀನಾ ಅಪಾಯ ಎದುರಿಸಲು ಜಾಗತಿಕವಾಗಿ ಸೇನೆ ರವಾನೆಗೆ ಚಿಂತನೆ: ಅಮೆರಿಕ ಘೋಷಣೆ!

2007ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಭಾರತ-ಅಮರಿಕ ನೌಕಾಸೇನೆಯ ಜಂಟಿ ಸಮರಾಭ್ಯಾಸವನ್ನು ಚೀನಾ ವಿರೋಧಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ