ಆ್ಯಪ್ನಗರ

ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ಧ; ನಿವೃತ್ತ ಲೆ. ಜ. ಡಿಎಸ್‌ ಹೂಡ

ಅಗತ್ಯಬಿದ್ದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತೀಯ ಸೇನೆ ಸಿದ್ಧ ಎಂದು ಲೆ. ಜನರಲ್ (ನಿವೃತ್ತ) ಡಿ. ಎಸ್. ಹೂಡ ಹೇಳಿಕೆ ನೀಡಿದ್ದಾರೆ.

Vijaya Karnataka Web 29 Jun 2018, 6:54 pm
ಹೊಸದಿಲ್ಲಿ: ಅಗತ್ಯಬಿದ್ದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತೀಯ ಸೇನೆ ಸಿದ್ಧ ಎಂದು ಲೆ. ಜನರಲ್ (ನಿವೃತ್ತ) ಡಿ. ಎಸ್. ಹೂಡ ಹೇಳಿಕೆ ನೀಡಿದ್ದಾರೆ.
Vijaya Karnataka Web Hooda


2016ರಲ್ಲಿ ಭಾರತೀಯ ಪಡೆಗಳು ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ನೇತೃತ್ವ ವಹಿಸಿದ್ದ ಜ. ಹೂಡ, ಕೇಂದ್ರ ಸರಕಾರದ ಯೋಜನೆಯಂತೆ ಸೇನೆ ಉಗ್ರರ ಮೇಲೆ ದಾಳಿಗೆ ಸಮ್ಮತಿಸಿತ್ತು. ಕೇಂದ್ರ ಅನುಮತಿ ನೀಡಿದ ಕೂಡಲೇ ಸೇನೆಯು ಸರ್ವಸನ್ನದ್ಧವಾಗಿ ದಾಳಿ ಯೋಜನೆ ರೂಪಿಸಿತ್ತು. ದಾಳಿಯಿಂದಾಗಿ ಪಾಕ್ ಉಗ್ರರ ಸದ್ದಡಗಿಸಲು ಸಾಧ್ಯವಾಗಿತ್ತು. ಮುಂದೆ ಮತ್ತೊಮ್ಮೆ ಅಗತ್ಯವಿದ್ದಲ್ಲಿ ಅಂತಹ ದಾಳಿ ನಡೆಸಲು ಭಾರತ ಸಜ್ಜಾಗಿದೆ ಎಂದಿದ್ದಾರೆ.

2016ರ ಸೆ. 29ರಂದು ನಡೆದಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಕಳೆದ ಬುಧವಾರ ಟಿವಿಗಳಲ್ಲಿ ಪ್ರಸಾರವಾಗಿತ್ತು. ಹೇಗೆ ದಾಳಿ ಸಿದ್ಧತೆ ನಡೆಸಲಾಯಿತು ಮತ್ತು ಉಗ್ರರ ತರಬೇತಿ ಶಿಬಿರ ಧ್ವಂಸ ಮಾಡಲಾಯಿತು ಎನ್ನುವ 8 ನಿಮಿಷದ ವಿಡಿಯೋವನ್ನು ಡ್ರೋನ್ ಮತ್ತು ಥರ್ಮಲ್ ಇಮೇಜಿಂಗ್ ಕ್ಯಾಮರಾ ಬಳಸಿ ಚಿತ್ರೀಕರಿಸಲಾಗಿತ್ತು.

ಜತೆಗೆ ಸಂಪೂರ್ಣ ಕಾರ್ಯಾಚರಣೆಯನ್ನು ಉಧಂಪುರದಲ್ಲಿನ ಸೇನಾ ನೆಲೆಯಿಂದ ನಿಯಂತ್ರಿಸಲಾಗಿತ್ತು ಎಂದು ಹೂಡಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ