ಆ್ಯಪ್ನಗರ

ಚೀನಾದವರೆಗೂ ರಸ್ತೆ ನಿರ್ಮಾಣ:ಇತಿಹಾಸ ಸೃಷ್ಟಿಸಿದ ಬಿಆರ್‌ಒ

ಚೀನಾ ಗಡಿ ತನಕ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಚೀನಾ ಗಡಿ ತನಕ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುವ ಮೂಲಕ 'ಗಡಿ ರಸ್ತೆ ಸಂಸ್ಥೆ' (ಬಿಆರ್‌ಒ) ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ ಲಿಮೆಕಿಂಗ್‌ ಮತ್ತು ಟಮಾ ಚುಂಗ್‌ ಚುಂಗ್‌ ಟಾಸ್ಕಿಂಗ್‌ ಆಕ್ಸಿಸ್‌ನೊಂದಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 80 ಕಿ.ಮೀ. ಉದ್ದವಿದೆ.

Vijaya Karnataka 18 May 2018, 9:52 am
ಇಟಾನಗರ (ಅರುಣಾಚಲಪ್ರದೇಶ): ಚೀನಾ ಗಡಿ ತನಕ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುವ ಮೂಲಕ 'ಗಡಿ ರಸ್ತೆ ಸಂಸ್ಥೆ' (ಬಿಆರ್‌ಒ) ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ ಲಿಮೆಕಿಂಗ್‌ ಮತ್ತು ಟಮಾ ಚುಂಗ್‌ ಚುಂಗ್‌ ಟಾಸ್ಕಿಂಗ್‌ ಆಕ್ಸಿಸ್‌ನೊಂದಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 80 ಕಿ.ಮೀ. ಉದ್ದವಿದೆ.
Vijaya Karnataka Web Road Construction


1962ರ ಭಾರತ-ಚೀನಾ ಸಮರದ ನಂತರ ರಸ್ತೆ ಮೂಲಕ ಚೀನಾ ಗಡಿ ತಲುಪುವ ವ್ಯವಸ್ಥೆ ಮಾಡಿರುವುದು ಇದೇ ಮೊದಲು ಎಂದು ಬಿಆರ್‌ಓ ಕಮಾಂಡರ್‌ ತಾನಿಶ್‌ ಕುಮಾರ್‌ ಹೇಳಿದ್ದಾರೆ. ವರ್ಷದಲ್ಲಿ 9 ತಿಂಗಳು ಭಾರಿ ಮಳೆ, ಹವಾಮಾನ ವೈಪರೀತ್ಯ, ಕಡಿದಾದ ಪರ್ವತಗಳು, ಹತ್ತಿರದಲ್ಲೇ ಭೋರ್ಗರೆಯುವ ನದಿ ಮುಂತಾದ ಹತ್ತುಹಲವು ಸವಾಲುಗಳ ನಡುವೆಯೇ 2009ರಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಭಾರಿ ತೂಕದ ಉತ್ಖನನ ಯಂತ್ರಗಳು, ಬೃಹತ್‌ ಗಾತ್ರದ ಯಂತ್ರೋಪಕರಣಗಳು ಹಾಗೂ ವಾಹನಗಳನ್ನು ವಾಯುಪಡೆ ಹೆಲಿಕಾಪ್ಟರ್‌ ಮೂಲಕ ರಸ್ತೆ ನಿರ್ಮಾಣ ಸ್ಥಳಕ್ಕೆ ಸಾಗಿಸಲಾಗಿತ್ತು. ಅದಾದ ಬಳಿಕ ಯಂತ್ರಗಳನ್ನು ಜೋಡಿಸಿ 600 ಮೀಟರ್‌ಗಳಷ್ಟು ಎತ್ತರದ ಪರ್ವತವನ್ನು ಕೊರೆದು ಸೇತುವೆ ನಿರ್ಮಿಸಲಾಗಿತ್ತು. ಇದು ಭಾರತೀಯ ಯೋಧರು ನೀಡಿದ ಮಹತ್ವದ ಕೊಡುಗೆಯಾಗಿ ಕಡತ ಸೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ