ಆ್ಯಪ್ನಗರ

ಲಡಾಕ್‌ ಬಿಕ್ಕಟ್ಟು ಶೀಘ್ರ ಸುಖಾಂತ್ಯ; ಕ್ಯಾತೆ ತೆಗೆಯಲ್ಲ ಎಂದ ಚೀನಾ

​​ಪೂರ್ವ ಲಡಾಕ್‌ ಗಡಿಯಲ್ಲಿನ ಘರ್ಷಣಾ ಸ್ಥಳಗಳಲ್ಲಿ ಹಂತಹಂತವಾಗಿ ಶೀಘ್ರವೇ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಪಾಂಗಾಂಗ್‌ ತ್ಸೊ ಸರೋವರದ ಸುತ್ತ ಸೇನಾ ಚಟುವಟಿಕೆ ನಿಷಿದ್ಧ ಪ್ರದೇಶ ಕಾಯ್ದುಕೊಳ್ಳಲು ಭಾರತ-ಚೀನಾ ಸೇನಾಪಡೆಗಳು ಮುಂದಾಗಿವೆ.

Vijaya Karnataka Web 12 Nov 2020, 11:31 pm
ಹೊಸದಿಲ್ಲಿ: ಕಳೆದ ಏಳು ತಿಂಗಳಿಂದ ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಗಡಿ ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಸೇನಾಪಡೆಗಳು ಮೂರು ಹಂತದ ಸಂಧಾನ ಸೂತ್ರ ಸಿದ್ಧಪಡಿಸಿದ ಬೆನ್ನಿಗೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡೋ-ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ ಮುಖ್ಯಸ್ಥ ಎಸ್‌.ಎಸ್‌.ದೇಸ್ವಾಲ್‌ ಅವರು ಶೀಘ್ರ ಸುಖಾಂತ್ಯದ ಸುಳಿವು ನೀಡಿದ್ದಾರೆ.
Vijaya Karnataka Web ಭಾರತ-ಚೀನಾ ಸಂಘರ್ಷ
ಭಾರತ-ಚೀನಾ ಸಂಘರ್ಷ


ಸುದ್ದಿಸಂಸ್ಥಗೆ ಸಂದರ್ಶನ ನೀಡಿರುವ ಅವರು, '' ದ್ವಿಪಕ್ಷೀಯ ಸಂಬಂಧಗಳಲ್ಲಿ ಕೆಲವು ಬಿರುಕು ಉಂಟಾಗಿರುವುದು ವಾಸ್ತವ ಸಂಗತಿ. ಆದರೆ ಇವೆಲ್ಲವೂ ಶಾಂತ ರೀತಿಯಲ್ಲಿ ಶೀಘ್ರವೇ ಪರಿಹಾರವಾಗಿ ಸುಖಾಂತ್ಯವನ್ನು ಕಾಣುವ ವಿಶ್ವಾಸವಿದೆ '' ಎಂದಿದ್ದಾರೆ.

ಪೂರ್ವ ಲಡಾಕ್‌ ಗಡಿಯಲ್ಲಿನ ಘರ್ಷಣಾ ಸ್ಥಳಗಳಲ್ಲಿ ಹಂತಹಂತವಾಗಿ ಶೀಘ್ರವೇ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಪಾಂಗಾಂಗ್‌ ತ್ಸೊ ಸರೋವರದ ಸುತ್ತ ಸೇನಾ ಚಟುವಟಿಕೆ ನಿಷಿದ್ಧ ಪ್ರದೇಶ ಕಾಯ್ದುಕೊಳ್ಳಲು ಭಾರತ-ಚೀನಾ ಸೇನಾಪಡೆಗಳು ಮುಂದಾಗಿವೆ.

- 40 ಡಿಗ್ರಿ ಚಳಿ ತಡೆಯಲು ವಿಶೇಷ ಬಟ್ಟೆ

ವಿಶ್ವದಲ್ಲೇ ಅತಿ ಎತ್ತರದ ಗಡಿ ಎಂಬ ಹೆಮ್ಮೆ ಇಂಡೋ-ಟಿಬೆಟ್‌ ಬಾರ್ಡರ್‌ಗೆ ಇದೆ. ಗಡಿಯ ಪ್ರತಿ ಪ್ರದೇಶ ಕನಿಷ್ಠ 10 ರಿಂದ 11 ಸಾವಿರ ಅಡಿಗಳಷ್ಟು ಸಮುದ್ರಮಟ್ಟದಿಂದ ಎತ್ತರದಲ್ಲಿವೆ. ಚಳಿಗಾಲ ಕೂಡ ಆವರಿಸುತ್ತಿರುವ ಹಿನ್ನೆಲೆಯಲ್ಲಿಆಮ್ಲಜನಕ ಕೊರತೆ ಉಂಟಾಗಲಿದೆ. ಜತೆಗೆ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಕುಸಿಯಲಿದೆ. ಇಂಥ ಕಷ್ಟಕರ ಸನ್ನಿವೇಶದಲ್ಲೂ ಭಾರತೀಯ ಯೋಧರು ತಮ್ಮ ನೆಲದ ರಕ್ಷಣೆ ಮಾಡುತ್ತಾರೆ ಎಂದು ದೇಸ್ವಾಲ್‌ ತಿಳಿಸಿದ್ದಾರೆ.

ಯೋಧರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಚಳಿ ತಡೆಯುವ ವಿಶೇಷ ಬಟ್ಟೆಗಳು, ಪೌಷ್ಟಿಕಾಂಶ ಭರಿತ ಆಹಾರವನ್ನು ಪೂರೈಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 90 ಸಾವಿರ ಯೋಧರ ಪಡೆಯು ಹಲವು ತಂಡಗಳಾಗಿ ಕೆಲವು ಬಾರಿ 30 ದಿನಗಳಷ್ಟು ಸುದೀರ್ಘವಾದ ಗಡಿ ಗಸ್ತು ತಿರುಗುವಿಕೆ ನಡೆಸುತ್ತದೆ ಎಂದಿದ್ದಾರೆ.

75% ನೆಲೆಗಳಿಗಿದೆ ರಸ್ತೆ ಸಂಪರ್ಕ

ಗಡಿ ರಸ್ತೆ ನಿರ್ಮಾಣ ಸಂಸ್ಥೆಯ ತ್ವರಿತ ಗತಿ ಕಾರ್ಯದಿಂದಾಗಿ ಸದ್ಯ ಇಂಡೋ-ಟಿಬೆಟ್‌ ಗಡಿಯಲ್ಲಿನ 75% ನೆಲೆಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ 5-6 ವರ್ಷಗಳಲ್ಲಿ ಬಹುತೇಕ ಎಲ್ಲನೆಲೆಗಳಿಗೆ ರಸ್ತೆ ನಿರ್ಮಾಣ ಪೂರ್ಣವಾಗಲಿದೆ. ಆ ನಂತರ ತುರ್ತು ಬಿಕ್ಕಟ್ಟುಗಳನ್ನು ಎದುರಿಸಲು ಕ್ಷಣಮಾತ್ರದಲ್ಲಿಭಾರಿ ಸೇನೆಯನ್ನು ನಿಯೋಜಿಸಲು ಅನುಕೂಲವಾಗಲಿದೆ ಎಂದು ದೇಸ್ವಾಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ