ಆ್ಯಪ್ನಗರ

ಕೊರೊನಾಗೆ ಮತ್ತೋರ್ವ ಬಲಿ: ದೇಶಾದ್ಯಂತ 6ಕ್ಕೇರಿದ ಸಾವಿನ ಸಂಖ್ಯೆ!

ದೇಶಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ಕೊರೊನಾ ಪೀಡಿತರ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ಆತಂಕ ಸೃಷ್ಟಿಸಿದೆ. ಇಒಂದು ಮುಂಬೈನಲ್ಲಿ ಓರ್ವ ವ್ಯಕ್ತಿ ಕೊರೊನಾಗೆ ಬಲಿಯಾಗುತ್ತಿದ್ದಂತೇ, ಅತ್ತ ಬಿಹಾರದಲ್ಲೂ ಓರ್ವ ವ್ಯಕ್ತಿಯನ್ನು ಈ ಮಾರಕ ವೈರಾಣು ಬಲಿ ಪಡೆದಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಾವಿನ ಸಂಖ್ಯೆ 6ಕ್ಕೇರಿದೆ.

Vijaya Karnataka Web 22 Mar 2020, 1:03 pm
Vijaya Karnataka Web China Outbreak
ಬಿಹಾರದಲ್ಲಿ ಮತ್ತೋರ್ವ ವ್ಯಕ್ತಿ ಮಾರಕ ಕೊರೊನಾವೈರಸ್‌ಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಾವಿನ ಸಂಖ್ಯೆ 6ಕ್ಕೇರಿದೆ.
ಪಾಟ್ನಾ: ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಇಂದು ಇಡೀ ದೇಶ ಜನತಾ ಕರ್ಫ್ಯೂ ಆಚರಿಸುತ್ತಿದೆ. ಪ್ರಧಾನಿ ಮೋದಿ ಕೊಟ್ಟ ಕರೆಗೆ ಜನ ಒಕ್ಕೊರಲಿನ ಬೆಂಬಲ ಘೋಷಿಸಿದ್ದಾರೆ.

ಆದರೆ ದೇಶದಲ್ಲಿ ಕೊರೊನಾ ಪೀಡಿತರ ಸಾವಿನ ಸಂಖ್ಯೆಯೂ ಹೆಚ್ವಾಗುತ್ತಿದ್ದು, ಇಂದು ಬಿಹಾರದಲ್ಲಿ ಮತ್ತೋರ್ವ ನಾಗರಿಕ ಮಾರಕ ವೈರಾಣುವಿಗೆ ಬಲಿಯಾಗಿದ್ದಾನೆ. ಈ ಮೂಲಕ ದೇಶದಲ್ಕಿ ಕೊರೊನಾ ಪೀಡಿತರ ಸಾವಿನ ಸಂಖ್ಯೆ 6ಕ್ಕೇರಿದೆ.


ಇತ್ತಿಚೀಗೆ ಕತಾರ್‌ಗೆ ಭೇಟಿ ನೀಡಿದ್ದ ಬಿಹಾರದ 38 ವರ್ಷದ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಫಲಿತಾಂಶ ಬಂದಿತ್ತು. ಕೂಡಲೇ ಆತನನ್ನು ಪಾಟ್ನಾದ ಏಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ ಸೋಂಕಿಗೆ ದೇಶದಲ್ಲಿ 5ನೇ ಬಲಿ: ಮಹಾರಾಷ್ಟ್ರದಲ್ಲಿ ಎರಡನೇ ಸಾವು!

ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿರುವುದರಿಂದ ದೇಶದಲ್ಲಿ ಕೊರೊನಾ ಪೀಡಿತರ ಸಾವಿನ ಸಂಖ್ಯೆ 6ಕ್ಕೇರಿದಂತಾಗಿದೆ. ಇಂದು ಮಹಾರಾಷ್ಟ್ರದಲ್ಲಿ 63ವರ್ಷದ ವೃದ್ಧನೋರ್ವ ಕೊರೊನಾ ವೈರಸ್‌ಗೆ ಬಲಿಯಾಗಿದ್ದ.

ಒಟ್ಟಿನಲ್ಲಿ ದೇಶದಲ್ಲಿ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆ ಏರುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ