ಆ್ಯಪ್ನಗರ

ಟ್ರಂಪ್‌ ಭೇಟಿಗೂ ಮುನ್ನ ಅಮೆರಿಕಾದ ಜೊತೆ ಮೆಗಾ ರಕ್ಷಣಾ ಒಪ್ಪಂದ ಅಂತಿಮಗೊಳಿಸಿದ ಭಾರತ

ನೌಕಾದಳಕ್ಕೆ 24 ಎಂಎಚ್‌ 50 ರೋಮಿಯೋ ಹೆಲಿಕಾಪ್ಟರ್‌ಗಳನ್ನು 2.6 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಖರೀದಿ ಮಾಡಲಾಗುತ್ತಿದ್ದು, ದಾಳಿ ನಡೆಸಬಲ್ಲ ಸಾಮರ್ಥ್ಯ ಇರುವ 6 ಎಎಚ್‌-64ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಭೂಸೇನೆಗೆ ಖರೀದಿಸಲಾಗುತ್ತಿದೆ. ಇದರ ಖರೀದಿ ಮೊತ್ತ 930 ಮಿಲಿಯನ್‌ ಡಾಲರ್‌ಗಳಾಗಿವೆ.

TIMESOFINDIA.COM 13 Feb 2020, 2:11 pm
ಹೊಸದಿಲ್ಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೇಶಕ್ಕೆ ಆಗಮಿಸುವ ಮುನ್ನ ಎರಡು ಮಹತ್ವದ ರಕ್ಷಣಾ ಒಪ್ಪಂದಗಳನ್ನು ಭಾರತ ಅಂತಿಮಗೊಳಿಸಿದೆ. 30 ಅತ್ಯುನ್ನತ ದರ್ಜೆಯ ಹೆಲಿಕಾಪ್ಟರ್‌ಗಳ ಖರೀದಿಗೆ ಭಾರತ ಅಂತಿಮ ಮುದ್ರೆ ಒತ್ತಿದ್ದು ಸುಮಾರು 25,000 ಕೋಟಿ ರೂಪಾಯಿ (3.5 ಬಿಲಿಯನ್‌ ಡಾಲರ್‌) ಮೊತ್ತದ ಡೀಲ್‌ ಇದಾಗಿದೆ.
Vijaya Karnataka Web Apache


ಇದರಲ್ಲಿ ನೌಕಾದಳಕ್ಕೆ 24 ಎಂಎಚ್‌ 50 ರೋಮಿಯೋ ಹೆಲಿಕಾಪ್ಟರ್‌ಗಳನ್ನು 2.6 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಖರೀದಿ ಮಾಡಲಾಗುತ್ತಿದ್ದು, ದಾಳಿ ನಡೆಸಬಲ್ಲ ಸಾಮರ್ಥ್ಯ ಇರುವ 6 ಎಎಚ್‌-64ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಭೂಸೇನೆಗೆ ಖರೀದಿಸಲಾಗುತ್ತಿದೆ. ಇದರ ಖರೀದಿ ಮೊತ್ತ 930 ಮಿಲಿಯನ್‌ ಡಾಲರ್‌ಗಳಾಗಿವೆ. ಮುಂದಿನ ವಾರ ಸಭೆ ಸೇರಲಿರುವ ಭದ್ರತೆ ಮೇಲಿನ ಸಂಪುಟ ಸಮಿತಿ ಇದನ್ನು ಅಂತಿಮಗೊಳಿಸಲಿದೆ.

24 ಹೆಲಿಕಾಪ್ಟರ್‌ಗಳಿಗೆ ಭಾರತ ಆರಂಭದಲ್ಲಿ ಶೇ. 15ರಷ್ಟು ಹಣ ಪಾವತಿಸಲಿದ್ದು ಐದರಿಂದ ಆರು ವರ್ಷಗಳಲ್ಲಿ ನೌಕಾದಳಕ್ಕೆ ಸೇರ್ಪಡೆಯಾಗಲಿದೆ. ಈಗಾಗಲೇ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು 2015ರಲ್ಲಿ 13,952 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದ್ದು, ಇದರ ಮುಂದುವರಿದ ಭಾಗವಾಗಿ ಮತ್ತೆ ಆರು ಹೆಲಿಕಾಪ್ಟರ್‌ಗಳನ್ನು ಖರೀದಿ ಮಾಡಲಾಗುತ್ತಿದೆ.

ಏರ್‌ ಟು ಏರ್‌, ಏರ್‌ ಟು ಗ್ರೌಂಡ್‌ ಮಿಸೈಲ್‌ಗಳು, ಗನ್‌, ರಾಕೆಟ್‌ಗಳನ್ನು ಹೊಂದಿರುವ ಈ ಅಪಾಚೆ ಹೆಲಿಕಾಪ್ಟಟರ್‌ಗಳು 2022-23ರ ಹೊತ್ತಿಗೆ ಭೂಸೇನೆ ಬತ್ತಳಿಕೆ ಸೇರಲಿವೆ.

ಭಾರತ ಮತ್ತು ಅಮೆರಿಕಾದ ನಡುವೆ ಮುಂದಿನ ಎರಡು ಮೂರು ವರ್ಷಗಳಲ್ಲಿ 10 ಬಿಲಿಯನ್‌ ಡಾಲರ್‌ ಮೊತ್ತದ ರಕ್ಷಣಾ ಉತ್ಪನ್ನಗಳ ಖರೀದಿ ನಡೆಯಲಿದ್ದು, ಇದರ ಭಾಗವಾಗಿ ಈ 30 ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ