ಆ್ಯಪ್ನಗರ

ಸರಾಸರಿಗಿಂತ ಜಾಸ್ತಿ ಬಿದ್ದಿದೆ ಮಳೆ

ದೇಶದಲ್ಲಿಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಕಡಿಮೆ ಮಳೆ ಬಿದ್ದರೂ ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ವಾಡಿಕೆಗಿಂತ ಶೇಕಡಾ 7 ಅಧಿಕ ಮಳೆ ಸುರಿಸಿ ತನ್ನ ಕೋಟಾವನ್ನು ಮೀರಿಸಿದೆ...

Agencies 29 Sep 2019, 5:00 am
ಹೊಸದಿಲ್ಲಿ: ದೇಶದಲ್ಲಿಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಕಡಿಮೆ ಮಳೆ ಬಿದ್ದರೂ ಒಟ್ಟಾರೆಯಾಗಿ ಈ ಬಾರಿಯ ಮುಂಗಾರು ವಾಡಿಕೆಗಿಂತ ಶೇಕಡಾ 7 ಅಧಿಕ ಮಳೆ ಸುರಿಸಿ ತನ್ನ ಕೋಟಾವನ್ನು ಮೀರಿಸಿದೆ. ಕಳೆದ ಐದು ವರ್ಷಗಳಲ್ಲಿಸತತವಾಗಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು, ಈ ಬಾರಿ ಧನಾತ್ಮಕವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ಮಹಾ ನಿರ್ದೇಶಕ ಕೆ.ಎಸ್‌. ಹೊಸಳೀಕರ್‌ ಟ್ವೀಟ್‌ ಮಾಡಿದ್ದಾರೆ.
Vijaya Karnataka Web india gets 7 more than average rain
ಸರಾಸರಿಗಿಂತ ಜಾಸ್ತಿ ಬಿದ್ದಿದೆ ಮಳೆ


ಈ ಬಾರಿ ಮಾನ್ಸೂನ್‌ ವಿಳಂಬವಾಗಿ ಆಗಮಿಸಿದರೂ ಉತ್ತಮವಾಗಿ ಮಳೆಯಾಗಿದೆ. ಇನ್ನೂ ಕೆಲವು ದಿನ ವರುಣ ಪ್ರತಾಪ ಜಾರಿಯಲ್ಲಿರಲಿದ್ದು, ಒಟ್ಟಾರೆ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ಮುಂಗಾರು ಸಾಮಾನ್ಯವಾಗಿ ಸೆ. 1ರಿಂದ ಮಂದಗತಿಗೆ ಹೊರಳುತ್ತದೆ, ಸೆ.30ಕ್ಕೆ ಅಂತ್ಯಗೊಳ್ಳುತ್ತದೆ. ಆದರೆ, ಈ ಬಾರಿ ಇನ್ನೂ ಮಂದಗತಿಗೆ ಹೊರಳಿಲ್ಲ.

ಮತ್ತೆ ಭಾರಿ ಮಳೆ: ಗುಜರಾತ್‌, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ನಡುವೆ ಸೌರಾಷ್ಟ್ರವನ್ನು ಹೊಂದಿಕೊಂಡಂತೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇದೆ. ಬಂಗಾಳ ಕೊಲ್ಲಿಯ ಉತ್ತರದಲ್ಲಿವಾಯುಭಾರ ಕುಸಿತ ಸಂಭವಿಸುವ ಸಾಧ್ಯತೆಗಳಿದ್ದು, ಹಲವು ಕಡೆ ಮಳೆ ಜೋರಾಗುವ ಸಾಧ್ಯತೆ ಇದೆ.

931.6 ಮಿ.ಮೀ
ಜೂ. 1ರಿಂದ ಸೆ.27ರವರೆಗಿನ ಮಳೆ

869 ಮಿ.ಮೀ.
ಸಾಮಾನ್ಯ ವಾಡಿಕೆ ಮಳೆ ಪ್ರಮಾಣ

ಮಳೆ ಹಂಚಿಕೆ ಹೇಗೆ?
11 ಉಪವಿಭಾಗ: ಅತಿವೃಷ್ಟಿ
09 ಉಪವಿಭಾಗ: ಅನಾವೃಷ್ಟಿ
18 ಉಪವಿಭಾಗ: ಸಾಮಾನ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ