ಆ್ಯಪ್ನಗರ

ಭಾರತ ಮುಸ್ಲಿಮರಿಗೆ ಸುರಕ್ಷಿತ ತಾಣ: ಸೂಫಿ ನಿಯೋಗ

ಪಾಕಿಸ್ತಾನ ಸುಳ್ಳು ಪ್ರಚಾರ ನಡೆಸುತ್ತ ಯುದ್ಧದ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. ಅವರ ಪ್ರಚಾರವೆಲ್ಲ ಸುಳ್ಳು ಎಂದು ಖುದ್ದು ಕಾಶ್ಮೀರಕ್ಕೆ ಭೇಟಿ ನೀಡಿರುವ ನಿಯೋಗ ಪ್ರತಿಕ್ರಿಯಿಸಿದೆ.

TIMESOFINDIA.COM 15 Oct 2019, 12:28 pm
ಶ್ರೀನಗರ: ಭಾರತ ಮುಸ್ಲಿಮರ ವಾಸಕ್ಕೆ ಅತ್ಯುತ್ತಮ ತಾಣ ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸೂಫಿ ಸಂತ ನಾಸಿರುದ್ದೀನ್ ಚಿಶ್ತಿ ಹೇಳಿದ್ದಾರೆ.
Vijaya Karnataka Web Chisti


ಅಕ್ಟೋಬರ್ 14ರಂದು ಚಿಶ್ತಿ ನೇತೃತ್ವದ ನಿಯೋಗ ಶ್ರೀನಗರಕ್ಕೆ ಭೇಟಿ ನೀಡಿತ್ತು. ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಿಶ್ತಿ, ನಾವು ಇಲ್ಲಿನ ಸ್ಥಳೀಯರನ್ನು ಭೇಟಿ ಮಾಡಿದೆವು. ಒಬ್ಬನೇ ಒಬ್ಬ ವ್ಯಕ್ತಿ ಸಹ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ದೂರಿಲ್ಲ. ಪಾಕಿಸ್ತಾನ ನಡೆಸುತ್ತಿರುವ ಪ್ರಚಾರದಲ್ಲಿ ಹುರುಳಿಲ್ಲ, ಎಂದರು.

2 ತಿಂಗಳಿಗಿಂತ ಹೆಚ್ಚು ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಫೋನ್‌ನಂತಹ ಮೂಲಭೂತ ಸೇವೆಗಳನ್ನು ನಿರ್ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆದರೆ ದೊಡ್ಡ ಹೆಜ್ಜೆ ಇಟ್ಟಾಗ ಅಂತಹ ನಿರ್ದೇಶನಗಳನ್ನು ನೀಡಲಾಗುತ್ತದೆ, ಅದು ಸಹಜ ಎಂದರು.

ಪಾಕಿಸ್ತಾನದ ಪ್ರಧಾನಿ, ಇಮ್ರಾನ್ ಖಾನ್ ಜಿಹಾದ್‌ಗೆ ಕರೆ ನೀಡಿರುವುದು ನಾಚಿಕೆಗೇಡು ಅಂದ ಅವರು ಪಾಕಿಸ್ತಾನಕ್ಕೆ ಯುದ್ಧದಲ್ಲಿ ಆಸಕ್ತಿ ಇದ್ದರೆ ಪ್ಯಾಲೆಸ್ತೈನ್ ಅಥವಾ ಚೀನಾಕ್ಕೆ ಹೋಗಿ ಯುದ್ಧ ಮಾಡಲಿ. ನಮಗೆ ಅವರ ಸಲಹೆ ಅಗತ್ಯವಿಲ್ಲ ಎಂದು ಗುಡುಗಿದ್ದಾರೆ.

72 ದಿನಗಳ ಬಳಿಕ ಕಾಶ್ಮೀರದಲ್ಲಿ ಮತ್ತೆ ರಿಂಗಣಿಸಿತು ಮೊಬೈಲ್

ಬರೋಬ್ಬರಿ 72 ದಿನಗಳ ಬಳಿಕ ಕಾಶ್ಮೀರ ಕಣಿವೆಯಲ್ಲಿಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸಂಪರ್ಕ ಸೇವೆಗಳು ಪುನರಾರಂಭ­ಗೊಂಡಿದ್ದು, ಈ ಮೂಲಕ ಮೊಬೈಲ್‌ ಸಂಪರ್ಕವೇ ಇಲ್ಲದೇ ಪರಿತಪಿಸುತ್ತಿದ್ದ ಸ್ಥಳೀಯ ಜನತೆಗೆ ನಿರಾಳತೆ ದೊರೆತಿದೆ.

ವದಂತಿಗಳಿಗೆ ಹಾಗೂ ಅಹಿತಕರ ಘಟನೆಗಳಿಗೆ ದಾರಿಮಾಡಿಕೊಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿಕೇಂದ್ರ ಸರಕಾರ 370ನೇ ವಿಧಿ ರದ್ದತಿ ವೇಳೆ ಆಗಸ್ಟ್‌ 5ರಿಂದ ಕಣಿವೆಯಲ್ಲಿಮೊಬೈಲ್‌ ಸಂಪರ್ಕ ಸೇವೆ ಸ್ಥಗಿತಗೊಳಿಸಿತ್ತು. ಇದರಿಂದ ಸ್ಥಳೀಯರಿಗೆ ತಮ್ಮ ಬಂಧು-ಬಳಗವನ್ನು ಸಂಪರ್ಕಿಸುವುದು ಕಷ್ಟವಾಗಿತ್ತು. ಕಣಿವೆಯಲ್ಲಿಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿಸುಧಾರಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11.45ರಿಂದ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಸಂಪರ್ಕ ಸೇವೆ ಪುನರಾರಂಭಿಸುವಂತೆ ಸರಕಾರ ಸೂಚಿಸಿದ ಬಳಿಕ ಬಿಎಸ್‌ಎನ್‌ಎಲ್‌ ಸೇರಿ ಹಲವು ಮೊಬೈಲ್‌ ಸೇವಾ ಕಂಪನಿಗಳು ಸೇವೆ ಪುನರಾರಂಭಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ