ಆ್ಯಪ್ನಗರ

ಕಮೋವ್‌ ಸೇನಾ ಹೆಲಿಕಾಪ್ಟರ್ ಖರೀದಿ ಒಪ್ಪಂದ, ನಿರ್ಮಾಣದ ಪುನರ್‌ಪರಿಶೀಲನೆ ನಡೆಸುವಂತೆ ರಷ್ಯಾಕ್ಕೆ ಭಾರತ ಮನವಿ

ರಷ್ಯಾದಿಂದ ಬಹು ಶತಕೋಟಿ ಡಾಲರ್‌ ಮೌಲ್ಯದ 200 ಕಮೋವ್‌ ಕೆಎ-226ಟಿ ದಾಳಿ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ನಡೆದಿದ್ದು, ಸದ್ಯ ಎಚ್‌ಎಎಲ್‌ನಲ್ಲಿ ನಿರ್ಮಾಣಕ್ಕೆ ನಿಗದಿಯಾಗಿರುವ 140 ಹೆಲಿಕಾಪ್ಟರ್‌ಗಳ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ ಭಾರತವು ರಷ್ಯಾಕ್ಕೆ ಮನವಿ ಮಾಡಿದೆ.

Vijaya Karnataka Web 19 Nov 2019, 8:22 am
ಹೊಸದಿಲ್ಲಿ: ರಷ್ಯಾ-ಭಾರತ ಒಪ್ಪಂದದಂತೆ 200 ಕಮೋವ್‌-226 ಹೆಲಿಕಾಪ್ಟರ್‌ ತಯಾರಿಕೆ ಪೈಕಿ ಎಚ್‌ಎಎಲ್‌ನಲ್ಲಿ ನಿರ್ಮಾಣಕ್ಕೆ ನಿಗದಿಯಾಗಿರುವ 140 ಹೆಲಿಕಾಪ್ಟರ್‌ಗಳ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪುನರ್‌ಪರಿಶೀಲನೆ ನಡೆಸುವಂತೆ ಭಾರತವು ರಷ್ಯಾಕ್ಕೆ ಮನವಿ ಮಾಡಿದೆ. ಸದ್ಯ ಸೇನೆಯಲ್ಲಿರುವ ಚೀತಾ ಮತ್ತು ಚೇತಕ್‌ ಹೆಲಿಕಾಪ್ಟರ್‌ಗಳ ಬದಲಿಗೆ ಕಮೋವ್‌-226ಟಿ ಖರೀದಿಗೆ ನಿರ್ಧರಿಸಲಾಗಿದೆ.
Vijaya Karnataka Web kamov chopper


ರಷ್ಯಾದಿಂದ 200 ಕಮೋವ್‌ ಸೇನಾ ಹೆಲಿಕಾಪ್ಟರ್‌ ಖರೀದಿ: ಒಪ್ಪಂದ ಪ್ರಕ್ರಿಯೆ ಅಕ್ಟೋಬರ್‌ಗೆ ಪೂರ್ಣ

ಒಪ್ಪಂದದಂತೆ 60 ಹೆಲಿಕಾಪ್ಟರ್‌ಗಳು ರಷ್ಯಾದಿಂದ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಪೂರೈಕೆಯಾಗಲಿವೆ. ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ಅವುಗಳಿಗೆ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಹೆಚ್ಚುವರಿ ಶಸ್ತಾ್ರಸ್ತ್ರಗಳ ಅಳವಡಿಕೆಯಾಗಲಿದೆ. ''ಎಲ್ಲ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಹಂತದಲ್ಲಿಯೇ ದೇಶೀಯ ಅವಶ್ಯಕತೆಗೆ ತಕ್ಕಂತೆ ತಯಾರಿಸಿದಲ್ಲಿ ಸೇನೆಗೆ ಮತ್ತಷ್ಟು ಬಲ ಸಿಗಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆ ಮತ್ತಷ್ಟು ಸದೃಢಗೊಳ್ಳಲಿದೆ. ಅದರಂತೆ ರಷ್ಯಾದ ಅಧಿಕಾರಿಗಳಿಗೆ ಒಪ್ಪಂದ ಪರಿಶೀಲನೆಗೆ ಸೂಚಿಸಿದ್ದೇವೆ,'' ಎಂದು ಭಾರತೀಯ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾದಿಂದ 200 ಕಮೋವ್‌ ಸೇನಾ ಹೆಲಿಕಾಪ್ಟರ್‌ ಖರೀದಿ: ಒಪ್ಪಂದ ಪ್ರಕ್ರಿಯೆ ಅಕ್ಟೋಬರ್‌ಗೆ ಪೂರ್ಣ

ಸದ್ಯ ಭಾರತೀಯ ಸೇನೆ ಮತ್ತು ವಾಯುಪಡೆಗೆ 187 ಲಘು ಹೆಲಿಕಾಪ್ಟರ್‌ಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಂಪೂರ್ಣ ದೇಶೀಯ ನಿರ್ಮಿತ ಲಘು ತೂಕದ ಬಹುಪಯೋಗಿ ಹೆಲಿಕಾಪ್ಟರ್‌ಗಳ (ಎಲ್‌ಯುಎಚ್‌) ಅಭಿವೃದ್ಧಿಯಲ್ಲಿ ಎಚ್‌ಎಎಲ್‌ ನಿರತವಾಗಿದೆ. ಮೂರು ಟನ್‌ ತೂಕದ ಎಲ್‌ಯುಎಚ್‌ಗಳು ಗಂಟೆಗೆ 220 ಕಿ.ಮೀ ಗರಿಷ್ಠ ವೇಗದಲ್ಲಿಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ.

ಭಾರತೀಯ ವಾಯುಪಡೆ ಭವಿಷ್ಯದ, ವಿಚ್ಛಿದ್ರಕಾರಕ ತಂತ್ರಜ್ಞಾನಗಳಿಗೆ ಮುಂದಾಳತ್ವ ವಹಿಸಬೇಕು

ಕಮೋವ್‌-226 ಹೆಲಿಕಾಪ್ಟರ್‌ಗಳ ತಯಾರಿಕೆಗಾಗಿ ಇಂಡೋ0ರಷ್ಯನ್‌ ಹೆಲಿಕಾಪ್ಟರ್ಸ್ ಲಿಮಿಟೆಡ್‌ (ಐಆರ್‌ಎಚ್‌ಎಲ್‌) ಎಂಬ ಸಂಸ್ಥೆಯನ್ನು 2017ರ ಮೇ ತಿಂಗಳಿನಲ್ಲಿ ರಚಿಸಲಾಗಿದೆ. ಇದರಲ್ಲಿಎಚ್‌ಎಎಲ್‌ ಶೇ.50.5, ರಷ್ಯನ್‌ ಹೆಲಿಕಾಪ್ಟರ್ಸ್ ಶೇ.42.5 ಹಾಗೂ ರೊಸೊಬೊರೊನೆಕ್ಸ್‌ಪೋರ್ಟ್‌ ಶೇ.7ರಷ್ಟು ಪಾಲು ಹೊಂದಿವೆ. ರಷ್ಯಾದ ಹೆಲಿಕಾಪ್ಟರ್‌ ಸಂಸ್ಥೆ ಹಾಗೂ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ