ಆ್ಯಪ್ನಗರ

ಭಾರತ-ಮ್ಯಾನ್ಮಾರ್‌ ಸೇನೆ ಜಂಟಿ ಕಾರಾರ‍ಯಚರಣೆ: 72 ಉಗ್ರರ ಸೆರೆ

ಭಾರತೀಯ ಸೇನೆ ಹಾಗೂ ಮ್ಯಾನ್ಮಾರ್‌ ಸೇನೆಯು ಪರಸ್ಪರ ಮಾಹಿತಿ ವಿನಿಮಯದ ಮೂಲಕ ತಮ್ಮ ಗಡಿ ಭಾಗದಲ್ಲಿದ್ದ ಉಗ್ರರ ಶಿಬಿರಗಳನ್ನು ನಾಶಪಡಿಸಿವೆ.

PTI 17 Jun 2019, 5:00 am
ಹೊಸದಿಲ್ಲಿ: ಭಾರತ ಹಾಗೂ ಮ್ಯಾನ್ಮಾರ್‌ ಸೇನೆಗಳು ಮೂರು ವಾರಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಈಶಾನ್ಯ ಭಾರತದ ಗಡಿ ಭಾಗದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು, 72 ಉಗ್ರರನ್ನು ಬಂಧಿಸಿವೆ. ಭಾರತೀಯ ಸೇನೆ ಹಾಗೂ ಮ್ಯಾನ್ಮಾರ್‌ ಸೇನೆಯು ಪರಸ್ಪರ ಮಾಹಿತಿ ವಿನಿಮಯದ ಮೂಲಕ ತಮ್ಮ ಗಡಿ ಭಾಗದಲ್ಲಿದ್ದ ಉಗ್ರರ ಶಿಬಿರಗಳನ್ನು ನಾಶಪಡಿಸಿವೆ. ಮೇ 16ರಿಂದ ಜೂನ್‌ 8ರವರೆಗೆ ನಡೆದ 'ಆಪರೇಷನ್‌ ಸನ್‌ರೈಸ್‌-2' ಹೆಸರಿನ ಕಾರ್ಯಾಚರಣೆಯಲ್ಲಿ ಉಭಯ ದೇಶದ ಸೇನೆಗಳು 'ಕಾಮ್ಟಾಪುರ ಲಿಬರೇಷನ್‌ ಆರ್ಗನೈಜೇಷನ್‌' (ಕೆಎಲ್‌ಒ), 'ನ್ಯಾಷನಲ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್‌ ನಾಗ್ಯಾಲ್ಯಾಂಡ್‌' (ಕಲ್ಪಾಂಗ್‌ ಬಣ), 'ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ' ಉಗ್ರ ಸಂಘಟನೆಗಳ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತ ಮತ್ತು ಮ್ಯಾನ್ಮಾರ್‌ ನಡುವೆ 1,640 ಕಿ.ಮೀ ಉದ್ದದ ಗಡಿಯಿದ್ದು, ಈ ಉಗ್ರರು ನಾಗಾಲ್ಯಾಂಡ್‌ ಮತ್ತು ಮಣಿಪುರದಂತಹ ಈಶಾನ್ಯ ರಾಜ್ಯಗಳ ಒಳಗೆ ನಿಯಮಿತವಾಗಿ ಒಳನುಸುಳಿ ವಿಧ್ವಂಸಕ ಕೃತ್ಯ ನಡೆಸಿ ಪರಾರಿಯಾಗುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ