ಆ್ಯಪ್ನಗರ

ಲಾಕ್‌ಡೌನ್‌ ಸಂಕಷ್ಟ:ಬಡವರ ಸಾಲಮನ್ನಾದಂತಹ ಯೋಜನೆಗೆ ಅಭಿಜಿತ್‌ ಬ್ಯಾನರ್ಜಿ ಸಲಹೆ

ಆರ್ಥಿಕತೆಯ ಕುರಿತು ಭಾರತೀಯ ಮೂಲದ ನೋಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದ್ದಾರೆ. ಆರ್ಥಿಕತೆಯನ್ನ ಮೇಲೆತ್ತಲು ಸರ್ಕಾರ ಅಮೆರಿಕಾದಂತಹ ಬೃಹತ್‌ ಉತ್ತೇಜಕ ಆರ್ಥಿಕ ಪ್ಯಾಕೆಜ್‌ಗಳನ್ನ ಜಾರಿಗೆ ತರಬೇಕು ಎಂದು ಅಭಿಜಿತ್‌ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 5 May 2020, 11:13 am
ನವದೆಹಲಿ: ಕೊರೊನಾ ವೈರಸ್‌ ಹಿನ್ನೆಲೆ ದೇಶದ್ಯಾಂತ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಇದರಿಂದಾಗಿ ದೇಶದಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿಲ್ಲ.ಹೀಗಾಗಿ ಬಡವರು, ಮಧ್ಯಮ ವರ್ಗದವರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆರ್ಥಿಕತೆಯ ಕುರಿತು ಭಾರತೀಯ ಮೂಲದ ನೋಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಜೊತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದ್ದಾರೆ.
Vijaya Karnataka Web nobel-laureate-abhijit-banerjee-some-personal-recollections


ಆರ್ಥಿಕತೆಯನ್ನ ಮೇಲೆತ್ತಲು ಸರ್ಕಾರ ಅಮೆರಿಕಾದಂತಹ ಬೃಹತ್‌ ಉತ್ತೇಜಕ ಆರ್ಥಿಕ ಪ್ಯಾಕೆಜ್‌ಗಳನ್ನ ಜಾರಿಗೆ ತರಬೇಕು ಎಂದು ಅಭಿಜಿತ್‌ ಬ್ಯಾನರ್ಜಿ ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನಿವೃತ್ತ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಜೊತೆ ಆರ್ಥಿಕತೆ ಕುರಿತಂತೆ ಚರ್ಚಿಸಿದ್ದರು. ಇದರ ಬೆನ್ಲಲ್ಲೆ ಇದೀಗ ನೊಬೆಲ್ ಪುರಸ್ಕೃತ, ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ ಜೊತೆ ಚರ್ಚೆ ನಡೆಸಿದ್ದು ಈ ವಿಡಿಯೋ ಕಾನ್ಫರೆನ್ಸ್‌ನ ವಿಡಿಯೋವನ್ನ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ.

ಇನ್ನು ಚರ್ಚೆ ವೇಳೆ ಅಭಿಜಿತ್ ಬ್ಯಾನರ್ಜಿ ಸದ್ಯ ದೇಶದ ಜನರ ಬಳಿ ಹಣವಿಲ್ಲ. ಹೀಗಾಗಿ ಬಡವರಿಗೆ ಕೈಗೆ ಹಣ ಸಿಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಡವರಿಗೆ ನೇರ ಹಣ ವರ್ಗಾವಣೆ ಹಾಗೂ ಸಾಲಮನ್ನಾದಂತಹ ಕ್ರಮ ಕೈಗೊಂಡರೆ ಬಡವರು ಮಾತ್ರವಲ್ಲದೆ ಸದ್ಯ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗಲಿದೆ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಬಡವರಿಗೆ ಹಣ ನೀಡುವ ಕೇಂದ್ರ ಸರ್ಕಾರ ಇದಕ್ಕಾಗಿ ಸರಿಯಾದ ಯೋಜನೆಗಳನ್ನ ರೂಪಿಸಿಕೊಳ್ಳಬೇಕು. ರಾಜ್ಯ ಸರ್ಕಾರಗಳ ಮೂಲಕ ಬಡವರನ್ನ ತಲುಪುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.

ಇನ್ನು ರೇಷನ್‌ ಕಾರ್ಡ್‌ ಇಲ್ಲದವರಿಗೆ ಅಕ್ಕಿ ಇನ್ನಿತರ ಸಾಮಾಗ್ರಿಗಳನ್ನ ವಿತರಿಸಲು ತಾತ್ಕಾಲಿಕವಾಗಿ ರೇಷನ್ ಅಂಗಡಿಗಳನ್ನ ಸರ್ಕಾರ ತೆರೆಯಬೇಕು ಎಂದು ಆರ್ಥಿಕ ತಜ್ಞ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಸಣ್ಣ ಕೈಗಾರಿಕೆಗಳು ಮುಂದಿನ ದಿನಗಳಲ್ಲಿ ಎದುರಿಸೋ ಸಮಸ್ಯೆಗಳ ಬಗ್ಗೆ ರಾಹುಲ್‌ ಗಾಂಧಿ ಪ್ರಸ್ತಾಪಿಸಿದಾಗ. ಭಾರತ ಬೃಹತ್‌ ಉತ್ತೇಜಕ ಆರ್ಥಿಕ ಪ್ಯಾಕೆಜ್‌ಗನ್ನ ಘೋಷಿಸುವ ಅಗತ್ಯವಿದೆ. ಭಾರತ ಈಗಾಗಲೇ ಜಿಡಿಪಿಯ ಶೇ.1 ರಷ್ಟು ಮಾತ್ರವಿರುವ ಪ್ಯಾಕೇಜ್‌ ಘೋಷಿಸಿದೆ. ಆದ್ರೆ ಅಮೆರಿಕಾ ಈಗಾಗಲೇ ಅವರ ಆರ್ಥಿಕತೆಯ ಶೇ.10ರಷ್ಟು ಉತ್ತೇಜಕ ಪ್ಯಾಕೇಜ್‌ ಘೋಷಿಸಿದೆ. ಭಾರದಲ್ಲೂ ಇಂತಹ ಪ್ಯಾಕೇಜ್‌ನ ಅವಶ್ಯಕತೆ ಇದೆ ಎಂದು ಅಭಿಜಿತ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ