ಆ್ಯಪ್ನಗರ

ತಿರುಗಿ ಕೊಟ್ಟ ಭಾರತ: ಪ್ಯಾಂಗಾಂಗ್ ತ್ಸೋದಿಂದ ಹಿಂದೆ ಸರಿಯಲ್ಲ ಎಂದಿದ್ದಕ್ಕೆ ಬೆಚ್ಚಿಬಿದ್ದ ಚೀನಾ!

ಐದನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಪ್ಯಾಂಗಾಂಗ್ ತ್ಸೋ ಸರೋವರದ ಫಿಂಗರ್ ಪಾಯಿಂಟ್‌ನಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ ಚೀನಾಗೆ, ಭಾರತೀಯ ಸೇನೆ ಖಡಕ್ ಉತ್ತರ ನೀಡಿದೆ. ಯಾವುದೇ ಕಾರಣಕ್ಕೂ ಈ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವುದಿಲ್ಲ ಎಂದು ಭಾರತೀಯ ಸೇನೆ ಚೀನಾಗೆ ಸ್ಪಷ್ಟವಾಗಿ ತಿಳಿಸಿದೆ.

Vijaya Karnataka Web 6 Aug 2020, 3:28 pm
ಲಡಾಖ್: ಗಡಿಯಿಂದ ಸೈನ್ಯ ಹಿಂಪಡೆಯುವ ನಾಟಕವಾಡುತ್ತಿರುವ ಅದರದ್ದೇ ಆದ ಭಾಷೆಯಲ್ಲಿ ಮಾತನಾಡಲು ಆರಂಭಿಸಿರುವ ಭಾರತ, ಈಶಾನ್ಯ ಲಡಾಖ್ ಗಡಿಯ ಪ್ಯಾಂಗಾಂಗ್ ತ್ಸೋ ಸರೋವರದಿಂದ ಹಿಂದೆ ಸರಿಯಲು ಸ್ಪಷ್ಟವಾಗಿ ನಿರಾಕರಿಸಿದೆ.
Vijaya Karnataka Web ladakh
ಸಂಗ್ರಹ ಚಿತ್ರ


ಹೌದು, ಇತ್ತೀಚಿಗೆ ನಡೆದ ಉನ್ನತ ಸೇನಾ ಕಮಾಂಡರ್ ಮಟ್ಟದ ಐದನೇ ಸುತ್ತಿನ ಮಾತುಕತೆಯಲ್ಲಿ, ಪ್ಯಾಂಗಾಂಗ್ ತಸೋ ಸರೋವರದ ಬಳಿಯ ಫಿಂಗರ್ ಪಾಯಿಂಟ್ 3ನ ಧನ್ ಸಿಂಗ್ ಥಾಪಾ ಪೋಸ್ಟ್‌ನಿಂದ ಭಾರತ ತನ್ನ ಸೈನ್ಯವನ್ನು ಹಿಂಪಡೆಯುವಂತೆ ಚೀನಾ ಒತ್ತಾಯಿಸಿದೆ.

ಉತ್ತರ ಲಡಾಖ್‌ನಲ್ಲಿ ಸೈನ್ಯ ಬಲವರ್ಧನೆ: ಚೀನಾಗೆ ಟಕ್ಕರ್ ನೀಡಲು ಟ್ಯಾಂಕ್ ರೆಜಿಮೆಂಟ್ ರವಾನೆ!
ಆದರೆ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿರುವ ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಧನ್ ಸಿಂಗ್ ಥಾಪಾ ಪೋಸ್ಟ್‌ನಿಂದ ಸೈನ್ಯವನ್ನು ಹಿಂಪಡೆಯುವುದಿಲ್ಲ ಎಂದು ಖಡಕ್ ಪ್ರತ್ಯುತ್ತರ ನೀಡಿದೆ.

ಫಿಂಗರ್ ಪಾಯಿಂಟ್ 3 ಭಾರತದ ಗಡಿಯೊಳಗಿನ ಪ್ರದೇಶವಾಗಿದ್ದು, ಇಲ್ಲಿ ಸೇನೆ ನಿಯೋಜನೆ ಮಾಡುವುದು ತನ್ನ ಹಕ್ಕು ಎಂದು ಭಾರತ ಪ್ರತಿಪಾದಿಸಿದೆ. ಅಲ್ಲದೇ ಚೀನಿ ಸೇನೆಯನ್ನು ವಾಸ್ತವ ಗಡಿ ರೇಖೆ(ಎಲ್‌ಎಸಿ)ಯ ಫಿಂಗರ್ ಪಾಯಿಂಟ್ 8ರವರೆಗೂ ಹಿಂದಕ್ಕೆ ಸರಿಯುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಭಾರತ-ಚೀನಾ 5ನೇ ಸುತ್ತಿನ ಮಿಲಿಟರಿ ಮಾತುಕತೆ: ಸಂಪೂರ್ಣ ಸೈನ್ಯ ತೆರವಿಗೆ ಒತ್ತಾಯಿಸಲಿದೆ ಭಾರತ!

ಮಾತುಕತೆಯಲ್ಲಿ ಭಾರತದ ಸೌಮ್ಯ ವರ್ತನೆಯನ್ನೇ ದೌರ್ಬಲ್ಯ ಎಂದು ಭಾವಿಸಿದ್ದ ಚೀನಾಗೆ, ಪ್ಯಾಂಗಾಗ್ ತ್ಸೋ ಸರೋವರದ ಬಳಿ ಸೇನೆಯನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸುವ ಮೂಲಕ ಭಾರತೀಯ ಸೇನೆ ತನ್ನ ತಾಕತ್ತಿನ ಪ್ರದರ್ಶನ ಮಾಡಿದೆ.

ಇನ್ನು ಭಾರತದ ಈ ನಿರ್ಧಾರದಿಂದ ಕಂಗಾಲಾಗಿರುವ ಚೀನಾ, ಫಿಂಗರ್ ಪಾಯಿಂಟ್ 8ರವರೆಗೂ ತನ್ನ ಸೇನೆಯನ್ನು ಹಿಂಪಡೆಯದೇ ಬೇರೆ ದಾರಿಯಿಲ್ಲ ಎಂಬ ಸತ್ಯವನ್ನು ಅರಿತಂತಿದೆ.

ಚಳಿಗಾಲದಲ್ಲೂ ಲಡಾಖ್ ಗಡಿಯಲ್ಲಿ ಇದೇ ಸೈನ್ಯ ಸಾಮರ್ಥ್ಯ ಹೊಂದಲಿರುವ ಭಾರತೀಯ ಸೇನೆ: ಯಾಕೆ?

ಒಟ್ಟಿನಲ್ಲಿ ಭಾರತ-ಚೀನಾ ಸೇನೆ ನಡುವಿನ ಐದನೇ ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಭಾರತದ ದೃಢ ನಿರ್ಧಾರಗಳು ಚೀನಾವನ್ನು ದಂಗು ಬಡಿಸಿದ್ದು, ಗಡಿಯಿಂದ ಸಂಪೂರ್ಣ ಸೈನ್ಯ ತೆರವಿಗೆ ಡ್ರ್ಯಾಗನ್ ಸಜ್ಜಾಗುತ್ತಿರುವುದು ಸ್ಪಷ್ಟ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ