ಆ್ಯಪ್ನಗರ

ಲಡಾಖ್ ಎಲ್‌ಎಸಿ ಕುರಿತ ಚೀನಾದ ಏಕಪಕ್ಷೀಯ ವ್ಯಾಖ್ಯಾನವನ್ನು ತಿರಸ್ಕರಿಸಿದ ಭಾರತ!

ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಕುರಿತ ಚೀನಾದ ವ್ಯಾಖ್ಯಾನವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದು, ಚೀನಾದ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಚೀನಾ ಎಲ್‌ಎಸಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನ ನಡೆಸುತ್ತಿದೆ ಎಂದು ಭಾರತ ಗಂಭೀರ ಆರೋಪ ಮಾಡಿದೆ.

Vijaya Karnataka Web 29 Sep 2020, 5:10 pm
ಹೊಸದಿಲ್ಲಿ: ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಕುರಿತ ಚೀನಾದ ವ್ಯಾಖ್ಯಾನವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದು, ಚೀನಾದ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
Vijaya Karnataka Web Ladakh
ಸಂಗ್ರಹ ಚಿತ್ರ


ಚೀನಾ ಎಲ್‌ಎಸಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನ ನಡೆಸುತ್ತಿದ್ದು, ಈ ಪ್ರಯತ್ನಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಗಡಿ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿದ ಭಾರತ

1959ರಲ್ಲಿ ಎಲ್‌ಎಸಿ ಕುರಿತು ಚೀನಾ ಮಾಡಿದ್ದ ವ್ಯಾಖ್ಯಾನವನ್ನು ಪರಸ್ಪರ ಒಪ್ಪಿಕೊಳ್ಳಲಾಗಿಲ್ಲ. ಅದೇ ರೀತಿ ಎಲ್‌ಎಸಿ ಕುರಿತ ಏಕಪಕ್ಷೀಯ ತೀರ್ಮಾನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಖಡಕ್ ಆಗಿ ಹೇಳಿದೆ.



ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ, ಲಡಾಖ್‌ನ ಎಲ್‌ಎಸಿ ಕುರಿತ ಚೀನಾದ ಏಕಪಕ್ಷೀಯ ವ್ಯಾಖ್ಯಾನವನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.

ಅಸಲಿಗೆ ವಾಸ್ತವ ನಿಯಂತ್ರಣ ರೇಖೆಯನ್ನು ಸ್ಪಷ್ಟವಾಗಿ ಗುರಿತಿಸುವ ಕಾರ್ಯ ಇದುವರೆಗೂ ಪೂರ್ಣಗೊಳ್ಳದಿರಲು, ಈ ನಿಟ್ಟಿನಲ್ಲಿ ಚೀನಾ ಬದ್ಧತೆ ತೋರದಿರುವುದೇ ಕಾರಣ ಎಂದು ಭಾರತ ಗಂಭೀರ ಆರೋಪ ಮಾಡಿದೆ.

ಪಾಕ್‌-ಚೀನಾ ಒಟ್ಟಿಗೆ ಬಂದರೂ ಎದುರಿಸಲು ವಾಯು ಸೇನೆ ಸಿದ್ಧ..! ರಾತ್ರಿಯೂ ಆಪರೇಷನ್‌ ನಡೆಸುವ ಸಾಮರ್ಥ್ಯ

ಎಲ್‌ಎಸಿ ಗುಂಟ ಗಡಿ ಸಮಸ್ಯೆಯನ್ನು ಜೀವಂತವಾಗಿಡಲು ಚೀನಾ ಬಯಸಿದ್ದು, ಇದಕ್ಕೆ ಪೂರಕವಾಗಿ ಏಕಪಕ್ಷೀಯವಾಗಿ ಗಡಿ ವ್ಯಾಖ್ಯಾನವನ್ನು ಮಾಡುತ್ತಿದೆ. ಆದರೆ ಭಾರತ ಇಂತಹ ಅಪ್ರಬುದ್ಧ ವ್ಯಾಖ್ಯಾನಗಳನ್ನು ಒಪ್ಪುವುದಿಲ್ಲ ಎಂದು ಚೀನಾಗೆ ಖಡಕ್ ಸಂದೇಶ ರವಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ