ಆ್ಯಪ್ನಗರ

370ನೇ ವಿಧಿ ರದ್ದತಿ ಕುರಿತು ವ್ಯತಿರಿಕ್ತ ಹೇಳಿಕೆ ನೀಡಿದ ಟರ್ಕಿಗೆ ಭಾರತದ ತಿರುಗೇಟು!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ, ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮಾಡುವ ಭಾರತದ ಉದ್ದೇಶ ಈಡೇರಿಲ್ಲ ಎಂಬ ಟರ್ಕಿ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

Vijaya Karnataka Web 6 Aug 2020, 7:37 pm
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ, ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮಾಡುವ ಭಾರತದ ಉದ್ದೇಶ ಈಡೇರಿಲ್ಲ ಎಂಬ ಟರ್ಕಿ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
Vijaya Karnataka Web article 370
ಸಂಗ್ರಹ ಚಿತ್ರ


ಈ ಕುರಿತು ಮಾತನಾಡಿರುವ ಭಾರತ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಟರ್ಕಿ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಟಿಕಲ್‌ 370 ರದ್ದಿಗೆ 1 ವರ್ಷ, ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ಜಾರಿ

370ನೇ ವಿಧಿ ರದ್ದತಿಯ ವರ್ಷಾಚರಣೆ ಕುರಿತು ಪ್ರತಿಕ್ರಿಯೆ ನೀಡಿದ್ದ ಟರ್ಕಿ, ಮೋದಿ ಸರ್ಕಾರ 370ನೇ ವಿಧಿ ರದ್ದು ಮಾಡುವ ಮೂಲಕ ಕಣಿವೆಯಲ್ಲಿ ಶಾಂತಿ ಸ್ಥಾಪನೆಯ ಉದ್ದೇಶವನ್ನೇ ಹಾಳು ಮಾಡಿದೆ ಎಂದು ವಿಶ್ಲೇಷಿಸಿತ್ತು.

ಟರ್ಕಿಯ ಈ ವಿಶ್ಲೇಷಣೆಗೆ ಗರಂ ಆಗಿರುವ ಭಾರತ, ಟರ್ಕಿ ಭಾರತದ ಆಂತರಿಕ ವಿಚಾರಗಳ ಕುರಿತು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಟರ್ಕಿಯ ಹೇಳಿಕೆಯನ್ನು ಅಸಂಬದ್ಧ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಜರೆದಿದ್ದಾರೆ.

370 ರದ್ದು, ತಲಾಕ್‌ ನಿಷೇಧಕ್ಕೆ ವರ್ಷ: ದೇಶಾದ್ಯಂತ ಕಾರ್ಯಕ್ರಮ!

ಕಣಿವೆಯ ಶಾಂತಿಯ ಕುರಿತು ಟರ್ಕಿ ವಿಶ್ಲೇಷಣೆ ಸಂಪೂರ್ಣ ತಪ್ಪು ಎಂದಿರುವ ಅನುರಾಗ್ ಶ್ರೀವಾತ್ಸವ್, ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಟರ್ಕಿ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

370ನೇ ವಿಧಿ ರದ್ದತಿಯ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಹೊಸ ಪರ್ವದತ್ತ ಹೊರಳಿದ್ದು, ಶಾಂತಿಯ ಗೂಡಾಗಿ ಪರಿವರ್ತನೆಯಾಗಿದೆ ಎಂದು ಭಾರತ ಬಣ್ಣಿಸಿರುವುದನ್ನು ಇಲ್ಲಿ ಗಮನಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ