ಆ್ಯಪ್ನಗರ

ರಷ್ಯಾನಿರ್ಮಿತ ಆರ್‌-27 ಕ್ಷಿಪಣಿ ಖರೀದಿಗೆ ಒಡಂಬಡಿಕೆ

ರಷ್ಯಾದ ಈ ದೂರಗಾಮಿ ಕ್ಷಿಪಣಿಗಳ ಸೇರ್ಪಡೆಯಿಂದ ಸುಖೋಯ್‌ ವಿಮಾನಗಳ ಯುದ್ಧ ಸಾಮರ್ಥ್ಯ‌ಕ್ಕೆ ಭೀಮಬಲ ದಕ್ಕಲಿದೆ ಎಂದು ಸೇನಾ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

Agencies 30 Jul 2019, 5:00 am
ಹೊಸದಿಲ್ಲಿ: ಶತ್ರು ಸಂಹಾರ ಸುಖೋಯ್‌-30 ಯುದ್ಧವಿಮಾನಗಳಲ್ಲಿ ಪ್ರಬಲ ಅಸ್ತ್ರವಾಗಿ ಬಳಕೆಯಾಗುವ ಆರ್‌-27 ಕ್ಷಿಪಣಿಗಳ ಖರೀದಿಗೆ ಭಾರತವು ರಷ್ಯಾ ಜತೆ ಒಡಂಬಡಿಕೆ ಮಾಡಿಕೊಂಡಿದೆ.
Vijaya Karnataka Web india russia sign rs 1500 crore deal for air to air missiles for su 30 fighters
ರಷ್ಯಾನಿರ್ಮಿತ ಆರ್‌-27 ಕ್ಷಿಪಣಿ ಖರೀದಿಗೆ ಒಡಂಬಡಿಕೆ


''ಸುಖೋಯ್‌-30 ಎಂಕೆಐ ಯುದ್ಧ ವಿಮಾನಗಳಿಗೆ ಜೋಡಿಸಿ, ವಾಯು ಮಾರ್ಗದಲ್ಲಿಯೇ ಶತ್ರು ಪಡೆಗಳ ಮೇಲೆ ದಾಳಿ ನಡೆಸಬಲ್ಲ ಆರ್‌-27 ಕ್ಷಿಪಣಿಗಳ ಖರೀದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು 1,500 ಕೋಟಿ ರೂ.ಗಳ ಒಡಂಬಡಿಕೆ,'' ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ರಷ್ಯಾದ ಈ ದೂರಗಾಮಿ ಕ್ಷಿಪಣಿಗಳ ಸೇರ್ಪಡೆಯಿಂದ ಸುಖೋಯ್‌ ವಿಮಾನಗಳ ಯುದ್ಧ ಸಾಮರ್ಥ್ಯ‌ಕ್ಕೆ ಭೀಮಬಲ ದಕ್ಕಲಿದೆ ಎಂದು ಸೇನಾ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಬಿಗಿ ಷರತ್ತು: ಈ ಬಾರಿ ವಾರ್‌ ವೇಸ್ಟೇಜ್‌ ರಿಸರ್ವ್‌ (ಡಬ್ಲ್ಯುಡಬ್ಲ್ಯುಆರ್‌) ಷರತ್ತಿನಡಿ ಈ ಕ್ಷಿಪಣಿಗಳ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ, ರಷ್ಯಾ ತಾನು ಪೂರೈಸುವ ಶಸ್ತ್ರಾಸ್ತ್ರಗಳ ಮೂರು ಸವೀರ್‍ಸ್‌ ಮಾಡುವುದು ಕಡ್ಡಾಯವಾಗಿದೆ. ಜತೆಗೆ ನಿರ್ದಿಷ್ಟ ಅವಧಿಯಲ್ಲಿ ಸಮಸ್ಯೆ ಕಾಣಿಸಿದರೆ ಅಂತಹ ಕ್ಷಿಪಣಿಗಳಿಗೆ ಪರ್ಯಾಯ ಕ್ಷಿಪಣಿ ಒದಗಿಸುವುದನ್ನು ಷರತ್ತಿನಲ್ಲಿ ಸೇರಿಸಲಾಗಿದೆ. ಆರ್‌-27 ಕ್ಷಿಪಣಿಗಳನ್ನು ರಷ್ಯಾ ನಿರ್ಮಿತ ಮಿಗ್‌ ಮತ್ತು ಸುಖೋಯ್‌ ಯುದ್ಧ ವಿಮಾನ ಸರಣಿಯ ಬಳಕೆಗಾಗಿಯೇ ಅಭಿವೃದ್ಧಿ ಪಡಿಸಲಾಗಿದೆ.

ಕಳೆದ 50 ದಿನಗಳಲ್ಲಿ ಭಾರತೀಯ ವಾಯುಪಡೆಯು 7600 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳ ಖರೀದಿ ಒಪ್ಪಂದ ಮಾಡಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ