ಆ್ಯಪ್ನಗರ

ಭಾರತದಿಂದಲೇ 150 ರಾಷ್ಟ್ರಗಳಿಗೆ ಅಗತ್ಯ ಔಷಧ ರವಾನೆ: ಮೋದಿ

ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ ವಿಶ್ವಸಂಸ್ಥೆ ವೇದಿಕೆಯಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮುದ್ರಿತ ವಿಡಿಯೊ ಭಾಷಣ ಪ್ರಸಾರ ಮಾಡಲಾಗಿತ್ತು. ಕೂಡಲೇ ಭಾರತದ ಪ್ರತಿನಿಧಿ ಮಿಜಿತೊ ವಿನಿತೊ ಎದ್ದು ಹೊರನಡೆಯುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

Vijaya Karnataka Web 27 Sep 2020, 1:55 pm
ಹೊಸದಿಲ್ಲಿ: ''ಕಳೆದ 8-9 ತಿಂಗಳಿನಲ್ಲಿ ಇಡೀ ವಿಶ್ವವೇ ಕೊರೊನಾ ಸಾಂಕ್ರಾಮಿಕ ದಾಳಿಗೆ ತತ್ತರಿಸಿದೆ. ಇದನ್ನು ಎದುರಿಸುವಲ್ಲಿ ವಿಶ್ವಸಂಸ್ಥೆಯ ಜಂಟಿ ನೆರವು ಎಲ್ಲಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದರು.

ವರ್ಚುಯಲ್‌ ಸ್ವರೂಪದಲ್ಲಿನಡೆಯುತ್ತಿರುವ ವಿಶ್ವಸಂಸ್ಥೆಯ 75ನೇ ವಾರ್ಷಿಕ ಮಹಾಧಿವೇಶನವನ್ನು ಶನಿವಾರ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.

''ಭಾರತವೊಂದೇ ಕೊರೊನಾ ಆತಂಕದ ನಡುವೆಯೇ 150 ವಿದೇಶಿ ರಾಷ್ಟ್ರಗಳಿಗೆ ಅಗತ್ಯವಾದ ಔಷಧ ಮತ್ತು ಇತರ ಸಾಮಗ್ರಿಗಳನ್ನು ರವಾನಿಸಿದೆ. ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಉತ್ಪಾದನಾ ವಲಯ ಹೊಂದಿರುವ ಭಾರತ, ಕೊರೊನಾ ಆಪತ್ತಿನಿಂದ ಶೀಘ್ರವೇ ಜಗತ್ತನ್ನು ಪಾರುಮಾಡುವ ಭರವಸೆ ನೀಡುತ್ತೇನೆ. ಒಂದೇ ದೇಶಕ್ಕೆ ನೆರವು ನೀಡುವುದು ಎಂದರೆ ಮತ್ತೊಂದಕ್ಕೆ ಕೇಡು ಉಂಟುಮಾಡುವ ಸಂಸ್ಕೃತಿ ಭಾರತದ್ದಲ್ಲ. ಪಾಲುದಾರಿಕೆಯಲ್ಲಿ ಅಭಿವೃದ್ಧಿ ಹೊಂದುವುದು ನಮ್ಮ ಧ್ಯೇಯ'' ಎಂದು ಹೇಳಿದರು.

ಮೂರನೇ ವಿಶ್ವಯುದ್ಧವನ್ನು ನಾವು ಯಶಸ್ವಿಯಾಗಿ ತಡೆದಿದ್ದೇವೆ. ಆದರೆ ಉಗ್ರರ ದಾಳಿಗಳಿಂದ ಜಗತ್ತೇ ತಲ್ಲಣಿಸಿದೆ. ನನ್ನಂತಹವರು , ನಿಮ್ಮಂತಹವರು ಹಾಗೂ ಅನೇಕ ಮಕ್ಕಳು ದಾಳಿಗೆ ಬಲಿಯಾಗಿದ್ದಾರೆ. ಮುಂದಿನ ವರ್ಷದಿಂದ ಯುಎನ್‌ಎಸ್‌ಸಿಯಲ್ಲಿಕೂತು ಶಾಂತಿ ಸ್ಥಾಪನೆ, ಭದ್ರತೆಗೆ ಒತ್ತು ನೀಡುತ್ತೇವೆ.
ನರೇಂದ್ರ ಮೋದಿ, ಪ್ರಧಾನಿ

21 ನಿಮಿಷ ಹಿಂದಿಯಲ್ಲಿ ಭಾಷಣ

ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಸಭೆ ಹಾಲ್‌ನಲ್ಲಿ ಪ್ರಧಾನಿ ಮೋದಿ ಅವರ ಪೂರ್ವ ಮುದ್ರಿತ ವಿಡಿಯೊ ಭಾಷಣವನ್ನು ಪ್ರದರ್ಶಿಸಲಾಯಿತು. ಸದಸ್ಯ ರಾಷ್ಟ್ರದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು. 21 ನಿಮಿಷ ಕಾಲ ಪ್ರಧಾನಿ ಹಿಂದಿಯಲ್ಲಿ ಮಾತನಾಡಿದರು.

ಇಮ್ರಾನ್‌ ಭಾಷಣ ವೇಳೆ ಹೊರನಡೆದ ಭಾರತ ಪ್ರತಿನಿಧಿ

ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ ವಿಶ್ವಸಂಸ್ಥೆ ವೇದಿಕೆಯಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮುದ್ರಿತ ವಿಡಿಯೊ ಭಾಷಣ ಪ್ರಸಾರ ಮಾಡಲಾಗಿತ್ತು. ಕೂಡಲೇ ಭಾರತದ ಪ್ರತಿನಿಧಿ ಮಿಜಿತೊ ವಿನಿತೊ ಎದ್ದು ಹೊರನಡೆಯುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

ಇದಕ್ಕೆ ಕಾರಣ, ಇಮ್ರಾನ್‌ ಪದೇಪದೆ ಕಾಶ್ಮೀರ ವಿಚಾರವನ್ನು ಭಾಷಣದಲ್ಲಿ ಪ್ರಸ್ತಾಪಿಸಿದ್ದಾಗಿತ್ತು. ಬಳಿಕ ಉತ್ತರ ನೀಡುವ ಹಕ್ಕು ಬಳಸಿಕೊಂಡ ಮಿಜಿತೊ, '' ಭಾರತದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರದ ಬಗ್ಗೆ ಪಾಕ್‌ನ ಹುಸಿ ಆರೋಪಗಳು ಒಪ್ಪುವಂಥದ್ದಲ್ಲ. ಪಾಕ್‌ನ ಆಕ್ರಮಿತ ಪ್ರದೇಶದಲ್ಲಿ ಮಾತ್ರ ಸದ್ಯ ಬಿಕ್ಕಟ್ಟು ಉಳಿದಿದೆ, ಹಾಗಾಗಿ ಪಾಕ್‌ ನಮ್ಮ ದೇಶದಿಂದ ಜಾಗ ಖಾಲಿ ಮಾಡಿದರೆ ಒಳಿತು'' ಎಂದು ಖಡಕ್ಕಾಗಿ ಹೇಳಿದರು.

''ಕಳೆದ ಜುಲೈನಲ್ಲಿ ಪಾಕ್‌ ಸಂಸತ್ತಿನಲ್ಲಿಉಗ್ರ ಲಾಡೆನ್‌ನನ್ನು ಹುತಾತ್ಮ ಎಂದಿದ್ದ ಇಮ್ರಾನ್‌ ಖಾನ್‌ ಅವರಿಗೆ ವಿಶ್ವಸಂಸ್ಥೆಯಲ್ಲಿ ಉಲ್ಲೇಖಿಸಲು ತಮ್ಮ ದೇಶದ ಸಾಧನೆಗಳೇ ಇಲ್ಲಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸುಳ್ಳು ಸುದ್ದಿ, ದ್ವೇಷ ಬಿತ್ತನೆ ಮಾತ್ರ ಅವರ ಕೆಲಸವಾಗಿದೆ'' ಎಂದು ಮಿಜಿತೊ ವಿನಿತೊ ಗುಡುಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ