ಆ್ಯಪ್ನಗರ

ವಿರೋಧ ಪಕ್ಷಗಳ ವಿರೋಧಕ್ಕೆ ಮಣಿದ ಮೋದಿ; ಆರ್‌ಸಿಇಪಿ ಒಪ್ಪಂದಕ್ಕೆ 'ನೋ'ಅಂದ ಭಾರತ

ಪ್ರಾದೇಶಿಕ ಸಮಗ್ರ ಅಭಿವೃದ್ದಿ ಸಹಭಾಗಿತ್ವ( ಆರ್‌ಸಿಇಪಿ) ಒಪ್ಪಂದದಿಂದ ಭಾರತ ಕೊನೆಗೂ ಹಿಂದೆ ಸರಿದಿದೆ. ಕೇಂದ್ರ ಸರಕಾರದ ನಿಲುವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸಿದ್ದವು. ದೇಶಾದ್ಯಂತ ರೈತರು ಕೂಡಾ ಪ್ರತಿಭಟನೆ ನಡೆಸಿದ್ದರು.

Vijaya Karnataka Web 4 Nov 2019, 10:36 pm
ಹೊಸದೆಹಲಿ: ಪ್ರಾದೇಶಿಕ ಸಮಗ್ರ ಅಭಿವೃದ್ದಿ ಸಹಭಾಗಿತ್ವ ( ಆರ್‌ಸಿಇಪಿ) ಮತ್ತು ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತ ಹಿಂದೆ ಸರಿದಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 'ಅಸಿಯಾನ್' ರಾಷ್ಟ್ರಗಳ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ರಾಷ್ಟ್ರದ ಹಿತಾಸಕ್ತಿಯಿಂದ ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷಗಳು ಹಾಗೂ ರೈತರ ಒತ್ತಡಕ್ಕೆ ಕೊನೆಗೂ ಕೇಂದ್ರ ಸರಕಾರ ಮಣಿದಿದೆ.
Vijaya Karnataka Web india wont join asian trade deal rcep says pm modi
ವಿರೋಧ ಪಕ್ಷಗಳ ವಿರೋಧಕ್ಕೆ ಮಣಿದ ಮೋದಿ; ಆರ್‌ಸಿಇಪಿ ಒಪ್ಪಂದಕ್ಕೆ 'ನೋ'ಅಂದ ಭಾರತ


ಏನಿದು ಆರ್‌ಸಿಇಪಿ ಒಪ್ಪಂದ? ಇದರಿಂದ ಭಾರತದಲ್ಲಿ ಬೃಹತ್‌ ಉದ್ಯೋಗ ನಾಶವಾಗೋದು ಹೇಗೆ?

ಆರ್‌ಸಿಇಪಿ ವಿರುದ್ಧ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಜೊತೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಇಂದು ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.ದೇಶದಾದ್ಯಂತ ಆರ್‌ಸಿಇಪಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.


ಆರ್‌ಸಿಇಪಿ ಒಪ್ಪಂದ ಅದರ ಮೂಲ ಆಶಯವನ್ನು ಪ್ರತಿಫಲಿಸುತ್ತಿಲ್ಲ ಹಾಗೂ ನ್ಯಾಯಯುತವಾಗಿಲ್ಲ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಆರ್‌ಸಿಇಪಿ ಒಪ್ಪಂದದ ಅಂತಿಮ ಘಟ್ಟದವರೆಗೂ ಹೋಗಿದ್ದ ಭಾರತ ಕೊನೆಯ ಗಳಿಗೆಯಲ್ಲಿ ನಿರ್ಧಾರ ಬದಲಾಯಿಸಿದೆ.

ಕೃಷಿಗೆ ಕುತ್ತು, ಉದ್ಯಮಕ್ಕೂ ಆಪತ್ತು: ಭಾರತದ ಆರ್ಥಿಕತೆ ಮೇಲೆ ಗದಾಪ್ರಹಾರಕ್ಕೆ ಕಾದು ಕುಳಿತಿದೆ ಆರ್‌ಸಿಇಪಿ ಮುಕ್ತ ಒಪ್ಪಂದ

ಏನಿದು ಆರ್‌ಸಿಇಪಿ ?


ಆರ್‌ಸಿಇಪಿ ವಿಶ್ವದ 16 ರಾಷ್ಟ್ರಗಳು ಜೊತೆಗೂಡಿ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದವಾಗಿದೆ. ಇದರಲ್ಲಿ ಭಾರತ ಒಳಗೊಂಡು ಏಷ್ಯಾ ರಾಷ್ಟ್ರಗಳ ಒಕ್ಕೂಟದ 10 ದೇಶಗಳು ಸೇರಿವೆ. ಜೊತೆಗೆ ಆಸ್ಟ್ರೇಲಿಯಾ, ಚೀನಾ, ಸೌತ್ ಕೊರಿಯಾ, ಜಪಾನ್ ಹಾಗೂ ನ್ಯೂಜಿಲೆಂಡ್ ರಾಷ್ಟ್ರಗಳು ಸೇರಿಕೊಂಡಿವೆ. ಈ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕೆ ಒಪ್ಪಂದವಾದರೆ ವಿಶ್ವದ ಗಮನ ಸೆಳೆಯುತ್ತಿತ್ತು.

ಆದರೆ ಭಾರತ ಕೊನೆಯ ಗಳಿಗೆಯಲ್ಲಿ ಒಪ್ಪಂದದಿಂದ ಹಿಂದೆ ಸರಿದಿದೆ. ರೈತರ ಹಾಗೂ ವಿರೋಧ ಪಕ್ಷಗಳ ವಿರೋಧ ಒಂದು ಕಡೆಯಾದರೆ ಒಂದು ವೇಳೆ ಭಾರತ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ಚೀನಾ ದೇಶದ ವಿವಿಧ ವಸ್ತುಗಳು ಕಡಿಮೆ ಬೆಲೆಗೆ ಆಮದಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇತ್ತು. ಹಾಗಾದಲ್ಲಿ ಭಾರತೀಯ ಉದ್ಯಮ ಕ್ಷೇತ್ರಕ್ಕೂ ಭಾರೀ ಹೊಡೆತ ಬೀಳುವ ಭೀತಿ ಇತ್ತು. ಈ ಕಾರಣಕ್ಕಾಗಿ ಭಾರತ ಒಪ್ಪಂದದಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ