ಆ್ಯಪ್ನಗರ

ತಾಂತ್ರಿಕ ದೋಷ, ವಾಯುಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷ ಕಂಡುಬಂದ ಕಾರಣಕ್ಕೆ ಭಾರತೀಯ ವಾಯಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಅಮೆರಿಕದಿಂದ ಸೇನೆಗೆ ಇತ್ತೀಚೆಗೆ ತರಿಸಿಕೊಂಡ ಅತ್ಯಾಧುನಿಕ ಹೆಲಿಕಾಪ್ಟರ್ ಇದಾಗಿದೆ.

Vijaya Karnataka Web 17 Apr 2020, 6:06 pm
ಪಠಾಣ್ ಕೋಟ್: ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಅಪಾಚೆ ಹೆಲಿಕಾಪ್ಟರ್ ಪಂಜಾಬ್‌ನ ಹೋಶಿಯಾರ್‌ ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
Vijaya Karnataka Web IAF


ಇತ್ತೀಚೆಗೆ ಹೊಸದಾಗಿ ಸೇನೆಗೆ ಸೇರ್ಪಡೆಗೊಂಡ ಐಎಎಫ್ ಹೆಲಿಕಾಪ್ಟರ್ ಪಠಾಣ್‌ಕೋಟ್ ವಾಯುನೆಲೆಯಿಂದ ಹೊರಟಿದ್ದು, ಸ್ವಲ್ಪ ಹೊತ್ತಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಢಿತು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿದ ಪೈಲಟ್ ಹೋಶಿಯಾರ್‌ಪುರದ ಮೈದಾನದಲ್ಲಿ ಕಾಪ್ಟರ್ ಅನ್ನು ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು 'ಚಾಪರ್ ನ ಕಂಟ್ರೋಲ್ ಪ್ಯಾನೆಲ್ ನಿಂದ ಅಲರ್ಟ್ ಬಂದ ಕೂಡಲೇ ಲ್ಯಾಂಡಿಂಗ್ ಮಾಡಲಾಗಿದೆ. ಹೀಗಾಗಿ ಆಗಬಹುದಾದ ದುರಂತ ತಪ್ಪಿದೆ ಎಂದು ಭಾರತೀಯ ವಾಯುಪಡೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್ ನಲ್ಲಿದ್ದ ಪೈಲಟ್ ಕೂಡ ಸುರಕ್ಷಿತವಾಗಿದ್ದು, ಯಾವುದೇ ಹಾನಿ ಬಗ್ಗೆ ವರದಿಯಾಗಿಲ್ಲ. ಅಮೆರಿಕ ನಿರ್ಮಿತ ಅಪಾಚೆ ಎಹೆಚ್ -64 ಇ ದಾಳಿ ಹೆಲಿಕಾಪ್ಟರ್‌ಗಳನ್ನು ಕಳೆದ ವರ್ಷ ಭಾರತೀಯ ವಾಯುಪಡೆಗೆ ಸೇರಿಸಲಾಗಿತ್ತು. AH-64E ಅಪಾಚೆ ವಿಶ್ವದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಸದ್ಯ ಭಾರತ 22 ಅಪಾಚೆ ಹೆಲಿಕಾಪ್ಟರ್ಗಳ ಖರೀದಿಗೆ ಅಮೆರಿಕದೊಂದಿಗೆ 2015ರಲ್ಲಿ 1.1 ಶತಕೋಟಿ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ಹೆಲಿಕಾಪ್ಟರ್ಗಳ ಎರಡು ಪ್ರತ್ಯೇಕ ಸ್ಕ್ವಾಡ್ರನ್ಗಳನ್ನು ರಚಿಸಿರುವ ವಾಯಪಡೆ ಒಂದು ಸ್ಕ್ವಾಡ್ರನ್ ಅನ್ನು ಪಠಾಣ್ಕೋಟ್ ವಾಯುನೆಲೆಯಲ್ಲೂ ಮತ್ತೊಂದನ್ನು ಜೋಹ್ರಾಟ್ ವಾಯುನೆಲೆಯಲ್ಲೂ ನೆಲೆಗೊಳಿಸಲು ತೀರ್ಮಾನಿಸಿದೆ.

ಭಾರತೀಯ ಸೇನೆಯಲ್ಲಿ 8 ಕೋವಿಡ್ -19 ಪ್ರಕರಣ ಬೆಳಕಿಗೆ, ಓರ್ವ ಗುಣಮುಖ

ಸದ್ಯ ಅಮೆರಿಕದಿಂದ ಖರೀದಿಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಚ್ಚ ಹೊಸ ಅಪಾಚೆ ಯುದ್ಧ ಹೆಲಿಕಾಪ್ಟರ್ನ ತುರ್ತು ಭೂಸ್ಪರ್ಶ ಹಲವು ಆತಂಕ ಮತ್ತು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹೆಲಿಕಾಪ್ಟರ್ಗಳಿಗೆ ಹೆಲ್ಫೈರ್ ಕ್ಷಿಪಣಿಗಳನ್ನು ಅಳವಡಿಸಬಹುದು. ಮಾತ್ರವಲ್ಲ ನಿಮಿಷಕ್ಕೆ 128 ಟಾರ್ಗೆಟ್ ಗುರುತಿಸಿ, ಅದರಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿ ಟಾರ್ಗೆಟ್ ಅನ್ನು ಗಮನಿಸಿ, ಕ್ಷಿಪಣಿಗಳನ್ನು ಹೊಡೆದುರುಳಿಸಬಹುದಾಗಿದೆ. 2008 ರಿಂದ ಸುಮಾರು 15 ಮಿಲಿಯನ್ ಮೊತ್ತದ ವಿವಿಧ ಯುದ್ಧ ಪರಿಕರಗಳನ್ನು ಅಮೆರಿಕದಿಂದ ಭಾರತ ಖರೀದಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ