ಆ್ಯಪ್ನಗರ

ಹಿಂದೂ ಮಹಾಸಾಗರದಲ್ಲಿ ಭಾರತ-ಆಸ್ಟ್ರೇಲಿಯಾ PASSEX ನೌಕಾ ಸಮರಾಭ್ಯಾಸಕ್ಕೆ ಚಾಲನೆ!

ಭಾರತ-ಆಸ್ಟ್ರೇಲಿಯಾ ನಡುವಣ ಜಂಟಿ ನೌಕಾ ಸಮರಾಭ್ಯಾಸಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಹಿಂದೂ ಮಹಾಸಾಗರದಲ್ಲಿ ಇಂದು(ಬುಧವಾರ) ಪ್ಯಾಸೇಜ್ ವ್ಯಾಯಾಮ(PASSEX) ನಡೆಸಲಾಗಿದೆ. ಸಾಮರಿಕವಾಗಿ ಈ ಜಂಟಿ ಕವಾಯತು ಭಾರೀ ಮಹತ್ವ ಪಡೆದುಕೊಂಡಿದೆ.

Vijaya Karnataka Web 23 Sep 2020, 6:55 pm
ನವದೆಹಲಿ: ಭಾರತ-ಆಸ್ಟ್ರೇಲಿಯಾ ನಡುವಣ ಜಂಟಿ ನೌಕಾ ಸಮರಾಭ್ಯಾಸಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಪೂರ್ವ ಹಿಂದೂ ಮಹಾಸಾಗರದಲ್ಲಿ ಇಂದು(ಬುಧವಾರ) ಪ್ಯಾಸೇಜ್ ವ್ಯಾಯಾಮ(PASSEX) ನಡೆಸಲಾಗಿದೆ.
Vijaya Karnataka Web India-Australia Naval Exercise
ಪೂರ್ವ ಹಿಂದೂ ಮಹಾಸಾಗರದಲ್ಲಿ ಭಾರತ-ಆಸ್ಟ್ರೇಲಿಯಾ ಜಂಟಿ ನೌಕಾ ಸಮರಾಭ್ಯಾಸ


ಏರ್ ವಾರ್‌ಫೇರ್ ಡಿಸ್ಟ್ರಾಯರ್ ಎಚ್‌ಎಂಎಎಸ್ ಹೊಬಾರ್ಟ್, ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ಸಹ್ಯಾದ್ರಿ ಮತ್ತು ಕ್ಷಿಪಣಿ ಕಾರ್ವೆಟ್ ಐಎನ್ಎಸ್ ಕಾರ್ಮುಕ್ ಯುದ್ಧ ಹಡಗುಗಳು PASSEX ಕವಾಯತ್ತಿನಲ್ಲಿ ಪಾಲ್ಗೊಂಡಿವೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ನೌಕಾಸೇನೆ, ಹಿಂದೂ ಮಹಾಸಾಗರವನ್ನು ಆಸ್ಟ್ರೇಲಿಯಾದ ನೌಕಾ ಯುದ್ಧ ಹಡಗುಗಳು ಅಧಿಕೃತವಾಗಿ ಪ್ರವೇಶಿಸಿವೆ ಎಂದು ತಿಳಿಸಿವೆ.

ಹಿಂದೂ ಮಹಾಸಾಗರದಲ್ಲಿ 2 ದಿನಗಳ ಜಂಟಿ ನೌಕಾ ಸಮರಾಭ್ಯಾಸಕ್ಕೆ ಸಜ್ಜಾದ ಭಾರತ-ಆಸ್ಟ್ರೇಲಿಯಾ!

ಸಾಮರಿಕವಾಗಿ ಈ ಜಂಟಿ ಕವಾಯತು ಭಾರೀ ಮಹತ್ವ ಪಡೆದುಕೊಂಡಿದ್ದು, ಚೀನಾಗೆ ಪರೋಕ್ಷ ಎಚ್ಚರಿಕೆ ನೀಡುವ ಉದ್ಧೇಶವನ್ನೂ ಹೊಂದಿದೆ ಎನ್ನಲಾಗಿದೆ.


ಈ ಹಿಂದೆ ಭಾರತ-ಅಮೆರಿಕ-ಜಪಾನ್ ತ್ರಿಕೂಟ ಮಲಬಾರ್ ಜಂಟಿ ನೌಕಾ ಸಮರಾಭ್ಯಾಸ ನಡೆದಿತ್ತು. ಇದೀಗ ಭಾರತ-ಆಸ್ಟ್ರೇಲಿಯಾ ನಡುವೆ ಜಂಟಿ ನೌಕಾ ಸಮರಭ್ಯಾಸ ನಡೆಯುತ್ತಿದೆ.

ಸೆ,23 ಹಾಗೂ ಸೆ. 24(ಬುಧವಾರ ಮತ್ತು ಗುರುವಾರ) ಎರಡು ದಿನಗಳ ಕಾಲ ಜಂಟಿ ನೌಕಾ ಸಮರಾಭ್ಯಾಸ ನಡೆಯಲಿದ್ದು, ನಾಳಿನ(ಗುರುವಾರ) ಸಮರಾಭ್ಯಾಸದಲ್ಲಿ ಕಾಪಡೆಯ ಹೆಲಿಕಾಪ್ಟರ್‌ಗಳೂ ಕೂಡ ಭಾಗವಹಿಸಲಿವೆ.

ಮಲಬಾರ್ ನೌಕಾ ಸಮರಾಭ್ಯಾಸಕ್ಕೆ ಚೀನಾ ಎದುರು ಹಾಕಿಕೊಂಡ ಆಸ್ಟ್ರೇಲಿಯಾ ಆಹ್ವಾನಿಸಿದ ಭಾರತ!

ಇನ್ನು ಮುನ್ನೆಚ್ಚರಿಕೆಯ ಭಾಗವಾಗಿ ಭಾರತ ಪಿ -8 ಐ ದೀರ್ಘ-ಶ್ರೇಣಿಯ ಕಡಲ ಗಸ್ತು ವಿಮಾನವನ್ನು ಕೂಡ ಪೂರ್ವ ಹಿಂದೂ ಮಹಾಸಾಗರದಲ್ಲಿ ನಿಯೋಜಿಸಿರುವುದು ವಿಶೇಷ.

ಆಸ್ಟ್ರೇಲಿಯಾ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಇದೀಗ ಹಳಸಿದ್ದು, ಈ ನಡುವೆ ಭಾರತದೊಂದಿಗೆ ಆ ರಾಷ್ಟ್ರ ಜಂಟಿ ನೌಕಾ ಸಮರಾಭ್ಯಾಸ ನಡೆಸುತ್ತಿರುವುದು ಸಹಜವಾಗಿ ಚೀನಾದ ಕಣ್ಣು ಕೆಂಪಾಗಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ