ಆ್ಯಪ್ನಗರ

ನೇಪಾಳ ಭೇಟಿ ವೇಳೆ ಭಾರತೀಯ ಭೂಸೇನಾ ಮುಖ್ಯಸ್ಥರಿಗೆ ಸಿಗಲಿದೆ 'ಜನರಲ್ ಆಫ್ ನೇಪಾಳ ಆರ್ಮಿ' ಗೌರವ!

ಇದೇ ನ.4-6ರವರೆಗೆ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ನೇಪಾಳ ಸರ್ಕಾರ ನರವಣೆ ಅವರಿಗೆ 'ಜನರಲ್ ಆಫ್ ನೇಪಾಳ ಆರ್ಮಿ' ಎಂಬ ಗೌರವ ನೀಡಿ ಸನ್ಮಾನಿಸಲಿದೆ.

Vijaya Karnataka Web 27 Oct 2020, 6:22 pm
ಹೊಸದಿಲ್ಲಿ: ಇದೇ ನ.4-6ರವರೆಗೆ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಭಾರತ-ನೇಪಾಳ ರಕ್ಷಣಾ ಸಹಕಾರ ವೃದ್ಧಿಗೆ ನರವಣೆ ಅವರ ಭೇಟಿ ಸಹಾಯಕಾರಿ ಎಂದು ಬಣ್ಣಿಸಲಾಗಿದೆ.
Vijaya Karnataka Web MM Naravane
ಸಂಗ್ರಹ ಚಿತ್ರ


ಇನ್ನು ಜನರಲ್ ನರವಣೆ ಅವರ ನೇಪಾಳ ಭೇಟಿಯ ವೇಳೆ, ನೇಪಾಳ ಸರ್ಕಾರ ಅವರಿಗೆ 'ಜನರಲ್ ಆಫ್ ನೇಪಾಳ ಆರ್ಮಿ' ಎಂಬ ಗೌರವ ನೀಡಿ ಸನ್ಮಾನಿಸಲಿದೆ.

ಕಠ್ಮಂಡುವಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಢಾರಿ, ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ನರವಣೆ ಅವರಿಗೆ 'ಜನರಲ್ ಆಫ್ ನೇಪಾಳ ಆರ್ಮಿ' ಗೌರವವನ್ನು ಸಮರ್ಪಿಸಲಿದ್ದಾರೆ.

ಅಂಬಾಲಾ ವಾಯುನೆಲೆಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ: ಸಿದ್ಧತೆ ಪರಿಶೀಲನೆ!

ಭಾರತೀಯ ಭೂಸೇನಾ ಮುಖ್ಯಸ್ಥರಿಗೆ ಈ ಉನ್ನತ ಗೌರವ ನೀಡುವ ಘೋಷಣೆ ಮಾಡಿರುವ ನೇಪಾಳ, ಜನರಲ್ ನರವಣೆ ಅವರ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ.


ಇನ್ನು ತಮ್ಮ ನೇಪಾಳ ಭೇಟಿಯ ಸಂದರ್ಭದಲ್ಲಿ ನೇಪಾಳದ ಭೂಸೇನಾ ಮುಖ್ಯಸ್ಥ ಜನರಲ್ ಪೂರ್ಣಚಂದ್ರ ಥಾಪಾ ಅವರನ್ನು ಭೇಟಿಯಾಗಲಿರುವ ಜನರಲ್ ನರವಣೆ, ಭಾರತ-ನೇಪಾಳ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.

ಗಡಿ ನಕ್ಷೆ ಬಳಿಕ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಮರೆತು, ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಜನರಲ್ ನರವಣೆ ಅವರ ನೇಪಾಳ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ನೇಪಾಳದ ನೆಲ ನುಂಗಿರುವ ಚೀನಾ: ಭಾರತದ ಗುಪ್ತಚರ ವರದಿ!

ತನ್ನ ನೆಲ ಕಬಳಿಸುತ್ತಿರುವ ಚೀನಾಗೆ ಸೂಕ್ತ ತಿರುಗೇಟು ನೀಡಲು ಭಾರತದ ಸಹಾಯ ಬೇಕು ಎಂದು ಅರಿತಿರುವ ನೇಪಾಳ, ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಘನಿಷ್ಠ ಸಾಮರಿಕ ಸಂಬಂಧವನ್ನು ಹೊಂದಲು ಬಯಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ