ಆ್ಯಪ್ನಗರ

ಇಸ್ರೇಲ್‌ನಿಂದ ಸ್ಪೈಕ್‌ ಕ್ಷಿಪಣಿಗಳ ಖರೀದಿ

ವಿವಿಧ ವಾಹನಗಳು, ಹೆಲಿಕಾಪ್ಟರ್‌ಗಳು, ಹಡಗುಗಳು ಹಾಗೂ ಕೈಯ್ಯಲ್ಲಿ ಹೊತ್ತೊಯ್ಯಬಹುದಾದ ಲಾಂಚರ್‌ಗಳನ್ನು ಬಳಸಿಯೂ ಈ ಕ್ಷಿಪಣಿಗಳನ್ನು ಉಡಾಯಿಸಬಹುದು ಎಂಬುದು ಇವುಗಳ ವಿಶೇಷ.

PTI 11 Jul 2019, 5:00 am
ಹೊಸದಿಲ್ಲಿ: ಸೇನೆಯ ಸಮರ ಸಿದ್ಧತೆಯನ್ನು ಸುಧಾರಿಸುವ ಸಲುವಾಗಿ ತುರ್ತಾಗಿ ಇಸ್ರೇಲ್‌ನಿಂದ ಟ್ಯಾಂಕ್‌ ಪ್ರತಿರೋಧ 'ಸ್ಪೈಕ್‌' ಕ್ಷಿಪಣಿಗಳ ಖರೀದಿಗೆ ಭಾರತ ಮುಂದಾಗಿದೆ.
Vijaya Karnataka Web spike

ನಾಲ್ಕು ಕಿಲೋಮೀಟರ್‌ ವ್ಯಾಪ್ತಿಯ ಗುರಿಗಳನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ‌ ಹೊಂದಿರುವ ಈ ಸ್ಪೈಕ್‌ ಕ್ಷಿಪಣಿಗಳನ್ನು ಗುಡ್ಡಗಾಡು ಪ್ರದೇಶ ಹಾಗೂ ಸಮತಟ್ಟಾದ ಪ್ರದೇಶದಲ್ಲಿ ಸುಲಭವಾಗಿ ಬಳಸಬಹುದಾಗಿದೆ.
ವಿವಿಧ ವಾಹನಗಳು, ಹೆಲಿಕಾಪ್ಟರ್‌ಗಳು, ಹಡಗುಗಳು ಹಾಗೂ ಕೈಯ್ಯಲ್ಲಿ ಹೊತ್ತೊಯ್ಯಬಹುದಾದ ಲಾಂಚರ್‌ಗಳನ್ನು ಬಳಸಿಯೂ ಈ ಕ್ಷಿಪಣಿಗಳನ್ನು ಉಡಾಯಿಸಬಹುದು ಎಂಬುದು ಇವುಗಳ ವಿಶೇಷ.

ಬಾಲಾಕೋಟ್‌ ದಾಳಿಯ ಬಳಿಕ ಕಳೆದ ಏಪ್ರಿಲ್‌ನಲ್ಲಿ ಸ್ಪೈಕ್‌ ಕ್ಷಿಪಣಿಗಳ ತುರ್ತು ಖರೀದಿಗೆ ಸೇನೆ ಅನುಮೋದನೆ ನೀಡಿತ್ತು. ಜುಲೈ ತಿಂಗಳಲ್ಲಿ ಈ ಸಂಬಂಧ ಇಸ್ರೇಲ್‌ಗೆ ಅಧಿಕೃತ ಆರ್ಡರ್‌ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಕಳೆದ ತಿಂಗಳು ಮೂರೂ ಸೇನಾಪಡೆಗಳ ಮುಖ್ಯಸ್ಥರು ಭೇಟಿಯಾಗಿ ಚರ್ಚೆ ನಡೆಸಿದ್ದರು. ಅದರ ಬೆನ್ನಲ್ಲೇ ಈಗ ಕ್ಷಿಪಣಿಗಳ ಖರೀದಿಯನ್ನು ಆಕೈರುಗೊಳಿಸಲಾಗಿದೆ.
ಸೇನೆಯು 300 ಕೋಟಿ ರೂ. ಒಳಗಿನ ಖರೀದಿಗಾಗಿ ರಕ್ಷಣಾ ಸಚಿವಾಲಯದ ಅನುಮತಿ ಇಲ್ಲದೆ ತಾನೇ ಆರ್ಡರ್‌ ನೀಡಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ