ಆ್ಯಪ್ನಗರ

ಇಸ್ರೇಲ್‌ನಿಂದ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಚೀನಾಗೆ ಠಕ್ಕರ್ ನೀಡಲು ಸಜ್ಜು!‌

ಭಾರತದ ಪರಮಾಪ್ತ ಎಂದೇ ಖ್ಯಾತಿ ಪಡೆದಿರುವ ಇಸ್ರೇಲ್‌ನಿಂದ ಭಾರತ ಇದೀಗ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲಿದೆ. ಈ ಬಗ್ಗೆ ಭಾರತದ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲೇ ಇದಕ್ಕೆ ಸರಕಾರ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

TIMESOFINDIA.COM 15 Jul 2020, 7:28 am
ಹೊಸದಿಲ್ಲಿ: ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಪದೇ ಪದೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೇನೆಯನ್ನು ಬಲಿಷ್ಠಗೊಳಿಸಲು ಭಾರತ ನಿರ್ಧರಿಸಿದ್ದು, ಇದಕ್ಕಾಗಿ ಇಸ್ರೇಲ್‌ನಿಂದ ಮತ್ತಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲಿದೆ. 200ಕ್ಕೂ ಹೆಚ್ಚು ಆ್ಯಂಟಿ-ಟ್ಯಾಂಕ್‌ ಕ್ಷಿಪಣಿಗಳು, 12 ಸ್ಪೈಕ್‌ ಲಾಂಚರ್‌ಗಳನ್ನು ಖರೀದಿಸಲು ಸೇನೆ ಪ್ರಸ್ತಾವನೆ ಸಲ್ಲಿಸಿದೆ.
Vijaya Karnataka Web 1536683061-ATGM_representative_indiatimes


ಚೀನಾದ ಜತೆ ಸಂಘರ್ಷದ ಬಳಿಕ ಸರಕಾರ ತುರ್ತು ಶಸ್ತ್ರಾಸ್ತ್ರ ಖರೀದಿಗೆ 500 ಕೋಟಿ ರೂ. ಸರಕಾರ ಮೀಸಲಿರಿಸಿದ್ದು, ಇದೇ ನಿಧಿಯನ್ನು ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಇಸ್ರೇಲ್‌ನಿಂದ ಇಂತಹ ಲಾಂಚರ್‌ಗಳು ಹಾಗೂ ಕ್ಷಿಪಣಿಗಳನ್ನು ಭಾರತ ಖರೀದಿಸಿದ್ದು, ಅವುಗಳ ಉಪಯುಕ್ತತೆ ಅರಿತ ಸೇನೆ ಮತ್ತಷ್ಟು ಖರೀದಿಸಲು ಮುಂದಾಗಿದೆ.

ಗಲ್ವಾನ್‌ ಕಣಿವೆಯಲ್ಲಿ ಚೀನಾದ ಗಡಿ ಕಿರಿಕ್‌ ಬಳಿಕ ಎಚ್ಚೆತ್ತ ಭಾರತ ಸೇನೆಯನ್ನ ಬಲಿಷ್ಠಗೊಳಿಸಲು ಮುಂದಾಗಿದೆ. ಇತ್ತೀಚೆಗೆ ವಾಯುಸೇನೆಯ ಯುದ್ಧ ವಿಮಾನಗಳ ಖರೀದಿಯ ಪ್ರಸ್ತಾವನೆಯನ್ನ ಅಂಗೀಕರಿಸಿತ್ತು. ಈ ಹಿನ್ನೆಲೆ ಮಿಗ್‌ ಹಾಗೂ ಸುಖೋಯ್‌ ಯುದ್ಧ ವಿಮಾನಗಳನ್ನ ಖರೀದಿಸಲು ಅನುಮತಿ ನೀಡಿದೆ. ಕಳೆದ ಹಲವು ವರ್ಷಗಳಿಂದ ಭಾರತ ಹಾಗೂ ಇಸ್ರೇಲ್‌ ನಡುವಿನ ಬಾಂಧವ್ಯ ವೃದ್ದಿಸುತ್ತಿದೆ. ತಾನು ಬಳಸು ಆಲ್‌ಮೋಸ್ಟ್‌ ಎಲ್ಲಾ ತಂತ್ರಾಂಶವನ್ನ ಭಾರತಕ್ಕೆ ಇಸ್ರೇಲ್‌ ನೀಡುತ್ತಿದೆ.

ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿನ್‌ ಪೈಲಟ್‌ ಸುದ್ದಿಗೋಷ್ಠಿ; ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟಿಗೆ ಕ್ಲೈಮ್ಯಾಕ್ಸ್‌ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ