ಆ್ಯಪ್ನಗರ

ಮೆಲಾನಿಯಾ ಟ್ರಂಪ್‌ ಜಂಪ್‌ಸೂಟ್‌ನ ಬೆಲ್ಟ್‌ಗೂ ಭಾರತಕ್ಕೂ ಇದೆ ನಂಟು

ಮೆಲಾನಿಯಾ ಟ್ರಂಪ್‌ ತೊಟ್ಟಿದ್ದ ಬಿಳಿ ಬಣ್ಣದ ಜಂಪ್‌ಸೂಟ್‌ನ್ನು ಅಮೆರಿಕಾದ ಖ್ಯಾತ ವಸ್ತ್ರ ವಿನ್ಯಾಸಕ ಸಂಸ್ಥೆ ‘ಅಟೇಲಿಯರ್‌ ಕೈಟೋ ಫೋರ್‌ ಹರ್ವೆ ಪಿಯೆರಾ’ ವಿನ್ಯಾಸ ಮಾಡಿದೆ. ಬಿಳಿ ಜಂಪ್‌ ಸೂಟ್‌ನ ಮೇಲೆ ಗಾಢ ಹಸಿರು ಬಣ್ಣದ ಬೆಲ್ಟ್‌ನ್ನು ಮೆಲಾನಿಯಾ ಧರಿಸಿದ್ದರು. ಇದಕ್ಕೂ ಭಾರತಕ್ಕೂ ವಿಶೇಷ ನಂಟಿದೆ.

ANI 24 Feb 2020, 7:22 pm

ಹೊಸದಿಲ್ಲಿ: ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ಪತಿ ಡೊನಾಲ್ಡ್‌ ಟ್ರಂಪ್‌ ಜೊತೆ ಭಾರತ ಪ್ರವಾಸದಲ್ಲಿದ್ದಾರೆ. ಇದು ದಂಪತಿಯ ಮೊದಲ ಭಾರತ ಪ್ರವಾಸವಾಗಿದ್ದು, ಬಿಳಿ ಬಣ್ಣದ ಜಂಪ್‌ಸೂಟ್‌ ತೊಟ್ಟು ಮೆಲಾನಿಯಾ ಇಂದು ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಬಂದಿಳಿದರು. ಅವರ ಜಂಪ್‌ಸೂಟ್‌ಗೂ ಭಾರತಕ್ಕೂ ವಿಶೇಷ ಸಂಬಂಧವೊಂದಿದೆ.
Vijaya Karnataka Web Melania Trump Modi


ಮೆಲಾನಿಯಾ ಟ್ರಂಪ್‌ ತೊಟ್ಟಿದ್ದ ಬಿಳಿ ಬಣ್ಣದ ಜಂಪ್‌ಸೂಟ್‌ನ್ನು ಅಮೆರಿಕಾದ ಖ್ಯಾತ ವಸ್ತ್ರ ವಿನ್ಯಾಸಕ ಸಂಸ್ಥೆ ‘ಅಟೇಲಿಯರ್‌ ಕೈಟೋ ಫೋರ್‌ ಹರ್ವೆ ಪಿಯೆರಾ’ ವಿನ್ಯಾಸ ಮಾಡಿದೆ. ಬಿಳಿ ಜಂಪ್‌ ಸೂಟ್‌ನ ಮೇಲೆ ಗಾಢ ಹಸಿರು ಬಣ್ಣದ ಬೆಲ್ಟ್‌ನ್ನು ಮೆಲಾನಿಯಾ ಧರಿಸಿದ್ದರು. ಇದರಲ್ಲೇ ಇರುವುದು ವಿಶೇಷ. ಮೆಲಾನಿಯಾ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಸಂಸ್ಥೆ ಇದರ ವಿಶೇಷತೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ವಿವೇಕಾನಂದ ಬದಲಿಗೆ ವಿವೇಕಾಮನಂದ್‌, ಸಚಿನ್‌ ಹೋಗಿ ಸುಚಿನ್‌, ಚಾಯ್‌ವಾಲಾ ಆಯ್ತು ಚುಯ್‌ವಾಲಾ



ಈ ಬೆಲ್ಟ್‌ನ ವಿಶೇಷವೆಂದರೆ, ಇದು ಭಾರತದ ಸಾಂಪ್ರದಾಯಿಕತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣದ ರೇಷ್ಮೆಯಿಂದ ಈ ಬೆಲ್ಟ್‌ ತಯಾರಿಸಲಾಗಿದ್ದು, ಬಟ್ಟೆಯ ಮೇಲೆ ಚಿನ್ನದ ಎಳೆಯಿಂದ ಆಕರ್ಷಕ ಚಿತ್ತಾರಗಳನ್ನು ಬರೆಯಲಾಗಿದೆ. ಈ ಮೂಲಕ ಜಂಪ್‌ಸೂಟ್‌ಗೆ ಸಾಂಪ್ರದಾಯಿಕ ಟಚ್‌ ನೀಡಲಾಗಿತ್ತು ಎಂಬುದಾಗಿ ಸಂಸ್ಥೆ ಇನ್‌ಸ್ಟಾಗ್ರಾಮ್‌ನಲ್ಲಿ ವಿವರಗಳನ್ನು ಹಂಚಿಕೊಂಡಿದೆ.

ಡೊನಾಲ್ಡ್‌ ಟ್ರಂಪ್‌ಗಿಂತ ಮುನ್ನ ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರು ಯಾರು ಯಾರು ಗೊತ್ತಾ?

ಮೆಲಾನಿಯಾ ದಿನವಿಡೀ ಇದೇ ಬಟ್ಟೆಯನ್ನು ತೊಟ್ಟಿದ್ದರು. ಸಾಬರಮತಿ ಆಶ್ರಮ, ಮೊಟೆರಾ ಕ್ರೀಡಾಂಗಣ, ತಾಜ್‌ಮಹಲ್‌ ಮುಂದೆ ಪತಿ ಡೋನಾಲ್ಡ್‌ ಟ್ರಂಪ್‌ ಜೊತೆ ಫೋಟೋಗೆ ಪೋಸ್‌ ನೀಡುವಾಗಲೂ ಇದೇ ಬಟ್ಟೆ ಧರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ