ಆ್ಯಪ್ನಗರ

ಚೀನಾ ಗಡಿತಂಟೆ: ಉದ್ವಿಗ್ನ ಸ್ಥಿತಿ ಶಮನಕ್ಕೆ ಉಭಯ ದೇಶಗಳ ಚರ್ಚೆಯಾಗಿದೆ ಎಂದ ವಿದೇಶಾಂಗ ಇಲಾಖೆ

ಭಾರತದ ಗಡಿಯಲ್ಲಿ ಮಾತ್ರವೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಭಾರತ -ಚೀನಾ ಗಡಿ ವಿವಾದ ಕುರಿತು ಗುರುವಾರ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿದೆ. ಈ ವರದಿ ಇಲ್ಲಿದೆ.

Vijaya Karnataka Web 18 Jun 2020, 6:35 pm
ಹೊಸದಿಲ್ಲಿ: ಭಾರತದ ಗಡಿಯಲ್ಲಿ ಮಾತ್ರವೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
Vijaya Karnataka Web india china war


ಲಡಾಖ್‌ ಗಡಿಯಲ್ಲಿ ಭಾರತ- ಚೀನಾ ಸೇನೆಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಗುರುವಾರ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿದೆ.

ನಿನ್ನೆ (ಬುಧವಾರ) ಉಭಯ ದೇಶಗಳ (ಭಾರತ-ಚೀನಾ) ವಿದೇಶಾಂಗ ಸಚಿವರು ಚರ್ಚೆ ನಡೆಸಿದ್ದಾರೆ. "ಗಾಲ್ವಾನ್ ಕಣಿವೆ ಘರ್ಷಣೆಯಿಂದ ಉಂಟಾದ ಗಂಭೀರ ವಿಷಯವನ್ನು ನ್ಯಾಯಯುತವಾಗಿ ಪರಿಹರಿಸಿಕೊಳ್ಳಲು ಉಭಯ ದೇಶಗಳೂ ಸಮ್ಮತಿಸಿವೆ. ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಆದಷ್ಟು ಬೇಗ ಶಮನ ಮಾಡುವ ಕುರಿತು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್ ಗುರುವಾರ ತಿಳಿಸಿದ್ದಾರೆ.

ಇಂಡೋ-ಚೀನಾ ಗಡಿ ತಂಟೆ: ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದ ಚೀನಾ!

ಜೂನ್‌ 16ರಂದು ಕೂಡ ಗಡಿ ವಿವಾದದ ಕುರಿತು ವರದಿ ಬಿಡುಗಡೆ ಮಾಡಲಾಗಿತ್ತು. ಗಡಿಯಲ್ಲಿ ಘರ್ಷಣೆಗೆ ಕಾರಣವೇನು ಎಂದು ಕೂಡ ಸಚಿವರು ವಿವರಿಸಿದ್ದಾರೆ. ಗಡಿಯಲ್ಲಿ ಏರ್ಪಟ್ಟಿರುವ ಉದ್ವಿಗ್ನ ಸ್ಥಿತಿ ಶಮನಕ್ಕೆ ಕ್ರಮ ಕೈಗೊಳ್ಳುವಂತೆ ಚೀನಾಕ್ಕೆ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತದ ಯಾವುದೇ ಸೈನಿಕರು ನಾಪತ್ತೆಯಾಗಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ
ಅನುರಾಗ್‌ ಶ್ರೀವಾಸ್ತವ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಅಲ್ಲಗಳೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಉಗ್ರ ಸೆರೆ: ಎನ್‌ಕೌಂಟರ್‌ ಮುಂದುವರಿಕೆ!

ಅತ್ತ ಚೀನಾ ಕೂಡ ಭಾರತಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದೆ. ಚೀನಾದ ದಕ್ಷತೆಯನ್ನು ಕಡಿಮೆ ಎಂದು ಭಾವಿಸಬೇಡಿ. ತನ್ನ ಸಾರ್ವಭಮತೆಗೆ ದಕ್ಕೆ ಬಂದರೆ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ ಎನ್ನುವಂತೆ ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ