ಆ್ಯಪ್ನಗರ

ಭಾರತದ ನಾಯಕರು ಮುಸ್ಲಿಮರ ಮೇಲಿನ ದಾಳಿಯನ್ನು ರಹಸ್ಯವಾಗಿ ಬೆಂಬಲಿಸುತ್ತಿದ್ದರು: ಮುಫ್ತಿ

ನ್ಯೂಜಿಲೆಂಡ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿ ಬಳಿಕ ಅಲ್ಲಿನ ಸರಕಾರ ನಡೆದುಕೊಂಡ ರೀತಿಯಿಂದ ಭಾರತದ ರಾಜಕೀಯ ನಾಯಕರು ಬುದ್ಧಿ ಕಲಿಯಬೇಕಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ. ನ್ಯೂಜಿಲೆಂಡ್‌ ಪ್ರಧಾನಿ ನಡೆದುಕೊಂಡ ರೀತಿಯನ್ನು ಸಹ ಮೆಹಬೂಬಾ ಹೊಗಳಿದ್ದಾರೆ.

Times Now 15 Mar 2019, 6:11 pm
ಹೊಸದಿಲ್ಲಿ: ನ್ಯೂಜಿಲೆಂಡ್‌ನ ಕ್ರೈಸ್ತ್‌ಚರ್ಚ್‌ನಲ್ಲಿ ನಡೆದ ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಟ್ವೀಟ್‌ ವಿವಾದವಾಗಿ ಪರಿಣಮಿಸಿದೆ. ಕ್ರೈಸ್ತ್‌ಚರ್ಚ್‌ನಂತಹ ದಾಳಿ ಭಾರತದಲ್ಲಿ ನಡೆದಿದ್ದರೆ, ರಾಜಕೀಯ ನಾಯಕರು ಅದನ್ನು ರಾಜಕೀಕರಣಗೊಳಿಸುತ್ತಿದ್ದರು. ಮುಸ್ಲಿಮರ ಮೇಲೆ ನಡೆದ ದಾಳಿಯನ್ನು ಸಹ ಸಮರ್ಥನೆ ಮಾಡಿಕೊಳ್ಳುತ್ತಿದ್ದರು ಎಂದು ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ.
Vijaya Karnataka Web mehbooba mufti


ನರೇಂದ್ರ ಮೋದಿ ಸರಕಾರದ ವಿರುದ್ಧ ಟೀಕೆ ಮಾಡಿದ ಮುಫ್ತಿ, ಈ ರೀತಿಯ ಘಟನೆ ಇಲ್ಲಿ ನಡೆದಿದ್ದರೆ ಕೇಂದ್ರ ಸರಕಾರ ಯುದ್ಧಕ್ಕೆ ಪ್ರಚೋದನೆ ನೀಡುತ್ತಿತ್ತು. ಮುಸ್ಲಿಮರ ಮೇಲೆ ನಡೆದ ದಾಳಿಯನ್ನು ರಹಸ್ಯವಾಗಿ ಬೆಂಬಲಿಸುತ್ತಿತ್ತು ಎಂದು ಮುಫ್ತಿ ಹೇಳಿದ್ದಾರೆ.

ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ನ ಮಸೀದಿ ಮೇಲೆ ಶುಕ್ರವಾರ ಬಂದೂಕುಧಾರಿಗಳು ಪ್ರಾರ್ಥನೆಯ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದು, ಇದನ್ನು ಭಯೋತ್ಪಾದಕ ಕೃತ್ಯ ಎಂದು ಕಿವೀಸ್ ಪ್ರಧಾನಿ ಬಣ್ಣಿಸಿದ್ದಾರೆ.

ಇದು ಕಿವೀಸ್ ಇತಿಹಾಸದಲ್ಲೇ ನಡೆದ ಅತ್ಯಂತ ಭಯಾನಕ ಸಾಮೂಹಿಕ ಹತ್ಯಾ ಘಟನೆ ಎಂದು ಹೇಳಲಾಗುತ್ತಿದ್ದು, ಘಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನೂ ರದ್ದುಪಡಿಸಲಾಗಿದೆ.

ಮಸೀದಿ ಶೂಟಿಂಗ್ ಪ್ರಕರಣಗಳಲ್ಲಿ, ಕನಿಷ್ಠ 49 ಮಂದಿ ಸಾವನ್ನಪ್ಪಿದ್ದಾರೆ, 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂಜಿಲೆಂಡ್ ಅಧಿಕೃತ ಮಾಹಿತಿ ನೀಡಿದೆ.

ಇನ್ನೊಂದೆಡೆ, ಮಸೀದಿ ಮೇಲೆ ನಡೆದ ದಾಳಿ ಬಳಿಕ ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಆರ್ಡರ್ನ್ ನಡೆದುಕೊಂಡ ರೀತಿ, ಮಾಧ್ಯಮಕ್ಕೆ ಸುದ್ದಿಗೋಷ್ಠಿ ನಡೆಸಿದ ರೀತಿ ಹಾಗೂ ನಾಯಕತ್ವದ ಗುಣಗಳನ್ನು ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೊಗಳಿದ್ದಾರೆ.

28 ವರ್ಷದ ಆಸ್ಟ್ರೇಲಿಯಾದ ಬ್ರೆಂಟನ್ ಟಾರ್ಟನ್ ಹೊಣೆ ಹೊತ್ತುಕೊಂಡಿದ್ದು, 17 ನಿಮಿಷಗಳ ಕಾಲ ದಾಳಿಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಸ್ಟ್ರೀಮ್‌ ಮಾಡಿದ್ದಾನೆ. 2 ಮಸೀದಿಗಳಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, 3 ಪುರುಷರು ಹಾಗೂ ಒಬ್ಬರು ಮಹಿಳೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ