ಆ್ಯಪ್ನಗರ

ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ರಕ್ಷಣೆ

ಟಾಮಿ ಅವರು ಪ್ರಯಾಣಿಸುತ್ತಿದ್ದ ನೌಕೆ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ತೊಂದರೆಗೊಳಗಾಗಿದ್ದರು. ಅವರ ನೌಕೆ ಇರುವ ಜಾಗವನ್ನು ಭಾರತೀಯ ನೌಕಾಪಡೆಯ ಏರ್‌ಕ್ರಾಫ್ಟ್ ಭಾನುವಾರ ಪತ್ತೆಹಚ್ಚಿತ್ತು.

Vijaya Karnataka Web 24 Sep 2018, 4:19 pm
ಹೊಸದಿಲ್ಲಿ: ರೌಂಡ್‌ ದ ವರ್ಲ್ಡ್ ಸೋಲೊ ರೇಸ್‌ನಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ಅಭಿಲಾಷ್ ಟಾಮಿ ಅವರನ್ನು ಸೋಮವಾರ ರಕ್ಷಿಸಲಾಗಿದ್ದು, ಅಭಿಲಾಷ್ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web Abhilash tomy


ಟಾಮಿ ಅವರನ್ನು ರಕ್ಷಿಸಿ ಫ್ರೆಂಚ್ ಫಿಶಿಂಗ್ ವೆಸೆಲ್‌ ಒಸಿರಿಸ್‌ಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನೇವಿ ವಕ್ತಾರ ಕ್ಯಾ. ಡಿ. ಕೆ. ಶರ್ಮಾ ಹೇಳಿಕೆ ನೀಡಿ, ಅಭಿಲಾಷ್ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದ್ದಾರೆ.

ಟಾಮಿ ಅವರು ಪ್ರಯಾಣಿಸುತ್ತಿದ್ದ ನೌಕೆ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ತೊಂದರೆಗೊಳಗಾಗಿದ್ದರು. ಅವರ ನೌಕೆ ಇರುವ ಜಾಗವನ್ನು ಭಾರತೀಯ ನೌಕಾಪಡೆಯ ಏರ್‌ಕ್ರಾಫ್ಟ್ ಭಾನುವಾರ ಪತ್ತೆಹಚ್ಚಿತ್ತು.

ಅಭಿಲಾಷ್ ಬಳಿಯಿದ್ದ ಸೆಟಲೈಟ್ ಫೋನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಮತ್ತೊಂದು ಸೆಟಲೈಟ್ ಫೋನ್ ಇತ್ತಾದರೂ, ಅಭಿಲಾಷ್ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿದ್ದರಿಂದ ಅದನ್ನು ಬಳಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರಲ್ಲಿದ್ದ ಸೆಟಲೈಟ್ ಫೋನ್ ಮೂಲಕವೇ ಸಂಪರ್ಕ ಮಾಡಿದ್ದ ಅಭಿಲಾಷ್, ಗಾಯಗೊಂಡು ತೊಂದರೆಗೆ ಸಿಲುಕಿದ್ದು, ರಕ್ಷಣೆಗೆ ಮನವಿ ಮಾಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ