ಆ್ಯಪ್ನಗರ

ನೌಕಾಪಡೆಗೆ ಐಎನ್‌ಎಸ್‌ ಕವರತ್ತಿ ಸೇರ್ಪಡೆ..! ಚೀನಾ ಕ್ಯಾತೆ ನಡುವೆ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ

ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಯಾಗಿದ್ದು, ಚೀನಾದ ಗಡಿ ಕ್ಯಾತೆ ನಡುವೆ ಬಂಗಾಳ ಕೊಲ್ಲಿಯಲ್ಲಿ ನೌಕಾಪಡೆಯ ಬಲ ಮತ್ತಷ್ಟು ಹೆಚ್ಚಿದೆ. ಸ್ವದೇಶಿ ನಿರ್ಮಿತ, ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ (ಎಎಸ್‌ಡಬ್ಲ್ಯೂ) ಐಎನ್‌ಎಸ್‌ ಕವರತ್ತಿ ಭಾರತೀಯ ನೌಕಾಪಡೆಗೆ ಗುರುವಾರ ಸೇರ್ಪಡೆಯಾಗಿದೆ.

PTI 22 Oct 2020, 6:09 pm
ವಿಶಾಖಪಟ್ಟಣಂ: ಸ್ವದೇಶಿ ನಿರ್ಮಿತ, ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ (ಎಎಸ್‌ಡಬ್ಲ್ಯೂ) ಐಎನ್‌ಎಸ್‌ ಕವರತ್ತಿ ಭಾರತೀಯ ನೌಕಾಪಡೆಗೆ ಗುರುವಾರ ಸೇರ್ಪಡೆಯಾಗಿದೆ. ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ನೌಕೆಯನ್ನು ಸೇವೆಗೆ ನಿಯೋಜಿಸಿದರು. ಈ ಮೂಲಕ ಭಾರತೀಯ ನೌಕಾಪಡೆಗೆ ಆನೆಬಲ ಬಂದಂತಾಗಿದೆ.
Vijaya Karnataka Web indian navys indigenously built stealth corvette ins kavaratti commissioned
ನೌಕಾಪಡೆಗೆ ಐಎನ್‌ಎಸ್‌ ಕವರತ್ತಿ ಸೇರ್ಪಡೆ..! ಚೀನಾ ಕ್ಯಾತೆ ನಡುವೆ ಭಾರತದ ಬತ್ತಳಿಕೆಗೆ ಮತ್ತೊಂದು ಅಸ್ತ್ರ


‘ಪ್ರಾಜೆಕ್ಟ್‌ 28’ (ಕಮೋರ್ಟಾ ಕ್ಲಾಸ್‌) ಅಡಿ ಐಎನ್‌ಎಸ್‌ ಕವರತ್ತಿಯನ್ನು ನಿರ್ಮಿಸಲಾಗಿದೆ. ಈಗಾಗಲೇ ಮೂರು ಅತ್ಯಾಧುನಿಕ ಎಎಸ್‌ಡಬ್ಲ್ಯೂಗಳನ್ನು ಪ್ರಾಜೆಕ್ಟ್‌ 28 ಅಡಿಯಲ್ಲಿ ನೌಕಾಪಡೆಯ ಸೇವೆಗೆ ನಿಯೋಜಿಸಲಾಗಿದೆ. ಕವರತ್ತಿ ನಾಲ್ಕನೇ ಎಎಸ್‌ಡಬ್ಲ್ಯು ಆಗಿದೆ. ‘ಡೈರೆಕ್ಟರೇಟ್‌ ಆಫ್‌ ನೇವಲ್‌ ಡಿಸೈನ್‌ʼ ಈ ಯುದ್ಧನೌಕೆಯನ್ನು ವಿನ್ಯಾಸಗೊಳಿಸಿದೆ.

ಕೋಲ್ಕತ್ತದ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಇಂಜಿನಿಯರ್ಸ್‌ ಕಂಪನಿ ಐಎನ್‌ಎಸ್‌ ಕವರತ್ತಿಯನ್ನು ನಿರ್ಮಿಸಿದೆ. ಯುದ್ಧಕ್ಕೆ ಸಜ್ಜಾಗಿರುವ ನೌಕೆಯಾಗಿ ಕವರತ್ತಿಯನ್ನು ನೌಕಾಪಡೆಯ ಸೇವೆಗೆ ನಿಯೋಜಿಸಲಾಗಿದ್ದು, ನೌಕೆಯಲ್ಲಿನ ಎಲ್ಲಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಮುದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಶಕ್ತಿಶಾಲಿ ಗುರಿ ನಿರ್ದೇಶಿತ 'ನಾಗ್‌' ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿ!

ಸಾಗರದಾಳದಲ್ಲಿರುವ ಶತ್ರುರಾಷ್ಟ್ರಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ ಹಾಗೂ ಅವುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಐಎನ್‌ಎಸ್‌ ಕವರತ್ತಿ ಹೊಂದಿದೆ. ಸಬ್‌ಮರೀನ್‌ಗಳನ್ನು ನಾಶಪಡಿಸುವುದಷ್ಟೇ ಅಲ್ಲದೆ, ಶತ್ರು ರಾಷ್ಟ್ರಗಳ ಯುದ್ಧ ನೌಕೆಗಳು ಹಾಗೂ ಸಬ್‌ಮರೀನ್‌ಗಳ ದಾಳಿಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ ಈ ನೌಕೆಗಿದೆ.

ಚೀನಾ ಕ್ಯಾತೆ ಮಧ್ಯೆಯೇ ಬ್ರಹ್ಮೋಸ್ ಪರೀಕ್ಷೆ ಯಶಸ್ವಿ..! 290 ಕಿಮೀ ದೂರ ತಲುಪುವ ಸೂಪರ್‌ಸಾನಿಕ್ ಕ್ಷಿಪಣಿ

‘ಐಎನ್‌ಎಸ್‌ ಕವರತ್ತಿಯನ್ನು ದೇಶೀಯವಾಗಿ ನಿರ್ಮಿಸಲಾಗಿದ್ದು, ಶೇ.90ರಷ್ಟು ಭಾಗ ಸ್ವದೇಶಿಯಾಗಿದೆ. ಶಸ್ತ್ರಾಸ್ತ್ರಗಳು ಹಾಗೂ ಸೆನ್ಸಾರ್‌ಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ಇದನ್ನು ದೀರ್ಘಕಾಲ ಬಾಳಿಕೆ ಬರುವ ಕಾರ್ಬನ್ ಫೈಬರ್‌ ಮಿಶ್ರಲೋಹದಿಂದ ತಯಾರಿಸಲಾಗಿದೆ. ಈ ಮೂಲಕ ಭಾರತ ಈ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ ಎನ್ನುವುದನ್ನು ಕವರತ್ತಿ ಪ್ರದರ್ಶಿಸಿದ್ದು, ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನೌಕಾಪಡೆ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ