ಆ್ಯಪ್ನಗರ

ಇಂದು 200 ರೈಲುಗಳ ಸಂಚಾರ ಆರಂಭ: ಹೇಗಿದೆ ಹಳಿಗಳ ಮೇಲಿನ ಪ್ರಯಾಣ?

ಹಂತ ಹಂತವಾಗಿ ರೈಲು ಸೇವೆ ಪುನರಾರಂಭಗೊಳ್ಳುತ್ತಿದ್ದು,​ ಇಂದು ದೇಶದಾದ್ಯಂತ ಸುಮಾರು 200 ರೈಲುಗಳು ಸೇವೆ ಆರಂಭಿಸಿವೆ. ಅದರಂತೆ ದೇಶದಾದ್ಯಂತ ಇಂದು ಪ್ರಮುಖ ರೈಲುಗಳ ಸಂಚಾರದ ಮಾಹಿತಿ ಇಲ್ಲಿದೆ.

Vijaya Karnataka Web 1 Jun 2020, 5:51 pm
ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಸರಣಿ ಲಾಕ್‌ಡೌನ್ ಪರಿಣಾಮವಾಗಿ ದೇಶದಾದ್ಯಂತ ರೈಲು ಸೇವೆ ಸ್ಥಗಿತಗೊಂಡಿತ್ತು.
Vijaya Karnataka Web Train Service
ರೈಲು ಸೇವೆ ಪುನರಾರಂಭ


ಇದೀಗ ಹಂತ ಹಂತವಾಗಿ ರೈಲು ಸೇವೆ ಪುನರಾರಂಭಗೊಳ್ಳುತ್ತಿದ್ದು, ಇಂದು ದೇಶದಾದ್ಯಂತ ಸುಮಾರು 200 ರೈಲುಗಳು ಸೇವೆ ಆರಂಭಿಸಿವೆ. ಇವುಗಳಲ್ಲಿ 15 ವಿಶೇಷ ರೈಲುಗಳೂ ಸೇರಿವೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರೈಲು ಸಂಚಾರ ಆರಂಭಗೊಂಡಿದ್ದು, ಸಾಮಾಜಿಕ ಅಂತರದ ನಿಯಮವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ದೇಶದ ವಿವಿಧ ಭಾಗಗಳಲ್ಲಿ ಇಂದಿನ ರೈಲು ಸಂಚಾರದತ್ತ ಗಮನಹರಿಸಿದರೆ...


ಅದರಂತೆ ಬೆಂಗಳೂರಿನ ರೈಲು ನಿಲ್ದಾಣದಿಂದ ಜನ್‌ಶತಾಬ್ಧಿ ರೈಲು ಹುಬ್ಬಳಿಯತ್ತ ಪ್ರಯಾಣ ಬೆಳೆಸಿದೆ. ಅದರಂತೆ ಮುಂಬೈನ ಛತ್ರಪತಿ ಶಿಬಾಜಿ ಮಹಾರಾಜ್ ರೈಲು ನಿಲ್ದಾಣದಿಂದಲೂ ದೇಶದ ವಿವಿಧ ಭಾಗಗಳಿಗೆ ರೈಲು ಸಂಚಾರ ಆರಂಭಗೊಂಡಿದೆ.

200 ವಿಶೇಷ ರೈಲುಗಳ ಓಡಾಟ; 1.5 ಲಕ್ಷ ಜನರ ಪ್ರಯಾಣ

ಇನ್ನು ತಮಿಳುನಾಡಿನ ಸೇಲಂನಿಂದಲೂ ಎರಡು ರೈಲುಗಳು ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದು, ನಿಲ್ದಾಣದಲ್ಲಿ ಸಾಮಾಜಿಕ ಅಂತರದ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದ್ದು ಕಂಡುಬಂದಿತು.


ಅದರಂತೆ ಕೇರಳ, ಉತ್ತರಪ್ರದೇಶ, ಆಂಧ್ರ ಹೀಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಪ್ರಮುಖ ರೈಲು ಸಂಚಾರ ಪುನರಾರಂಭಗೊಂಡಿದ್ದು, ಮೊದಲ ಹಂತದ ಭಾಗವಾಗಿ ಸುಮಾರು 200 ರೈಲುಗಳ ಓಡಾಟಕ್ಕೆ ಮುನ್ನುಡಿ ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ