ಆ್ಯಪ್ನಗರ

ಶತಾಬ್ದಿ ಎಕ್ಸ್‌ಪ್ರೆಸ್ ಟಿಕೆಟ್‌ ದರ ಕಡಿತ

ಜನದಟ್ಟನೆ ಹೆಚ್ಚಿಸಲು ಟಿಕೆಟ್‌ ಶುಲ್ಕ ಕಡಿತದ ಮೊರೆಹೋದ ರೈಲ್ವೆ ಇಲಾಖೆ!

Times Now 6 Jun 2017, 3:26 pm
ಮುಂಬಯಿ: ವೇಗದ ರೈಲು ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಕಡಿಮೆ ಅಂತರದ ನಿಲ್ದಾಣಗಳಿಗೆ ಪ್ರಯಾಣದರ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
Vijaya Karnataka Web indian railways to cut shatabdi short run train fares to compete with road transport
ಶತಾಬ್ದಿ ಎಕ್ಸ್‌ಪ್ರೆಸ್ ಟಿಕೆಟ್‌ ದರ ಕಡಿತ


ಈಗಾಗಲೇ ಇಂತಹ 2 ರೈಲುಗಳಲ್ಲಿ ದರ ವ್ಯತ್ಯಾಸದ ಪ್ರಯೋಗ ನಡೆಸಿ ಯಶಸ್ವಿಯಾದ ನಂತರ ಭಾರತೀಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ. ಕಡಿಮೆ ಅಂತರದ ಸ್ಥಳಗಳಿಗೆ ಶುಲ್ಕ ಕಡಿಮೆ ಮಾಡಿದ ನಂತರ ಹೆಚ್ಚು ಲಾಭ ಗಳಿಕೆ ಸಾಧ್ಯವಾಗಿದೆ.

ಶತಾಬ್ದಿ ಎಕ್ಸ್‌ಪ್ರೆಸ್‌ ಸಂಚರಿಸುವ ಮಾರ್ಗದ ಕೆಲ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಕಡಿಮೆಯಿದೆ. ರೈಲಿನಲ್ಲಿ ಪ್ರಯಾಣಿಸುವುದಕ್ಕಿಂತ ಹೆಚ್ಚಾಗಿ ಹವನಿಯಂತ್ರಿತ ಬಸ್‌ಗಳನ್ನೇ ಅವಲಂಬಿಸುತ್ತಿದ್ದಾರೆ ಎಂಬ ಅಂಶ ಗಮನಿಸಿದ ರೈಲ್ವೆ ಇಲಾಖೆ ಪ್ರಯಾಣಿಕರನ್ನು ಸೆಳೆಯಲು ಶುಲ್ಕ ಕಡಿತಗೊಳಿಸಲು ನಿರ್ಧರಿಸಿದೆ.

ಕಡಿಮೆ ಅಂತರದ ಸ್ಥಳಗಳಿಗೆ ಸಂಚರಿಸುವವರ ಸಂಖ್ಯೆ ಶೇ.30ರಷ್ಟಿದೆ. ಹೀಗಾಗಿ ಟಿಕೆಟ್‌ ದರವನ್ನು ಇಳಿಕೆ ಮಾಡಲು ನಿರ್ಧರಿಸಿದ್ದೇವೆ. ಇದರಿಂದ ಪ್ರಯಾಣಿಕರ ಸಂಖ್ಯೆ ಶೇ.100ಕ್ಕೆ ಏರಲಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿ ಮೊಹಮ್ಮದ್ ಜಮ್ಶದ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ