ಆ್ಯಪ್ನಗರ

ಪಾಕಿಸ್ತಾನವನ್ನು ಶತ್ರುವೆಂದು ಪರಿಗಣಿಸುತ್ತಿಲ್ಲ: ಭಾಗ್ವತ್‌

ಭಾರತವು ಹಿಂದೂ ರಾಷ್ಟ್ರವಾಗಿದ್ದು, ಪಾಕಿಸ್ತಾನವನ್ನು ಶತ್ರುವಿನಂತೆ ಪರಿಗಣಿಸುವುದನ್ನು ನಿಲ್ಲಿಸಿದೆ. ಆದರೆ ಪಾಕಿಸ್ತಾನವು ಭಾರತದ ವಿಚಾರದಲ್ಲಿ ಇದೇ ನಿಲುವು ತಾಳುವಲ್ಲಿ ವಿಫಲವಾಗಿದೆ .

Vijaya Karnataka Web 22 Jan 2018, 9:13 am
ಗುವಾಹಟಿ: ಭಾರತವು ಹಿಂದೂ ರಾಷ್ಟ್ರವಾಗಿದ್ದು, ಪಾಕಿಸ್ತಾನವನ್ನು ಶತ್ರುವಿನಂತೆ ಪರಿಗಣಿಸುವುದನ್ನು ನಿಲ್ಲಿಸಿದೆ. ಆದರೆ ಪಾಕಿಸ್ತಾನವು ಭಾರತದ ವಿಚಾರದಲ್ಲಿ ಇದೇ ನಿಲುವು ತಾಳುವಲ್ಲಿ ವಿಫಲವಾಗಿದೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಹೇಳಿದ್ದಾರೆ.
Vijaya Karnataka Web indias a hindu rashtra says rss chief bhagwat
ಪಾಕಿಸ್ತಾನವನ್ನು ಶತ್ರುವೆಂದು ಪರಿಗಣಿಸುತ್ತಿಲ್ಲ: ಭಾಗ್ವತ್‌


ಖಾನಪಾರಾದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಹೊಸ ಭೂಭಾಗ ಆತಿಕ್ರಮಣ ಬೇಕಿಲ್ಲ, ಭಾರತ ದೃಢಗೊಳ್ಳಬೇಕಿದೆ ಎಂದು ಹೇಳಿದರು.

ಮೊಹೆಂಜೊದಾರೊ ಮತ್ತು ಹರಪ್ಪ ನಾಗರಿಕತೆಯನ್ನು ಒಳಗೊಂಡ ಪ್ರದೇಶ ಈಗ ಪಾಕಿಸ್ತಾನದಲ್ಲಿದೆ. ಅವು ಭಾರತದ ಭಾಗ. ಆದರೆ ಪಾಕಿಸ್ತಾನವು ಅದನ್ನು ಅಂಗೀಕರಿಸುವುದಿಲ್ಲ. ಏಕೆಂದರೆ ಹಿಂದುತ್ವವನ್ನು ಒಪ್ಪದ ಕಾರಣ ಅದು ಪ್ರತ್ಯೇಕ ರಾಷ್ಟ್ರವಾಗಿದೆ ಎಂದು ಹೇಳಿದರು.

ಬಾಂಗ್ಲಾ ವಿಚಾರದಲ್ಲೂ ಇದೇ ತರ್ಕವನ್ನು ಭಾಗ್ವತ್‌ ಪ್ರತಿಪಾದಿಸಿದರು. ಜನ ಬಾಂಗ್ಲಾ ಭಾಷೆ ಮಾತನಾಡುತ್ತಿದ್ದರೂ ಬಾಂಗ್ಲಾದೇಶ ಹಿಂದುತ್ವವನ್ನು ಒಪ್ಪದ ಕಾರಣ ಪ್ರತ್ಯೇಕ ರಾಷ್ಟ್ರವಾಗಿದೆ. ಅಖಂಡ ಭಾರತವು ಭಾಷೆ, ಧರ್ಮ, ಜೀವನಕ್ರಮ, ಸಂಪ್ರದಾಯಗಳಲ್ಲಿ ವೈವಿಧ್ಯತೆ ಹೊಂದಿದೆ. ಆದರೆ ಹಿಂದುತ್ವವು ವೈವಿಧ್ಯತೆಯನ್ನು ಒಪ್ಪುತ್ತದೆ, ಆದರೆ ವಿಭಜನೆಯನ್ನು ಅಲ್ಲ. ಹೀಗಾಗಿ ಭಾರತವು ಹಿಂದೂ ರಾಷ್ಟ್ರ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ