ಆ್ಯಪ್ನಗರ

ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಗುಜರಿಗೆ ?

ದೇಶದ ನೌಕಾಪಡೆಯಲ್ಲಿ ಮೂವತ್ತು ವರ್ಷ ಕಾರ್ಯ ನಿರ್ವಹಿಸಿರುವ ಯುದ್ಧ ನೌಕೆ ಐಎನ್‌ಎಸ್‌ ವಿರಾಟ್‌ ಗುಜರಿಗೆ ಮಾರಾಟಗೊಳ್ಳುವ ದಿನಗಳು ಸಮೀಪಿಸಿವೆ.

ಟೈಮ್ಸ್ ಆಫ್ ಇಂಡಿಯಾ 21 Feb 2017, 12:17 pm
ಹೊಸದಿಲ್ಲಿ: ದೇಶದ ನೌಕಾಪಡೆಯಲ್ಲಿ ಮೂವತ್ತು ವರ್ಷ ಅದ್ಭುತವಾಗಿ ಕಾರ್ಯ ನಿರ್ವಹಿಸಿರುವ ಯುದ್ಧ ನೌಕೆ ಐಎನ್‌ಎಸ್‌ ವಿರಾಟ್‌ ಗುಜರಿಗೆ ಮಾರಾಟಗೊಳ್ಳುವ ದಿನಗಳು ಸಮೀಪಿಸಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
Vijaya Karnataka Web indias oldest warship may be sold for scrap
ಯುದ್ಧನೌಕೆ ಐಎನ್‌ಎಸ್‌ ವಿರಾಟ್‌ ಗುಜರಿಗೆ ?


58 ವರ್ಷ ಹಳೆಯ ಈ ವಿಮಾನ ವಾಹಕ ಯುದ್ಧ ನೌಕೆ ಐಎನ್‌ಎಸ್‌ ವಿರಾಟ್‌ 1987ರಲ್ಲಿ ಭಾರತೀಯ ಪಡೆಗೆ ಸೇರ್ಪಡೆಗೊಂಡಿದ್ದು, ಮಾರ್ಚ್‌ 6 ನಿವೃತ್ತಿಯ ದಿನವಾಗಿದೆ. ಈ ನೌಕೆಯನ್ನು ಮ್ಯೂಸಿಯಂ ಆಗಿ ರೂಪಿಸುಬೇಕು ಎಂಬ ಪ್ರಸ್ತಾವಗಳಿದ್ದರೂ ಈವರೆಗೆ ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ನಡೆದಿಲ್ಲ.

27,800 ಟನ್‌ ತೂಕದ ಈ ಯುದ್ಧ ನೌಕೆ ಭಾರತದ ನೌಕಾಪಡೆಗೆ ಸೇರುವ ಮೊದಲು ರಾಯಲ್‌ ಬ್ರಿಟಿಷ್‌ ನೇವಿಯಲ್ಲಿ ಕಾರ್ಯಾಚರಿಸುತ್ತಿತ್ತು. ಇದನ್ನು ಮ್ಯೂಸಿಯಂ ಆಗಿ ರೂಪಿಸಬೇಕಾದರೆ 1,000 ಕೋಟಿ ರೂ. ವೆಚ್ಚವಾಗಲಿದ್ದು, ರಕ್ಷಣಾ ಸಚಿವಾಲಯ ಅರ್ಧದಷ್ಟು ಭರಿಸಿದರೆ ಆಂಧ್ರ ಪ್ರದೇಶ ಈ ಕೆಲಸದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

oldest warship: The country's oldest warhorse with 30 glorious years of service in the Indian Navy is in danger of being junked and sold for scrap. With March 6 being fixed as the final retirement date for the 58-year-old aircraft carrier INS Viraat.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ