ಆ್ಯಪ್ನಗರ

2048ರಲ್ಲಿ ಭಾರತದ ಜನಸಂಖ್ಯೆ 160 ಕೋಟಿ..! ಮೊದಲ ಸ್ಥಾನದಿಂದ ಚೀನಾ ಕೆಳಗಿಳಿಯೋ ಸಾಧ್ಯತೆ

ವಿಶ್ವದಲ್ಲಿ ಚೀನಾ ನಂತರ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮುಂದಿನ 28 ವರ್ಷಗಳಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಲಿದೆ. 2048ರ ಹೊತ್ತಿಗೆ ಭಾರತದ ಜನಸಂಖ್ಯೆ 160 ಕೋಟಿ ಮುಟ್ಟಲಿದೆ ಎಂದು ಅಧ್ಯಯನ ತಿಳಿಸಿದೆ. ಸದ್ಯ 130 ಕೋಟಿ ಜನಸಂಖ್ಯೆ ಭಾರತದಲ್ಲಿ ಇದೆ.

Agencies 16 Jul 2020, 11:32 pm
ಹೊಸದಿಲ್ಲಿ: ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರ ರಾಷ್ಟ್ರಗಳಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಮುಂದಿನ 28 ವರ್ಷಗಳಲ್ಲಿ ಜನಸಂಖ್ಯೆ ತೀವ್ರ ಏರಿಕೆ ಕಾಣಲಿದೆ. ಸದ್ಯ 138 ಕೋಟಿ ಇರುವ ಜನಸಂಖ್ಯೆ 2048ಕ್ಕೆ 160 ಕೋಟಿ ಮುಟ್ಟಲಿದೆ.
Vijaya Karnataka Web indias population could peak at 1 6 billion in 2048 study
2048ರಲ್ಲಿ ಭಾರತದ ಜನಸಂಖ್ಯೆ 160 ಕೋಟಿ..! ಮೊದಲ ಸ್ಥಾನದಿಂದ ಚೀನಾ ಕೆಳಗಿಳಿಯೋ ಸಾಧ್ಯತೆ


ಆದರೆ, ನಂತರದ ದಿನಗಳಲ್ಲಿ ಶೇ.32ರಷ್ಟು ಇಳಿಕೆ ಕಂಡು 2100ರ ಹೊತ್ತಿಗೆ 109 ಕೋಟಿಗೆ ಕುಸಿಯಲಿದೆ. ಹಾಗೆಯೇ ದೇಶ­ದಲ್ಲಿನ ದುಡಿಯುವ ವಯಸ್ಕರ ಸಂಖ್ಯೆ 2017ರಲ್ಲಿ 76 ಕೋಟಿ ಇದ್ದುದು 2100ರ ಹೊತ್ತಿಗೆ 57.8 ಕೋಟಿಗೆ ಇಳಿಕೆಯಾಗಲಿದೆ. ನೆರೆಯ ಚೀನಾದಲ್ಲಿ 2017ರಲ್ಲಿ 95 ಕೋಟಿ­ಯಷ್ಟಿದ್ದ ದುಡಿಯುವ ಸಾಮರ್ಥ್ಯದ ವಯಸ್ಕರ ಪ್ರಮಾಣ 2100ರವರೆಗೆ 35.7 ಕೋಟಿಗೆ ಕುಸಿಯಲಿದೆ.

ಅಂದರೆ ಭಾರತ ಹಾಗೂ ಚೀನಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ಹೆಚ್ಚಲಿದ್ದು ಆರ್ಥಿಕತೆಗೆ ಧಕ್ಕೆಯಾಗಲಿದೆ. ಜಾಗತಿಕವಾಗಿ ಪ್ರಭಾವ ಕಡಿಮೆಯಾದ ರಾಷ್ಟ್ರಗಳ ಪಟ್ಟಿಗೆ ಇವು ಸೇರ್ಪಡೆಯಾಗಲಿವೆ ಎಂದು ಲ್ಯಾನ್‌ಸೆಟ್‌ ವೈದ್ಯಕೀಯ ಜರ್ನಲ್‌ ವರದಿ ಮಾಡಿದೆ. ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಯದ ವಿಜ್ಞಾನಿ ಕ್ರಿಸ್ಟೋಫರ್‌ ಮುರ್ರೆ ಅವರ ನೇತೃತ್ವದಲ್ಲಿ ಸಂಶೋಧಕರ ತಂಡ ಈ ಸಂಬಂಧ ಅಧ್ಯಯನ ನಡೆಸಿದೆ.

ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು!

ಸಾವಿನ ಪ್ರಮಾಣ, ವಲಸೆ ಗತಿ ಹಾಗೂ ಸಂತಾನೋತ್ಪತ್ತಿ ಸಮೃದ್ಧತೆಯ ಅಂಕಿ-ಅಂಶಗಳನ್ನು ಆಧರಿಸಿ ಸಂಶೋಧಕರು ಭಾರತದ ಭವಿಷ್ಯದ ಜನಸಂಖ್ಯೆಯ ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ಸಾಂಕ್ರಾಮಿಕದಿಂದ ಜಗತ್ತಿನಲ್ಲಿ ಸಂಭವಿಸಿರುವ ಸಾವಿನ ಪ್ರಮಾಣವನ್ನು ಕೂಡ ಭವಿಷ್ಯದ ಜನಸಂಖ್ಯೆ ಅಂದಾಜಿಸಲು ಸಂಶೋಧಕರು ಪರಿಗಣಿಸಿದ್ದಾರೆ.

ವಿಶ್ವ ಜನಸಂಖ್ಯಾ ದಿನ 2020: ಕುಟುಂಬ ಯೋಜನೆಯಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳು

ಪ್ರಾದೇಶಿಕ ಮತ್ತು ಜಾಗತಿಕ ಆರೋಗ್ಯ ವ್ಯವಸ್ಥೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವರದಿಯಲ್ಲಿನ ಅಂಕಿ-ಅಂಶಗಳ ವ್ಯತ್ಯಾಸ ಹೆಚ್ಚಿನ ಪ್ರಮಾಣದಲ್ಲಿ ಇರಲಾರದು ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ