ಆ್ಯಪ್ನಗರ

ಇಂಡಿಗೋ ದುರ್ವರ್ತನೆ: ವರದಿ ಕೇಳಿದ ಸಚಿವರು

ಇಂಡಿಗೋ ಸಿಬ್ಬಂದಿಯ ನಡೆಯನ್ನು ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿರಾಜು ತೀವ್ರವಾಗಿ ಖಂಡಿಸಿದ್ದಾರೆ.

Vijaya Karnataka 8 Nov 2017, 9:58 pm

ಹೊಸದಿಲ್ಲಿ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಇಂಡಿಗೋ ಸಿಬ್ಬಂದಿಯ ನಡೆಯನ್ನು ಬುಧವಾರ ತೀವ್ರವಾಗಿ ಖಂಡಿಸಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿರಾಜು, ನಾಗರಿಕ ಸಮಾಜದಲ್ಲಿ ಹೊಡೆದಾಟವನ್ನು ಒಪ್ಪಲಾಗುವುದಿಲ್ಲ ಎಂದಿದ್ದಾರೆ.

Vijaya Karnataka Web indigo passenger assault aviation minister seeks report
ಇಂಡಿಗೋ ದುರ್ವರ್ತನೆ: ವರದಿ ಕೇಳಿದ ಸಚಿವರು


ಘಟನೆ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ವಿಮಾನಯಾನ ನಿಯಂತ್ರಕ ಡಿಜಿಸಿಎಗೆ ಆದೇಶಿಸಿದ್ದಾರೆ.

ಕಳೆದ ತಿಂಗಳು 15ರಂದು ದಿಲ್ಲಿ ವಿಮಾನನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ, ವಿಮಾನವಿಳಿದು ಬಸ್‌ ಹತ್ತುತ್ತಿದ್ದ ಹಿರಿಯ ಪ್ರಯಾಣಿಕ ರಾಜೀವ್‌ ಕಟಿಯಾಲ್‌ ಎಂಬವರನ್ನು ಎಳೆದಾಡಿದ ಏರ್‌ಲೈನ್ಸ್‌ ಸಿಬ್ಬಂದಿ, ಆನಂತರ ಅವರ ಮೇಲೆ ಹಲ್ಲೆ ಮಾಡಿದ್ದರು. ಈ ವಿಡಿಯೋ ಮಂಗಳವಾರ ವೈರಲ್‌ ಆಗುತ್ತಿದ್ದಂತೆಯೇ ನಾಗರಿಕ ವಿಮಾನಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಘಟನೆಯನ್ನು ಖಂಡಿಸಿದ್ದರು.

ಇಂಡಿಗೋ ಈ ಬಗ್ಗೆ ಮಂಗಳವಾರ ಕ್ಷ ಮೆ ಯಾಚಿಸಿದೆ. ಆದರೆ, ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನುವ ಮೂಲಕ ಅವರನ್ನು ಸಮರ್ಥಿಸುವ ಪ್ರಯತ್ನವನ್ನೂ ಮಾಡಿದೆ.

ಘಟನೆ ನಡೆದ ದಿನವೇ ನಾವು ರಾಜೀವ್‌ ಬಳಿ ಕ್ಷ ಮೆ ಯಾಚಿಸಿದ್ದು, ಸಂಬಂದಿಸಿದ ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ. ಆದರೆ, ರಾಜೀವ್‌ ಒಳಿತಿಗಾಗಿಯೇ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದು, ಇದನ್ನು ಅರ್ಥ ಮಾಡಿಕೊಳ್ಳದ ಅವರು ಕೆರಳಿ ಅವಾಚ್ಯ ಮಾತುಗಳನ್ನಾಡಿದರು. ಇದೇ ಮುಂದಿನ ಹೊಡೆದಾಟಕ್ಕೆ ಕಾರಣವಾಯಿತು ಎಂದು ಇಂಡಿಗೋ ನಿರ್ದೇಶಕ ಅದಿತ್ಯಾ ಘೋಷ್‌, ಸಚಿವ ರಾಜುಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

IndiGo passenger assault: Aviation minister seeks report

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ