ಜೈಪುರ: ಇಲ್ಲಿನ ಸಾಂಗಾನೇರ್ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಇಂಡಿಗೊ ವಿಮಾನದ ರೆಕ್ಕೆಯೊಂದು ಏರೋಬ್ರಿಡ್ಜ್ಗೆ ಡಿಕ್ಕಿ ಹೊಡೆದು ವಿಮಾನಕ್ಕೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'6ಇ-962' ಹೆಸರಿನ ವಿಮಾನ ದಿಲ್ಲಿಯಿಂದ ಆಗತಾನೆ ಸಾಂಗಾನೇರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ನಂತರ ನಿಲುಗಡೆ ಪ್ರದೇಶಕ್ಕೆ ತೆರಳುತ್ತಿದ್ದಾಗ ರೆಕ್ಕೆ ಡಿಕ್ಕಿಯಾಗಿದೆ. ವಿಮಾನದಲ್ಲಿ 174 ಪ್ರಯಾಣಿಕರಿದ್ದರು ಎಂದು ವಿಮಾನ ನಿಲ್ದಾಣದ ಹಂಗಾಮಿ ನಿರ್ದೇಶಕ ಎಂ.ಪಿ ಬನ್ಸಾಲ್ ತಿಳಿಸಿದ್ದಾರೆ.
ಘಟನೆ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಆಂತರಿಕ ಸುರಕ್ಷ ತಾ ವಿಭಾಗ ತನಿಖೆ ನಡೆಸುತ್ತಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆ ತಿಳಿಸಿದೆ.
Indigo plane collides with aerobridge at Jaipur airport
JAIPUR: An Indigo aircraft suffered damage to one of its wings when it hit an aerobridge while being marshalled to the parking spot at Sanganer airport here. Officials said no one was injured in the incident.