ಆ್ಯಪ್ನಗರ

ಉದ್ಯಮ 'ನೈತಿಕ ವ್ಯವಹಾರ'ದ ಅಭ್ಯಾಸ ಬೆಳೆಸಿಕೊಳ್ಳಬೇಕು: ಅರುಣ್ ಜೇಟ್ಲಿ

ಬ್ಯಾಂಕುಗಳು ಮತ್ತು ಸಾಲಗಾರರ ನಡುವಣ 'ಅನೈತಿಕ ನಡವಳಿಕೆಗಳು' ಕೊನೆಗೊಳ್ಳಲೇಬೇಕು ಎಂದು ವಿತ್ತಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

Vijaya Karnataka Web 24 Feb 2018, 3:44 pm
ಹೊಸದಿಲ್ಲಿ: ಬ್ಯಾಂಕುಗಳು ಮತ್ತು ಸಾಲಗಾರರ ನಡುವಣ 'ಅನೈತಿಕ ನಡವಳಿಕೆಗಳು' ಕೊನೆಗೊಳ್ಳಲೇಬೇಕು ಎಂದು ವಿತ್ತಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
Vijaya Karnataka Web industry needs to get in habit of doing ethical business jaitley on pnb fraud
ಉದ್ಯಮ 'ನೈತಿಕ ವ್ಯವಹಾರ'ದ ಅಭ್ಯಾಸ ಬೆಳೆಸಿಕೊಳ್ಳಬೇಕು: ಅರುಣ್ ಜೇಟ್ಲಿ


'ಸಾಲ ನೀಡುವವರು ಮತ್ತು ಸಾಲ ಪಡೆಯುವವರ ಮಧ್ಯೆ ಅನೈತಿಕ ನಡವಳಿಕೆಗಳು ಕೊನೆಗೊಳ್ಳಲೇಬೇಕು. ಉದ್ಯಮ ನೈತಿಕ ವ್ಯವಹಾರಗಳನ್ನಷ್ಟೇ ನಡೆಸಬೇಕು' ಎಂದು ಎಕನಾಮಿಕ್ ಟೈಮ್ಸ್‌ ಗ್ಲೋಬಲ್ ಬಿಸಿನೆಸ್‌ ಶೃಂಗಸಭೆ 2018ಯಲ್ಲಿ ಪಾಲ್ಗೊಂಡು ಜೇಟ್ಲಿ ಕರೆ ನೀಡಿದರು.

ಹಗರಣಗಳನ್ನು ತಡೆಯಲು ನಿಯಂತ್ರಕರು ಕೂಡ ಸಮರ್ಪಕವಾಗಿ ಕೆಲಸ ಮಾಡಬೇಕು. ಅವರು ಮತ್ತಷ್ಟು ಜಾಗರೂಕವಾಗಿರಬೇಕು ಎಂದು ಜೇಟ್ಲಿ ನುಡಿದರು.

'ನಿಯಂತ್ರಕರ ಪಾತ್ರ ಅತ್ಯಂತ ಮಹತ್ವದ್ದು. ನಿಯಮಗಳು ಪಾಲನೆಯಾಗಿವೆಯೇ ಇಲ್ಲವೇ ಎಂಬುದನ್ನು ಅಂತಿಮವಾಗಿ ನಿರ್ಧರಿಸುವವರು ಅವರು. ಹೀಗಾಗಿ ಅವರು ಮೂರನೇ ಕಣ್ಣನ್ನೂ ಹೊಂದಿರಬೇಕು. ಅಗತ್ಯವಿದ್ದಾಗ ಅದನ್ನು ತೆರೆಯಲೂಬೇಕು. ದುರದೃಷ್ಟವಶಾತ್‌ ಭಾರತೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಹೊಣೆಗಾರರಾಗುತ್ತಾರೆ; ಆದರೆ ನಿಯಂತ್ರಕರು ತಪ್ಪಿಸಿಕೊಳ್ಳುತ್ತಾರೆ' ಎಂದು ಅವರು ಹೇಳಿದರು.

ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್‌, ಹಗರಣದ ಬಗ್ಗೆ ರಾಜಕೀಯ ವ್ಯವಸ್ಥೆ ಅಥವಾ ಹಣಕಾಸು ಸಚಿವಾಲಯಕ್ಕೆ ಗೊತ್ತೇ ಇರಲಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ ಎಂದರು.

'ಕೇವಲ ನಿಯಂತ್ರಕರನ್ನಷ್ಟೇ ಏಕೆ ದೂಷಿಸುತ್ತೀರಿ? ರಾಜಕೀಯ ವ್ಯವಸ್ಥೆ ಬಗ್ಗೆ ಏನು ಹೇಳುವಿರಿ? ವಿತ್ತಸಚಿವಾಲಯಕ್ಕೆ ಇದೆಲ್ಲ ತಿಳಿದಿರಲೇಬೇಕಲ್ಲವೆ? ಈ ಬ್ಯಾಂಕುಗಳಲ್ಲಿ ಸರಕಾರದ ಪ್ರತಿನಿಧಿಗಳಾಗಿ ಕೆಲಸ ಮಾಡುವವರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ನಿಯಂತ್ರಕರೇ ಹೊಣೆಗಾರರು ಎಂದು ಹೇಳುವುದು ನುಣುಚಿಕೊಳ್ಳುವ ಪ್ರಯತ್ನವಷ್ಟೆ' ಎಂದು ಕಾಂಗ್ರೆಸ್‌ ನಾಯಕ ನುಡಿದರು.

ಆಭರಣ ಉದ್ಯಮಿ ನೀರವ್ ಮೋದಿ ನಡೆಸಿದ ಪಿಎನ್‌ಬಿ ಹಗರಣದಂತಹ ಘಟನೆಗಳು ದೇಶದಲ್ಲಿ 'ಸುಗಮ ವ್ಯವಹಾರದ' (Ease of doing business) ಕಲ್ಪನೆಯನ್ನು ಘಾಸಿಗೊಳಿಸುತ್ತವೆ ಎಂದು ವಿತ್ತಸಚಿವರು ನುಡಿದರು.

ಈ ಮೊದಲು, ಸಾರ್ವಜನಿಕರ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಜೇಟ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ