ಆ್ಯಪ್ನಗರ

ಚೆನ್ನೈ: ಇನ್ಫೋಸಿಸ್‌ ಕಚೇರಿ ಶೌಚಾಲಯದಲ್ಲಿ ಟೆಕ್ಕಿಯ ನಗ್ನ ಮೃತದೇಹ ಪತ್ತೆ

ಇನ್ಫೋಸಿಸ್‌ ಉದ್ಯೋಗಿಯೊಬ್ಬರ ಮೃತದೇಹ ಚೆನ್ನೈನ ಮಹೀಂದ್ರಾ ವರ್ಲ್ಡ್‌ ಸಿಟಿಯಲ್ಲಿರುವ ಅವರ ಕಚೇರಿಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 31 May 2017, 4:38 pm
ಚೆನ್ನೈ: ಇನ್ಫೋಸಿಸ್‌ ಉದ್ಯೋಗಿಯೊಬ್ಬರ ಮೃತದೇಹ ಚೆನ್ನೈನ ಮಹೀಂದ್ರಾ ವರ್ಲ್ಡ್‌ ಸಿಟಿಯಲ್ಲಿರುವ ಅವರ ಕಚೇರಿಯ ಶೌಚಾಲಯದಲ್ಲಿ ಪತ್ತೆಯಾಗಿದೆ.
Vijaya Karnataka Web infosys employee found dead in chennai
ಚೆನ್ನೈ: ಇನ್ಫೋಸಿಸ್‌ ಕಚೇರಿ ಶೌಚಾಲಯದಲ್ಲಿ ಟೆಕ್ಕಿಯ ನಗ್ನ ಮೃತದೇಹ ಪತ್ತೆ


ಮೃತಪಟ್ಟ ವ್ಯಕ್ತಿಯನ್ನು ವಿಲ್ಲುಪುರಂ ಜಿಲ್ಲೆಯ ತಿಂಡಿವನಂ ಮೂಲದ ಇಳಯರಾಜಾ ಎಂದು ಗುರುತಿಸಲಾಗಿದೆ. ಅವರು ಪ್ರತಿದಿನ ಉದ್ಯೋಗಕ್ಕಾಗಿ ತಿಂಡಿವನಂನಿಂದ ಮಹೀಂದ್ರಾ ವರ್ಲ್ಡ್‌ ಸಿಟಿಗೆ ಪ್ರಯಾಣ ಮಾಡುತ್ತಿದ್ದರು.

ಸೋಮವಾರ ಕರ್ತವ್ಯ ಮುಗಿಸಿ ಅವರು ಮನೆಗೆ ಮರಳಲಿಲ್ಲ. ಅವರ ಫೋನ್ ಕೂಡ ಸ್ವಿಚ್‌ ಆಫ್‌ ಆಗಿತ್ತು. ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿಪೊಲೀಸರಿಗೆ ಮಂಗಳವಾರ ದೂರು ನೀಡಿದ್ದರು.

ಮಂಗಳವಾರ ರಾತ್ರಿ ಕಚೇರಿಯ ಶೌಚಾಲಯದೊಳಗೆ ಅವರ ನಗ್ನ ದೇಹ ಪತ್ತೆಯಾಯಿತು.

ಇದೊಂದು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾವಿನ ಕಾರಣ ತಿಳಿಯಲು ಪೋಸ್ಟ್‌ ಮಾರ್ಟಂ ವರದಿಗಾಗಿ ಕಾಯಲಾಗುತ್ತಿದೆ.

ಇಳಯರಾಜಾ ಅವರ ಮೊಬೈಲ್ ಫೋನ್ ನಾಪತ್ತೆಯಾಗಿದೆ. ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Infosys employee found dead in Chennai

CHENNAI: The body of a 30-year-old Infosys male employee was found in the rest room of his office at Mahindra World City on the outskirts of Chennai on Tuesday night.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ