ಆ್ಯಪ್ನಗರ

ಪಾಕ್‌ ಪಡೆಗಳ ಗುಂಡೇಟಿಗೆ ಬಾಲಕ ಬಲಿ

ಗಡಿ ನಿಯಂತ್ರಣ ರೇಖೆಯ ಬಳಿಯ ಶಹಪುರ್‌ ಸೆಕ್ಟಾರ್‌ನಲ್ಲಿ ಭಾನುವಾರ ತಡರಾತ್ರಿ ಸುಮಾರು 1.25ಕ್ಕೆ ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ಶೆಲ್‌ ದಾಳಿ ನಡೆಸಿದೆ.

Agencies 30 Jul 2019, 5:00 am
ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಪಾಕಿಸ್ತನ ಪಡೆಗಳ ಕದನ ವಿರಾಮ ಉಲ್ಲಂಘನೆಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಬಾಲಕನ ತಾಯಿ ಫಾತಿಮಾ ಜಾನ್‌ (35) ಮತ್ತು ತಂದೆ ಮೊಹಮ್ಮದ್‌ ಆರಿಫ್‌ (40) ತೀವ್ರವಾಗಿ ಗಾಯಗೊಂಡಿದ್ದಾರೆ.
Vijaya Karnataka Web injured in pak firing 10 day old baby dies in poonch
ಪಾಕ್‌ ಪಡೆಗಳ ಗುಂಡೇಟಿಗೆ ಬಾಲಕ ಬಲಿ


ಗಡಿ ನಿಯಂತ್ರಣ ರೇಖೆಯ ಬಳಿಯ ಶಹಪುರ್‌ ಸೆಕ್ಟಾರ್‌ನಲ್ಲಿ ಭಾನುವಾರ ತಡರಾತ್ರಿ ಸುಮಾರು 1.25ಕ್ಕೆ ಪಾಕಿಸ್ತಾನ ಸೇನೆ ಅಪ್ರಚೋದಿತವಾಗಿ ಶೆಲ್‌ ದಾಳಿ ನಡೆಸಿದೆ. ಈ ವೇಳೆ ಬಾಲಕ ಹಾಗೂ ಆತನ ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರನ್ನೂ ಪೂಂಚ್‌ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ, ತೀವ್ರ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ. ಪೋಷಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸತತ ಎರಡನೇ ದಿನವೂ ಪಾಕ್‌ ಪಡೆಗಳು ಅಪ್ರಚೋದಿತ ದಾಳಿ ಮುಂದುವರಿದಿತ್ತು, ಭಾರತೀಯ ಸೇನೆ ದಿಟ್ಟ ತಿರುಗೇಟು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ರಾಯಭಾರಿಗೆ ಪಾಕ್‌ ಸಮನ್ಸ್‌
ಭಾರತದ ಗಡಿಯತ್ತ ಅಪ್ರಚೋದಿತ ದಾಳಿ ನಡೆಸಿರುವ ಪಾಕಿಸ್ತಾನ, ತಪ್ಪನ್ನು ಮುಚ್ಚಿಕೊಳ್ಳಲು ಎಂದಿನಂತೆ ನಾಟಕವಾಡಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಯನ್ನು ಕಚೇರಿಗೆ ಕರೆಸಿಕೊಂಡು ಅಲ್ಲಿನ ವಿದೇಶಾಂಗ ಸಚಿವಾಲಯ ಭಾರತ ಕದನ ವಿರಾಮ ಉಲ್ಲಂಘಿಸಿದೆ ಎಂದು ಆಕ್ಷೇಪಣೆ ಎತ್ತಿದೆ. ಈ ಸಂಬಂಧ ಪ್ರತಿಭಟನೆ ದಾಖಲಿಸಿದೆ. ಭಾರತೀಯ ಸೇನಾ ಪಡೆಯೇ ಮೊದಲು ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘಿಸಿದೆ ಎಂದು ಪಾಕ್‌ ಆರೋಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ