ಆ್ಯಪ್ನಗರ

ಚಿದು ನ್ಯಾಯಾಂಗ ಬಂಧನ ಅವಧಿ ಅ.3ರವರೆಗೆ ವಿಸ್ತರಣೆ

ಚಿದಂಬರಂ ಅವರ 14 ದಿನಗಳ ನ್ಯಾಯಾಂಗ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿಅವರನ್ನು ದಿಲ್ಲಿವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

PTI 20 Sep 2019, 5:00 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿತಿಹಾರ್‌ ಜೈಲು ಸೇರಿರುವ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ದಿಲ್ಲಿನ್ಯಾಯಾಲಯ ಅಕ್ಟೋಬರ್‌ 3ರವರೆಗೆ ವಿಸ್ತರಿಸಿದೆ.
Vijaya Karnataka Web chidu


ಚಿದಂಬರಂ ಅವರ 14 ದಿನಗಳ ನ್ಯಾಯಾಂಗ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿಅವರನ್ನು ದಿಲ್ಲಿವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಚಿದಂಬರಂ ತನಿಖೆಗೆ ಸಹಕರಿಸುತ್ತಿಲ್ಲದ ಕಾರಣ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಿಸುವಂತೆ ತನಿಖಾ ಸಂಸ್ಥೆ ಸಿಬಿಐ ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌ ಅವರು ನ್ಯಾಯಾಂಗ ಬಂಧನದ ಅವಧಿಯನ್ನು ಅ.3ರವರೆಗೆ ವಿಸ್ತರಿಸಿದರು.

ಚಿದಂಬರಂ ಪರ ವಕೀಲ ಕಪಿಲ್‌ ಸಿಬಲ್‌ ಅವರು ಸಿಬಿಐ ಮನವಿಗೆ ವಿರೋಧ ವ್ಯಕ್ತಪಡಿಸಿ, ನ್ಯಾಯಾಂಗ ಬಂಧನ ಅವಧಿ ವಿಸ್ತರಿಸದಂತೆ ಕೋರಿಕೊಂಡರು. ತಮ್ಮ ಕಕ್ಷಿದಾರರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸಬೇಕೆಂದೂ ಮನವಿ ಮಾಡಿದರು. ಮನವಿ ಪುರಸ್ಕರಿದ ನ್ಯಾಯಾಲಯ ವೈದ್ಯಕೀಯ ತಪಾಸಣೆಗೆ ಅನುಮತಿ ನೀಡಿದೆ. ಸೆಪ್ಟೆಂಬರ್‌ 5ರಿಂದ ಚಿದಂಬರಂ ತಿಹಾರ್‌ ಜೈಲಿನಲ್ಲಿದ್ದಾರೆ.

ಬೆನ್ನುನೋವು ಬಂದಿದೆ: ''ತಿಹಾರ್‌ ಜೈಲಿನಲ್ಲಿರುವ ನನ್ನ ಕೋಣೆಯ ಹೊರಗಿದ್ದ ಕುರ್ಚಿಯನ್ನು ಕಳೆದ ಮೂರು ದಿನಗಳಿಂದ ತೆಗೆದುಹಾಕಲಾಗಿದೆ. ಬೆಳಗಿನ ಹೊತ್ತು ನಾನು ಅಲ್ಲಿಬಂದು ಕುಳಿತುಕೊಳ್ಳುತ್ತಿದ್ದೆ. ಅದಕ್ಕೆ ಈಗ ಅವಕಾಶ ಇಲ್ಲದಂತಾಗಿದೆ. ಇಷ್ಟು ಸಾಲದೆಂಬಂತೆ ಈಗ ನನ್ನ ಕೋಣೆಯಲ್ಲಿದ್ದ ದಿಂಬನ್ನೂ ಕೊಂಡೊಯ್ಯಲಾಗಿದೆ. ಇದರಿಂದಾಗಿ ಬೆನ್ನುನೋವು ಶುರುವಾಗಿದೆ,'' ಎಂದು ಚಿದಂಬರಂ ಅವರು ಕೋರ್ಟ್‌ನಲ್ಲಿಅಲವತ್ತುಕೊಂಡಿದ್ದಾರೆ. ಬಿಡುಗಡೆ ಕೋರಿ ತಮ್ಮ ಪರ ಕಪಿಲ್‌ ಸಿಬಲ್‌, ಅಭಿಷೇಕ್‌ ಮನುಸಿಂಘಿಘ್ವಿ ಕೋರ್ಟ್‌ನಲ್ಲಿವಾದ ಮಂಡಿಸುತ್ತಿದ್ದ ವೇಳೆ ದಿಢೀರ್‌ ಮಧ್ಯ ಪ್ರವೇಶಿಸಿದ ಚಿದಂಬರಂ ತಮ್ಮ ನೋವು ತೋಡಿಕೊಂಡಿದ್ದಾರೆ. ಆಗ ಸಿಬಿಐ ಪರ ವಕೀಲ ತುಷಾರ್‌ ಮೆಹ್ತಾ ಅವರು, ''ಇದೊಂದು ಸಣ್ಣ ವಿಷಯ. ಮೊದಲಿನಿಂದಲೂ ಅವರ ರೂಮಿನಲ್ಲಿಕುರ್ಚಿ ಇರಲಿಲ್ಲ. ವಿನಾಃ ಕಾರಣ ದೊಡ್ಡದು ಮಾಡಲಾಗಿದೆ,'' ಎಂದು ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ