ಆ್ಯಪ್ನಗರ

ಅಕ್ಟೋಬರ್ 3 ರವರೆಗೆ ಚಿದಂಬರಂ ನ್ಯಾಯಾಂಗ ಬಂಧನ ಮುಂದುವರಿಕೆ

ಐಎನ್‌ಎಕ್ಷ್ ಮೀಡಿಯಾ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಅಕ್ಟೋಬರ್ 3 ರವರೆಗೆ ನ್ಯಾಯಾಂಗ ಬಂಧನ ಮುಂದುವರಿದಿದೆ. ದೆಹಲಿ ವಿಶೇಷ ನ್ಯಾಯಾಲಯ ಬಂಧನ ವಿಸ್ತರಣೆಗೊಳಿಸಿ ಆದೇಶ ನೀಡಿದ್ದು ತಿಹಾರ್ ಜೈಲಿನಲ್ಲಿ ಇನ್ನೂ 14 ದಿನಗಳ ಕಾಲ ಚಿದಂಬರಂ ಇರಬೇಕಾಗುತ್ತದೆ.

Agencies 19 Sep 2019, 5:09 pm
ಹೊಸದೆಹಲಿ: ಐಎನ್‌ಎಕ್ಷ್ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ನ್ಯಾಯಾಂಗ ಬಂಧನ ಅವಧಿ ಅಕ್ಟೋಬರ್ 3 ರವರೆಗೆ ವಿಸ್ತರಣೆಗೊಂಡಿದೆ. ಚಿದಂಬರಂ 14 ದಿನಗಳ ನ್ಯಾಯಾಂಗ ಅವಧಿ ಸೆ. 19 ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
Vijaya Karnataka Web p chidambaram


ನ್ಯಾಯಾಂಗ ಬಂಧನ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಿಸುವಂತೆ ತನಿಖಾ ಸಂಸ್ಥೆ ಸಿಬಿಐ, ವಿಶೇಷ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿತ್ತು. ಸಿಬಿಐ ಮನವಿ ಪುರಸ್ಕರಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಬಂಧನ ಅವಧಿಯನ್ನು ಅಕ್ಟೋಬರ್ 3 ರವರೆಗೆ ವಿಸ್ತರಿಸಿದ್ದಾರೆ.

ಸಿಬಿಐ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಹಾಜರಾಗಿದ್ದು ಚಿದಂಬರಂ ತನಿಖೆಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡದೇ ಇರುವುದರಿಂದ ಬಂಧನ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು. ಪಿ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ನ್ಯಾಯಾಂಗ ಅವಧಿ ವಿಸ್ತರಣೆಗಾಗಿ ತನಿಖಾ ಸಂಸ್ಥೆ ಮನವಿಗೆ ವಿರೋಧ ವ್ಯಕ್ತಪಡಿಸಿದರು.

ಜೊತೆಗೆ ಚಿದಂಬರಂ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಮನವಿ ಪುರಸ್ಕರಿದ ನ್ಯಾಯಾಲಯ ವೈದ್ಯಕೀಯ ತಪಾಸಣೆಗೆ ಅನುಮತಿ ನೀಡಿದೆ.

73 ವರ್ಷದ ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕಸ್ಟಡಿಗೆ ಕಳುಹಿಸಿದ ಸಮಯದಲ್ಲಿ ಅವರು ದೇಹದ ತೂಕವನ್ನು ಕಳೆದುಕೊಂಡಿದ್ದರು.

ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ: ಡಿಕೆಶಿ ಹೆಸರಲ್ಲಿ 24 ಆಸ್ತಿ, ಡಿಕೆ ಸುರೇಶ್‌ ಹೆಸರಲ್ಲಿ 27 ಆಸ್ತಿ

ಚಿದಂಬರಂ ಪರವಾಗಿ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ಅಭಿಶೇಕ್ ಮನುಸಿಂಘ್ವಿ ಜೈಲಿನಲ್ಲಿ ಚಿದಂಬರಂ ಅವರಿಗೆ ಕುಳಿತುಕೊಳ್ಳಲು ನೀಡಲಾಗಿದ್ದ ಕುರ್ಚಿಯನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಇದರಿಂದ ಹಾಸಿಗೆಯಲ್ಲೇ ಕುಳಿತುಕೊಳ್ಳಬೇಕಾಗಿದೆ. ತಲೆದಿಂಬನ್ನು ಕೂಡಾ ಅವರಿಗೆ ನೀಡಲಾಗಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಐಎನ್‌ಎಕ್ಷ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಆಗಸ್ಟ್ 2 ರಂದು ರಾತ್ರಿ ಸಿಬಿಐ ಬಂಧಿಸಿತ್ತು. ಅವರ ಪುತ್ರ ಕಾರ್ತಿ ಅವರನ್ನು ಕೂಡಾ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನಕ್ಕೆ ಒಳಪಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ