ಆ್ಯಪ್ನಗರ

ಲಾಲು ಮಧ್ಯಾಂತರ ಜಾಮೀನು ವಿಸ್ತರಣೆ

ಲಾಲು ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‌ ಅವರಿಗೂ ಜಾಮೀನು ಅವಧಿಯನ್ನು ಜ.28ರವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ.

Vijaya Karnataka 20 Jan 2019, 5:00 am
ಹೊಸದಿಲ್ಲಿ: ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರಿಗೆ ನೀಡಲಾಗಿದ್ದ ಮಧ್ಯಾಂತರ ಜಾಮೀನು ಅವಧಿಯನ್ನು ದಿಲ್ಲಿ ನ್ಯಾಯಾಲಯ ಜ.28ರವರೆಗೆ ವಿಸ್ತರಿಸಿದೆ.
Vijaya Karnataka Web lalu


ಇದೇ ಪ್ರಕರಣದಲ್ಲಿ ಲಾಲು ಅವರ ಪತ್ನಿ ರಾಬ್ಡಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‌ ಅವರಿಗೂ ಜಾಮೀನು ಅವಧಿಯನ್ನು ಜ.28ರವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ನೀಡಿದೆ. ಅದೇ ದಿನ ಲಾಲು ಹಾಗೂ ಇತರರ ಜಾಮೀನು ಅರ್ಜಿಯ ಕುರಿತಂತೆ ತನ್ನ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?: ಲಾಲು ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಐಆರ್‌ಸಿಟಿಸಿಗೆ ಸೇರಿದ ಪುರಿ ಮತ್ತು ರಾಂಚಿಯಲ್ಲಿರುವ ಎರಡು ಬಿಎನ್‌ಆರ್‌ ಹೋಟೆಲ್‌ಗಳ ನಿರ್ವಹಣೆ ಗುತ್ತಿಗೆಯನ್ನು ನಿಯಮ ಮೀರಿ ಪಟನಾ ಮೂಲದ ಖಾಸಗಿ ಸುಜಾತಾ ಹೋಟೆಲ್ಸ್‌ ಕಂಪನಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸುಜಾತಾ ಹೋಟೆಲ್ಸ್‌ ಕಂಪನಿ ಲಂಚದ ರೂಪದಲ್ಲಿ ಲಾಲು ಕುಟುಂಬ ಸದಸ್ಯರಿಗೆ ಪಟನಾ ಹೊರವಲಯದಲ್ಲಿ ಭಾರಿ ಬೆಲೆ ಬಾಳುವ ವಾಣಿಜ್ಯ ಭೂಮಿಯನ್ನು ಅತ್ಯಲ್ಪ ಮೊತ್ತಕ್ಕೆ ಮಾರಾಟ ಮಾಡಿತ್ತು. ನಂತರ ಲಾಲು ಕುಟುಂಬ ಇದನ್ನು ಡಿಲೈಟ್‌ ಮಾರ್ಕೆಟಿಂಗ್‌ ಮೂಲಕ ಭಾರಿ ಮೊತ್ತಕ್ಕೆ ಮಾರಾಟ ಮಾಡಿತ್ತು. ಈ ಕುರಿತು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರತ್ಯೇಕ ತನಿಖೆ ನಡೆಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ