ಆ್ಯಪ್ನಗರ

ತಿಲಕವಿಟ್ಟ ಬಾಲೆಗೆ ಮದ್ರಸಾದಿಂದ ಗೇಟ್‌ಪಾಸ್

ಹಣೆಯಲ್ಲಿ 'ಗಂಧದ ಬಿಂದಿ' ಇಟ್ಟುಕೊಂಡ ಪರಿಣಾಮ ಉತ್ತರ ಕೇರಳದ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಮದರಸಾದಿಂದ ಹೊರಗಟ್ಟಿದ ಘಟನೆ ವರದಿಯಾಗಿದೆ. ​

Vijaya Karnataka 8 Jul 2018, 10:54 am
ತಿರುವನಂತಪುರಂ: ಹಣೆಯಲ್ಲಿ 'ಗಂಧದ ಬಿಂದಿ' ಇಟ್ಟುಕೊಂಡ ಪರಿಣಾಮ ಉತ್ತರ ಕೇರಳದ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಮದರಸಾದಿಂದ ಹೊರಗಟ್ಟಿದ ಘಟನೆ ವರದಿಯಾಗಿದೆ.
Vijaya Karnataka Web bindi


ಕಿರುಚಿತ್ರವೊಂದರಲ್ಲಿ ನಟಿಸುತ್ತಿರುವ ವಿದ್ಯಾರ್ಥಿನಿ, ಪಾತ್ರಕ್ಕೆ ಅಗತ್ಯವಿದ್ದ ಕಾರಣ ಹಣೆಯಲ್ಲಿ ಬಿಂದಿ ಇಟ್ಟುಕೊಂಡಿದ್ದಳು. ಮದರಸಾದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿನಿಯ ತಂದೆ ಉಮ್ಮರ್‌ ಮಲಾಯಿಲ್‌, 'ಆಕೆ ಕಲ್ಲೆಸತಕ್ಕೆ ಗುರಿಯಾಗದಿದ್ದುದು ನಮ್ಮ ಅದೃಷ್ಟ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಉಮ್ಮರ್‌ ಅವರ ಪೋಸ್ಟಿಂಗ್‌ಗೆ ಅನೇಕರು ಬೆಂಬಲ ಸೂಚಿಸಿದರೆ, ಇನ್ನು ಕೆಲವರು 'ಬಿಂದಿ ಇಟ್ಟುಕೊಳ್ಳುವುದು ಇಸ್ಲಾಂ ಹಾಗೂ ಶರಿಯತ್‌ ಕಾನೂನುಗಳಿಗೆ ವಿರುದ್ಧವಾಗಿರುವುದರಿಂದ ಆಕೆ ವಿರುದ್ಧ ಮದರಸಾ ಕ್ರಮ ತೆಗೆದುಕೊಂಡಿದ್ದು ತಪ್ಪಲ್ಲ' ಎಂದು ತರ್ಕ ಮಂಡಿಸಿದ್ದಾರೆ.

10 ವರ್ಷದ ತಮ್ಮ ಮಗಳು ವಿದ್ಯಾಭ್ಯಾಸದಲ್ಲಿ ಚುರುಕಾಗಿರುವುದರ ಜತೆಗೆ ನೃತ್ಯ, ಹಾಡುಗಾರಿಕೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾಳೆ. ಶಾಲೆ ಮತ್ತು ಮದರಸಾ ಮಟ್ಟದ ಸ್ಪರ್ಧೆಗಳಲ್ಲಿ ಅನೇಕ ಬಹುಮಾನ ಗಿಟ್ಟಿಸಿದ್ದಾಳೆ ಎಂದೂ ಪೇಸ್‌ಬುಕ್‌ನಲ್ಲಿ ಉಮ್ಮರ್‌ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ