ಆ್ಯಪ್ನಗರ

ಇಶ್ರತ್ ಪ್ರಕರಣ ಕುರಿತ ಪಿಐಎಲ್ ವಜಾ

ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ವಜಾಗೊಂಡಿರುವ ಡಿಐಜಿ ವಂಜಾರಾ ಸೇರಿದಂತೆ ಗುಜರಾತ್‌ನ ಪೊಲೀಸರನ್ನು ದೋಷಮುಕ್ತಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಏಜೆನ್ಸೀಸ್ 12 Mar 2016, 4:03 am
ಹೊಸದಿಲ್ಲಿ: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ವಜಾಗೊಂಡಿರುವ ಡಿಐಜಿ ವಂಜಾರಾ ಸೇರಿದಂತೆ ಗುಜರಾತ್‌ನ ಪೊಲೀಸರನ್ನು ದೋಷಮುಕ್ತಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
Vijaya Karnataka Web ishrat case pil rejected
ಇಶ್ರತ್ ಪ್ರಕರಣ ಕುರಿತ ಪಿಐಎಲ್ ವಜಾ


ಇಶ್ರತ್ ಜಹಾನ್ ಉಗ್ರೆ ಎಂದು ಮುಂಬಯಿ ದಾಳಿಯ ಸಂಚುಕೋರ ಡೇವಿಡ್ ಹೆಡ್ಲಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರನ್ನು ದೋಷಮುಕ್ತಗೊಳಿಸಿ ಅವರ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ಕೈಬಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಪಿ ಸಿ ಘೋಷ್ ಮತ್ತು ಅಮಿತವ ರಾಯ್ ಅವರನ್ನೊಳಗೊಂಡ ಪೀಠವು ಈ ಸಂಬಂಧ ಹೈ ಕೋರ್ಟ್ ಮೊರೆ ಹೋಗುವಂತೆ ಸೂಚಿಸಿತು.

ಆದಾಗಿಯೂ ಅರ್ಜಿ ಮಾನ್ಯವಲ್ಲ ಎಂದು ಪರಿಗಣಿಸಿ ವಜಾಗೊಳಿಸುತ್ತಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.

‘ಈ ಪ್ರಕರಣದಲ್ಲಿ ಅಮಾಯಕರಿಗೆ ಶಿಕ್ಷೆಯಾಗಿದೆ ಎಂದೆನಿಸಿದರೆ ಸಂಬಂಧಪಟ್ಟ ಕೋರ್ಟ್ ಮೊರೆ ಹೋಗಬೇಕು. ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕುವುದು ಸರಿಯಲ್ಲ,’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಸುಪ್ರೀಂ ಪೀಠವು ನೀಡಿರುವ ಈ ಆದೇಶವು ಸೇವೆಯಿಂದ ವಜಾಗೊಂಡಿರುವ ವಂಜಾರಾ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳಿಗೆ ವರದಾನವಾಗಲಿದೆ.

2014ರಲ್ಲಿ ನಡೆದಿದ್ದ ಈ ಪ್ರಕರಣವು ನಕಲಿ ಎನ್‌ಕೌಂಟರ್ ಎಂದು ಪರಿಗಣಿಸಿ ಗುಜರಾತ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಮುಂಬಯಿ ದಾಳಿ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಡೇವಿಡ್ ಹೆಡ್ಲಿ ಅಮೆರಿಕದ ಗೌಪ್ಯ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ. ಇಶ್ರತ್ ಜಹಾನ್ ಲಷ್ಕರೆ ಸಂಘಟನೆಗೆ ಸೇರಿದ್ದಳು. ಈಕೆ ಆತ್ಮಾಹುತಿ ಬಾಂಬರ್ ಪಡೆಯಲ್ಲಿದ್ದಳು ಎಂದು ಹೆಡ್ಲಿ ಒಪ್ಪಿಕೊಂಡಿದ್ದ.

ಕಾಗಕ್ಕ ಗೂಬಕ್ಕನ ಕತೆ: ಕಾಂಗ್ರೆಸ್

ಇಶ್ರತ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ವಿನಾಕಾರಣ ಸಿಲುಕಿಸುವ ಮೂಲಕ ಕೇಂದ್ರ ಸರಕಾರವು ಕಾಗಕ್ಕನ ಗೂಬಕ್ಕನ ಕತೆ ಹೆಣೆಯುತ್ತಿದೆ ಎಂದು ಸಂಸತ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಆರೋಪಿಸಿದೆ.

ಇಶ್ರತ್ ಜಹಾನ್ ಕುರಿತ ಚರ್ಚೆಗೆ ಸ್ಪೀಕರ್ ಅವಕಾಶ ನೀಡದಿದ್ದಾಗೆ ಸಿಟ್ಟಿಗೆದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದೊಂದು ಬೃಹತ್ ಅನ್ಯಾಯ ಎಂದು ಆರೋಪಿಸಿದರು. ಅಲ್ಲದೆ ಸಾಮೂಹಿಕವಾಗಿ ಸಭಾತ್ಯಾಗ ನಡೆಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ