ಆ್ಯಪ್ನಗರ

ಇಸ್ರೇಲ್‌ ಪ್ರಧಾನಿ ನೆತನ್ಯಾಹು ಪತ್ನಿಗೆ ಶಿಕ್ಷೆ

ಪ್ರಧಾನಿ ಕಚೇರಿಯಲ್ಲಿ ಪ್ರಧಾನ ಬಾಣಸಿಗ ಸಹಿತ ಅಡುಗೆ ವ್ಯವಸ್ಥೆ ಇದ್ದರೂ ಹೊರಗಿನಿಂದ ಊಟ ತರಿಸಿಕೊಂಡು ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೇ ಅವರು ಮಾಡಿರುವ ತಪ್ಪು!

Agencies 17 Jun 2019, 5:00 am
ಜೆರುಸಲೇಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಪತ್ನಿ ಸಾರಾ ನೆತನ್ಯಾಹು ಅವರನ್ನು ಇಲ್ಲಿನ ಕೋರ್ಟ್‌ ತಪ್ಪಿತಸ್ಥರೆಂದು ಸಾರಿ ದಂಡ ವಿಧಿಸಿದೆ.
Vijaya Karnataka Web israel pms wife convicted of misusing state funds for meals by court
ಇಸ್ರೇಲ್‌ ಪ್ರಧಾನಿ ನೆತನ್ಯಾಹು ಪತ್ನಿಗೆ ಶಿಕ್ಷೆ


ಪ್ರಧಾನಿ ಕಚೇರಿಯಲ್ಲಿ ಪ್ರಧಾನ ಬಾಣಸಿಗ ಸಹಿತ ಅಡುಗೆ ವ್ಯವಸ್ಥೆ ಇದ್ದರೂ ಹೊರಗಿನಿಂದ ಊಟ ತರಿಸಿಕೊಂಡು ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೇ ಅವರು ಮಾಡಿರುವ ತಪ್ಪು!

2010ರ ಸೆಪ್ಟೆಂಬರ್‌ನಿಂದ 2013ರ ಮಾರ್ಚ್‌ ನಡುವೆ ಈ ರೀತಿ ಹೊರಗಿನಿಂದ ಊಟ ತರಿಸಲಾಗಿದೆ. ಇದು ಅಪರಾಧ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. 2018ರಲ್ಲಿ ಸಾರಾ ಅವರ ಮೇಲೆ ವಂಚನೆ ಮತ್ತು ವಿಶ್ವಾಸದ್ರೋಹದ ಪ್ರಕರಣ ದಾಖಲಾಗಿತ್ತು. ಒಂದು ಹಂತದಲ್ಲಿ ಭ್ರಷ್ಟಾಚಾರದ ಆರೋಪವನ್ನೂ ಮಾಡಲಾಗಿತ್ತು.

ಅಂತಿಮವಾಗಿ ಭ್ರಷ್ಟಾಚಾರದ ಆರೋಪವನ್ನು ರದ್ದುಪಡಿಸಲಾಗಿದೆ. ಊಟದ ವ್ಯವಸ್ಥೆಗಾಗಿ ಖರ್ಚು ಮಾಡಲಾಗಿರುವ 8.72 ಲಕ್ಷ ರೂ.ವನ್ನು ಖಜಾನೆಗೆ ತುಂಬುವಂತೆ ಸೂಚಿಸಲಾಗಿದೆ. ಜತೆಗೆ 1.93 ಲಕ್ಷ ರೂ.ವನ್ನು ದಂಡ ರೂಪದಲ್ಲಿ ಕಟ್ಟಲು ಸೂಚಿಸಲಾಗಿದೆ. ಹಣವನ್ನು 9 ಕಂತುಗಳಲ್ಲಿ ತುಂಬುವುದಾಗಿ ಸಾರಾ ಒಪ್ಪಿಕೊಂಡಿದ್ದಾರೆ.

ರಾಜಕೀಯ ಆಟವೇ?: ಇಸ್ರೇಲ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಬಲಾಢ್ಯವಾಗಿದ್ದು, ಪ್ರಧಾನಿ ನೆತನ್ಯಾಹು ಅವರಿಗೆ ಮುಜುಗರ ಉಂಟು ಮಾಡಲು ಈ ವಿವಾದವನ್ನು ಬಳಸಿಕೊಳ್ಳಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ